ಅತಿಯಾದ ತಲೆನೋವು ಬಂದಾಗ ನಿಂಬೆ ಹಣ್ಣನ್ನು ಈ ರೀತಿ ಬಳಕೆ ಮಾಡಿದ್ದೀರಾ!

0
1219

ನಿಂಬೆ ಹಣ್ಣನ್ನು ಶುಭಕಾರ್ಯಗಳಿಗೆ, ಅಶುಭಕಾರ್ಯಗಳಿಗೆ, ಅಡುಗೆಗೆ ಮಾಟ ಮಂತ್ರ ಮಾಡುವುದಕ್ಕೆ ಅಷ್ಟೆಯಾಕೆ ಸೌಂದರ್ಯ ವೃದಿಗೂ ಬಳಸುತ್ತಾರೆ, ಇಷ್ಟೆಲ್ಲ ಉಪಯೋಗಗಳನ್ನ ಈ ಒಂದು ನಿಂಬೆ ಹಣ್ಣಿನಿಂದ ಪಡೆಯುತ್ತೇವೆ. ಇವುಗಳಿಷ್ಟಕ್ಕೆ ಸೀಮಿತವಲ್ಲ ನಿಂಬೆ ಹಣ್ಣು ಆರೋಗ್ಯವನ್ನ ಸಹ ನೀಡುತ್ತದೆ. ಹಾಗಾದರೆ ಬನ್ನಿ ನಿಂಬೆ ಹಣ್ಣಿನಿಂದಾಗುವು ಉಪಯೋಗಗಳನ್ನ ನೋಡೋಣ.

ಬೆಳಗ್ಗೆಯೇ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿನೀರಿಗೆ ಒಂದು ಚಮಚ ನಿಂಬೆರಸ ಬೆರೆಸಿ ಕುಡಿಯುತ್ತಾ ಬಂದರೆ ಶೀಘ್ರವಾಗಿ ಶರೀರದ ತೂಕ ಕಡಿಮೆಯಾಗುತ್ತದೆ. ನಿಂಬೆಹಣ್ಣಿನಲ್ಲಿ ಅಧಿಕವಾಗಿ ಸಿಟ್ರಿಕ್ ಆಸಿಡ್ ಇದೆ. ಈ ಸಿಟ್ರಿಕ್ ಆಸಿಡ್ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ.

ದೇಹದಿಂದ ಬರುವ ದುರ್ಗಂದವನ್ನು ನಿವಾರಿಸಲು ಕೆಲವು ದಿನ ಸ್ನಾನಕ್ಕೆ ಅರ್ಧಗಂಟೆಯ ಮೊದಲು ನಿಂಬೆರಸವನ್ನು ತೆಂಗಿನೆಎಣ್ಣೆಯಲ್ಲಿ ಬೇರಸಿ ದೇಹಕ್ಕೆ ಹಚ್ಚಿಕೊಂಡು ಸ್ನಾನ ಮಾಡಬೇಕು.

ಇನ್ನು ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಪೆಕ್ಟಿನ್ ಫೈಬರ್ ವಿಟಮಿನ್ ಎ ಹೆಚ್ಚು ಪ್ರಮಾಣದಲ್ಲಿದೆ, ನಿಂಬೆ ಹಣ್ಣಿನ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಲಬದ್ದತೆ ಸಮಸ್ಯೆ ದೂರಾಗುತ್ತದೆ.

ವಿಟಮಿನ್ ಸಿ ಹೇರಳವಾಗಿರುವುದರಿಂದ ದೇಹದ ಶಕ್ತಿ ಹೆಚ್ಚಿಸುತ್ತದೆ, ಜೀರ್ಣ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬ್ಯಾಕ್ಟೀರಿಯಾದಿಂದ ಉಂಟಾಗುವ ಉದರ ಸಂಬಂಧಿ ರೋಗಗಳಿಗೆ ನಿಂಬೆ ಹಣ್ಣು ರಾಮಭಾಣ.

ನಿಂಬೆಹಣ್ಣು ಕಿಡ್ನಿಯಲ್ಲಿನ ಕಲ್ಲು ಕರಗಿಸಲು ಸಹಾಯ ಮಾಡುತ್ತದೆ.

ನಿಂಬೆಹಣ್ಣಿನಲ್ಲಿರುವ ಪೊಟ್ಯಾಶಿಯಂ ಮಿದುಳಿನ ನರಕೋಶಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನಿಂಬೆಹಣ್ಣಿನ ಬೀಜವನ್ನು ಅರೆದು ತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ, ಬಕ್ಕತಲೆ ಸಮಸ್ಯೆ ನಿವಾರಣೆಯಾಗುತ್ತದೆ.

ನಿಂಬೆಹಣ್ಣಿನ ಸಿಪ್ಪೆಯನ್ನು ಹಣೆಗೆ ತಿಕ್ಕುತಿದ್ದರೆ ತಲೆನೋವು ಕಡಿಮೆಯಾಗುತ್ತದೆ.

ಜೇನುತುಪ್ಪವನ್ನು 1 ಚಮಚ ನಿಂಬೆರಸದೊಂದಿಗೆ ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.

ದೂರ ಪ್ರಯಾಣದ ಸಂದರ್ಭದಲ್ಲಿ ವಾಕರಿಕೆ ಮತ್ತು ತಲೆಸುತ್ತು ಸಮಸ್ಯೆಗೆ ನಿಂಬೆಹಣ್ಣನ್ನು ಮೂಸುತ್ತಿರಬೇಕು.

ನಿಂಬೆಹಣ್ಣು ದೇಹದಲ್ಲಿನ ಅನುಪಯುಕ್ತ ಅಂಶಗಳನ್ನು ಹೊರ ಹಾಕಲು ಹೆಚ್ಚು ಪ್ರಯೋಜನಕಾರಿ.

ಅತಿಯಾದ ಉಷ್ಣಾಂಶದಿಂದ ಮೂಗಿನಲ್ಲಿ ಉಟಾಗುವ ರಕ್ತ ಸ್ರಾವವನ್ನು ತಡೆಯಲು ನಿಂಬೆ ಹಣ್ಣು ಸಹಯಕಾರಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here