ಶಾಸ್ತ್ರಗಳ ಪ್ರಕಾರ ಈ ವಸ್ತುಗಳನ್ನು ಸಾಲ ಪಡೆಯುವುದರಿಂದ ದುರಾದೃಷ್ಟ ನಿಮ್ಮ ಹೆಗಲೆರುತ್ತದೆ!

0
843

ನಮ್ಮಂತಹ ಮಧ್ಯಮ ವರ್ಗದ ಜನರಿಗೆ ಸಾಲ ಅನ್ನುವುದು ಸರ್ವೇ ಸಾಮಾನ್ಯದ ವಿಷಯವಾಗಿಬಿಟ್ಟಿದೆ, ಎಲ್ಲರು ಸಾಲ ಮಾಡುವುದು ಸಾಮಾನ್ಯ ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಮಾಡಿರುತ್ತೇವೆ, ಕೆಲವೊಮ್ಮೆ ಅಗತ್ಯಕ್ಕನುಗುಣವಾಗಿ ನಮ್ಮ ಅಕ್ಕಪಕ್ಕದವರಿಂದ ಪೆನ್ನು, ವಾಚು, ಕರ್ಚೀಫು, ವೃತ್ತಪತ್ರಿಕೆ ಇತ್ಯಾದಿಗಳನ್ನು ಎರವಲು ಪಡೆದು ಹಿಂದಿರುಗಿಸುವುದನ್ನೇ ಮರೆತು ಬಿಡುತ್ತೇವೆ, ಹೀಗೆ ನಮಗೆ ಅರಿವಿಲ್ಲದಂತೆಯೇ ನಾವು ಸಾಲ ಪಡೆದು ಸಾಲಗಾರರಾಗಿ ಬಿಟ್ಟಿರುತ್ತೇವೆ, ನಮ್ಮ ಹಿರಿಯರ ಪ್ರಕಾರ ಹೀಗೆ ತಮಗೆ ಅರಿವಿದ್ದೋ ಇಲ್ಲದೆಯೋ ಯಾವುದಾದರೊಂದು ವಸ್ತುವನ್ನು ಸಾಲಪಡೇದವರಿಗೆ ದುರಾದೃಷ್ಟ ಎದುರಾಗುತ್ತದೆ, ಹೀಗೆ ಪಡೆದವರಿಗೆ ಆರೋಗ್ಯ, ಹಣಕಾಸಿನ ತೊಂದರೆಗಳು ಎದುರಾಗುತ್ತವೆ ಎಂದೆಳಿದ್ದಾರೆ, ಹಾಗಾದರೆ ನಮ್ಮ ಹಿರಿಯರು ಯಾವ ಯಾವ ವಸ್ತುಗಳನ್ನೂ ಎರವಲು ಪಡೆಯಭಾರದು ಎಂದಿದ್ದಾರೆ ಗೊತ್ತಾ, ಬನ್ನಿ ನೋಡೋಣ.

ಕೈ ಗಡಿಯಾರ : ಬೇರೆಯವರ ಕೈಗಡಿಯಾರವನ್ನು ಕಟ್ಟಿಕೊಳ್ಳುವ ಮೂಲಕ ನಿಮ್ಮ ವೃತ್ತಿಪರ ಜೀವನದಲ್ಲಿ ತೊಂದರೆ ಹಾಗೂ ಹಣಕಾಸಿನ ವಿಷಯದಲ್ಲಿಯೂ ತೊಂದರೆ ಹಾಗೂ ನಷ್ಟ ಎದುರಾಗಬಹುದು ಆದ್ದರಿಂದ ಯೂವುದೇ ಕಾರಣಕ್ಕೂ ಮತ್ತೊಬ್ಬರ ಕೈ ಗಡಿಯಾರ ಎರವಲು ಪಡೆಯಬೇಡಿ ಮತ್ತು ಕೊಡಲುಬೇಡಿ.

ಲೇಖನಿ : ಕೆಲವೊಂದು ನಂಬಿಕೆಗಳ ಪ್ರಕಾರ ಎಂದಿಗೂ ನೀವು ಬೇರೊಬ್ಬರಹತ್ತಿರ ಪಡೆಯಲೇ ಬಾರದು, ನೀವೆದರು ಹೀಗೆ ಮಾಡ್ಡಿದಲ್ಲಿ ಆರ್ಥಿಕ ಬಿರುಕುತನ ಎದುರಾಗುತ್ತದೆ, ಈ ನಂಬಿಕೆ ಶತಮಾನಗಳಿಂದ ನಂಬಿಕೊಂಡು ಬರಲಾಗಿದ್ದು ನಿಮ್ಮ ಲೇಖನಿ ನಿಮ್ಮ ಉತ್ತಮ ಕರ್ಮದ ಫಲ ಎಂದೂ ಹೇಳಲಾಗುತ್ತದೆ, ಆದ್ದರಿಂದ ನಿಮ್ಮ ಲೇಖನಿಯನ್ನು ಇತರರಿಗೆ ಎರವಲು ಅಥವಾ ದಾನ ನೀಡುವ ಮೂಲಕ ನಿಮ್ಮ ಕರ್ಮವನ್ನೂ ಇತರರೊಂದಿಗೆ ಹಂಚಿಕೊಂಡಂತಾಗುತ್ತದೆ ಎಂದು ನಂಬಲಾಗಿದೆ.

ಮದುವೆಯ ಹಣ : ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನುವ ಹಾಗೆ ನಿಮ್ಮ ಬಳಿ ಎಷ್ಟು ಹಣವಿರುತ್ತದೆಯೋ ಅಷ್ಟರಲ್ಲೇ ಮದುವೆ ಮಾಡಿ ಮುಗಿಸಿ, ನೀವು ನಿಮ್ಮ ಅವಶ್ಯಕಥೆಗೂ ಮೀರಿ ಮದುವೆ ಮಾಡಬೇಕೆಂದು ಬೇರೊಬ್ಬರಹತ್ತಿರ ಮಾತ್ರ ಎರವಲು ಪಡೆಯಬಾರದು ಹಾಗು ಇದೇ ಅಗತ್ಯವುಳ್ಳ ಇತರರಿಗೆ ಎರವಲು ನೀಡಲೂಬಾರದು, ಏಕೆಂದರೆ ಎರವಲು ಪಡೆದು ಪ್ರಾರಂಭಿಸಿದ ವಿವಾಹಜೀವನದಲ್ಲಿ ಸದಾ ಆರ್ಥಿಕ ನಷ್ಟಗಳು ತುಂಬಿರುತ್ತವೆ ಎಂದು ನಂಬಲಾಗಿದೆ.

ಪುಸ್ತಕಗಳು : ನಿಮಗಾಗಿ ಎಂದು ಖರೀದಿಸಿದ ಪುಸ್ತಕದ ಜ್ಞಾನವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕ ಅಥವಾ ದಾನವಾಗಿ ನೀಡುವ ಮೂಲಕ ನಿಮ್ಮ ಜ್ಞಾನವನ್ನು ಇನ್ನೊಬ್ಬರು ಸೆಳೆಯುತ್ತಾರೆ ಎಂದು ಭಾವಿಸಲಾಗುತ್ತದೆ, ಒಂದು ವೇಳೆ ನಿಮ್ಮ ಆತ್ಮೀಯರು ಅಥವಾ ಸ್ನೇಹಿತರು ಕೇಳಿದರು ಕೊಡುವುದು ಉಚಿತವಲ್ಲ ಅದೇ ಪುಸ್ತಕದ ಬದಲು ಅವರಿಗೆ ಹೊಸ ಪುಸ್ತಕೊಂದನ್ನು ಉಡುಗೊರೆಯಾಗಿ ನೀಡಬಹುದು.

ಹಳೆಯ ಬಟ್ಟೆಗಳು : ನಂಬಿಕೆಗಳ ಪ್ರಕಾರ ಇನೊಬ್ಬರ ಬಟ್ಟೆಗಳನ್ನು ಸಾಲ ಪಡೆದು ತೊಟ್ಟುಕೊಳ್ಳುವ ಮೂಲಕ ದುರಾದೃಷ್ಟವನ್ನು ಮೈಮೇಲೆ ಧರಿಸಿಕೊಂಡಂತಾಗುತ್ತದೆ ಹಾಗೂ ಋಣಾತ್ಮಕ ಕಂಪನಗಳನ್ನು ತಂದೊಡ್ಡುತ್ತವೆ, ಹಸ್ತಸಾಮುದ್ರಿಕೆಯ ಪ್ರಕಾರ ಉಡುಪುಗಳು ಶುಕ್ರಗ್ರಹಕ್ಕೆ ಸಂಬಂಧಿಸಿದ್ದು ಇನ್ನೊಬ್ಬರಿಗೆ ಸೇರಿದ ಬಟ್ಟೆಗಳನ್ನು ಎರವಲು ಪಡೆದು ತೊಡುವುದರಿಂದ ನಿಮ್ಮ ಗ್ರಹಬಲವನ್ನು ದುರ್ಬಲಗೊಳಿಸುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here