ಯಾವುದೇ ರೀತಿಯ ಚರ್ಮ ರೋಗದ ಚಿಂತೆ ಬಿಡಿ ಈ ಸಿಂಪಲ್ ಮನೆಮದ್ದು ಬಳಸಿ!

0
1111

ಬೇಸಿಗೆಯ ಸಮಯದಲ್ಲಿ ಚರ್ಮದ ಸಮಸ್ಯೆಗಳು ಸಾಮಾನ್ಯ, ಚರ್ಮ ಈ ಸಮಯದಲ್ಲಿ ಅತಿಯಾಗಿ ಬೆವರುವುದರಿಂದ ಹಲವು ರೀತಿಯ ಚರ್ಮ ಸಮಯೆಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗು ಅತಿಯಾದ ತುರಿಕೆ ಉಂಟು ಮಾಡುತ್ತದೆ, ಎಲ್ಲರ ಮುಂದೆ ನಮಗೆ ಕೆರೆತ ಬಂದರೆ ನಿಜವಾಗಿಯೂ ಬಲು ಮುಜುಗರದ ಗೋಜಾಗುವುದರಲ್ಲಿ ಸಂಶಯವೇ ಇಲ್ಲ, ಹಾಗೆ ಬಿಟ್ಟರು ಚರ್ಮ ರೋಗ ವಿಪರೀತ ರೂಪವನ್ನು ಪಡೆಯಬಹುದು ಆದ್ದರಿಂದ ತಪ್ಪದೆ ಇಂದು ನಾವು ತಿಳಿಸುವ ಸುಲಭ ಮನೆ ಮದ್ದಿನ ಪಾಲನೆ ಮಾಡಿ ಹಾಗು ತುರಿಕೆ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ತೆಂಗಿನ ಎಣ್ಣೆ : ತೆಂಗಿನ ಎಣ್ಣೆಯನ್ನು ಮೊದಲು ಬಿಸಿ ಮಾಡಿ ನಂತರ ನಿಮ್ಮ ತ್ವಚೆಗೆ ಹಚ್ಚಿ ಒಂದು ರಾತ್ರಿ ಪುರ ಬಿಡಿ, ನಂತರ ಮುಂಜಾನೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಎಣ್ಣೆ ಹಚ್ಚಿದಾಗ ಕಾಟನ್ ಬಟ್ಟೆ ಧರಿಸಿ.

ನಿಂಬೆ ರಸ ಮತ್ತು ತೆಂಗಿನೆಣ್ಣೆ : ನಿಂಬೆ ರಸ ಮತ್ತು ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ ರಾತ್ರಿಯಲ್ಲಿ ಮೈಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಬೇಕು. ಈ ರೀತಿ ಮಾಡುತ್ತಿದ್ದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.

ಕಹಿ ಬೇವಿನ ಮಿಶ್ರಣ : ಕಹಿ ಬೇವಿನ ಎಲೆಯನ್ನು ಚೆನ್ನಾಗಿ ಅರೆದು ಮೈಗೆ ಹಚ್ಚಬೇಕು, ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಅಲರ್ಜಿ ಇದ್ದರೂ, ಇಲ್ಲದಿದ್ದರೂ ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕುವುದು ಒಳ್ಳೆಯದು.

ಗಸೆಗಸೆ ಮತ್ತು ನಿಂಬೆ ರಸ : ಗಸೆಗಸೆಯನ್ನು ಅರೆದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ಅಲರ್ಜಿಯಿಂದ ಉಂಟಾದ ಗಾಯಕ್ಕೆ ಹಚ್ಚಿದರೆ ಅಲರ್ಜಿಯಿಂದ ಉಂಟಾಗಿರುವ ಗಾಯವನ್ನು ಒಣಗುತ್ತದೆ.

ತಣ್ಣೀರು ಸ್ನಾನ : ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು. ತ್ವಚೆ ಅಲರ್ಜಿ ಉಂಟಾಗಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡದಿರುವುದು ಒಳ್ಳೆಯದು. ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here