ಸ್ತ್ರೀಯರೇ ನಿಮಗೆ ಬರುವ ಈ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.

0
2157

ಹೆಣ್ಣು ಮಗು ಬಾಲ್ಯದಿಂದ ಯವ್ವನಕ್ಕೆ ಕಾಲಿಟ್ಟಾಗ ಕೆಲವು ಸಮಸ್ಯೆಗಳು, ನಂತರ ಯವ್ವನ ದಿಂದ ಮುಪ್ಪಿಗೆ ಹೊರಳಿದಾಗ ಅನೇಕ ಸಮಸ್ಯೆಗಳು ಎದುರಾಗುತ್ತವೆ, ಇಂತಹ ಸಮಸ್ಯೆಗಳನ್ನು ಮನೆಯಲ್ಲಿಯೇ ನಿವಾರಿಸಿಕೊಳ್ಳಬಹುದು, ಕೆಲವು ಸಲಹೆ ಮತ್ತು ಸೂಚನೆಗಳನ್ನು ಸ್ತ್ರೀಯರಿಗಾಗಿ ನೀಡಲಾಗಿದೆ.

ಗರ್ಭಿಣಿ ಸ್ತ್ರೀಯರು ಯಥೇಚ್ಛವಾಗಿ ಬೆಳ್ಳುಳ್ಳಿಯನ್ನು ಬಳಸುವುದರಿಂದ ಪ್ರಸವವಾದ ಮೇಲೆ ಎದೆ ಹಾಲಿನ ಕೊರತೆ ಉಂಟಾಗುವುದಿಲ್ಲ.

ಗರ್ಭಿಣಿಯರ ಆಹಾರದಲ್ಲಿ ವಿಶೇಷವಾದ ಗಮನವನ್ನು ಹರಿಸಬೇಕು, ತಾಜಾ ಹಣ್ಣುಗಳು, ಯಥೇಚ್ಛವಾಗಿ ಹಾಲು, ಹಸಿರು ತರಕಾರಿಗಳು, ಸೊಪ್ಪು, ಬೇಳೆ ಕಾಳುಗಳನ್ನು ತಿನ್ನಬೇಕು, ಹೀಗೆ ಸಮತೋಲನ ಆಹಾರವನ್ನು ಸೇವಿಸುವುದರಿಂದ ತಾಯಿ, ಮಗುವಿನ ಆರೋಗ್ಯವನ್ನು ರಕ್ಷಣೆ ಮಾಡಬಹುದು.

ಜೀರಿಗೆ ಕಷಾಯ ಮಾಡಿಕೊಂಡು ಗರ್ಭಿಣಿಯರು ಕುಡಿದರೆ ಕಷ್ಟವಿಲ್ಲದೆ ಸುಖಕರವಾದ ಪ್ರಸವ ಆಗುವುದು.

ಗರ್ಭಿಣಿಯರಿಗೆ ಹೊಟ್ಟೆಹುರಿ, ಎದೆ ಉರಿ ಇದ್ದರೆ ಅಂತವರು ಸ್ವಲ್ಪ ಶುಂಠಿ ಮತ್ತು ಕೊತ್ತಂಬರಿ ಕಾಳಿನ ಕಷಾಯವನ್ನು ಮಾಡಿ ಬೇಕಾದರೆ ಸ್ವಲ್ಪ ಹಾಲು ಮತ್ತು ಸಕ್ಕರೆ ಹಾಕಿ ಕುಡಿಯಬಹುದು, ಹೀಗೆ ಮಾಡಿದರೆ ರೋಗವು ಶಮನಗೊಳ್ಳುವುದು, ಗರ್ಭಿಣಿಯರು ತುಂಬಾ ನೀರನ್ನು ಕುಡಿಯಬೇಕು, ಕಾರಣ ತಾಯಿ ಮಗುವಿನ ಆಹಾರವನ್ನು ಸೇವಿಸಬೇಕು.

ಕೆಲವು ಬಾರಿ ಹೆಂಗಸರಿಗೆ ಪದೇ ಪದೇ ಗರ್ಭಪಾತ ಆಗುತ್ತದೆ, ಆಗ ತಾವರೆ ಬೇರನ್ನು ಜಜ್ಜಿ ಹಸುವಿನ ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಗರ್ಭಪಾತವಾಗುವುದು ತಪ್ಪಬಹುದು.

ಮುಟ್ಟಿನ ಸಮಯದಲ್ಲಿ ಅಧಿಕವಾದ ರಕ್ತಸ್ರಾವ ಉಂಟಾಗುತ್ತಿದ್ದರೆ, ದಿನಕ್ಕೆ ಮೂರು ಬಾರಿ ಲಿಂಬೆ ಹಣ್ಣಿನ ರಸವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಹತೋಟಿಗೆ ಬರುತ್ತದೆ.

ಹೆರಿಗೆ ನಂತರ ಸ್ತ್ರೀಯರಲ್ಲಿ ನೋವು ಕಾಣಿಸಿಕೊಳ್ಳಬಹುದು, ಅಂತವರು ದಾಲ್ಚಿನ್ನಿ ಕಷಾಯವನ್ನು ಕುಡಿಯಬೇಕು, ಆಗ ಆ ನೋವು ಶಮನವಾಗುವುದು.

ಗರ್ಭಾಶಯದಲ್ಲಿ ನೋವು ಕಾಣಿಸಿಕೊಂಡರೆ ಹುರಿದು ಪುಡಿಮಾಡಿದ ಕುರುಳಿ ಪುಡಿಕೆ ಉಪ್ಪು ಮತ್ತು ತುಪ್ಪ ಸೇರಿಸಿ ಬಿಸಿ ಅನ್ನಕ್ಕೆ ಕಲಿಸಿ ತಿನ್ನಬೇಕು, ಆಗ ನೋವು ಶಮನಗೊಳ್ಳುವುದು, ಉರುಳಿ ಯಲ್ಲಿರುವ ಔಷಧೀಯ ಗುಣ ನೋವನ್ನು ಕಡಿಮೆ ಮಾಡುತ್ತದೆ.

ಕೆಲವರಿಗೆ ಗರ್ಭಧರಿಸುವುದು ಬೇಕಾಗಿರುವುದಿಲ್ಲ, ಅಂತವರು ಗರ್ಭ ನಿಂತಿದೆ ಎಂಬ ಸೂಚನೆ ಕಂಡ ಕೂಡಲೇ ಬೆಲ್ಲ ಮತ್ತು ಕರಿ ಎಳ್ಳನ್ನು ಕುಟ್ಟಿ ತಿನ್ನುವುದರಿಂದ ಗರ್ಭಪಾತ ಆಗುವುದು.

ಗರ್ಭಿಣಿಯರು ಐದು ತಿಂಗಳ ನಂತರ ಪಪ್ಪಾಯಿ ಹಣ್ಣು, ಜೇನುತುಪ್ಪ ಮತ್ತು ಹಾಲನ್ನು ಸೇರಿಸಿ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ ನರಗಳಿಗೆ ಚೈತನ್ಯ ಉಂಟಾಗುವುದು.

ಪ್ರಸವವಾದ ನಂತರ ತಾಟಿ ಬೆಲ್ಲವನ್ನು ಬಾಣಂತಿಯರಿಗೆ ಕೊಡುವರು, ತಾಟಿ ಬೆಲ್ಲ ದ ಸೇವನೆಯಿಂದ ರಕ್ತಸ್ರಾವ ನಿಲ್ಲುವುದು, ಗರ್ಭಾಶಯವು ಸುಸ್ತಿಗೆ ಬರುವುದು.

LEAVE A REPLY

Please enter your comment!
Please enter your name here