ಅಬ್ಬಬ್ಬಾ ಬಾರ್ಲಿ ನೀರು ಪ್ರತಿ ದಿನ ಒಂದು ಲೋಟ ಕುಡಿದರೆ ಏನಾಗುತ್ತೆ ನೋಡಿ

0
1368

ದೇಹದಿಂದ ವಿಷಕಾರಿ ಅಂಶ ಹೊರಹಾಕುತ್ತದೆ : ಬಾರ್ಲಿಯ ನೀರು ಕೊಂಚ ಅಂಟು ಅಂಟಾಗಿರಲು ಅದರಲ್ಲಿರುವ beta-glucan ಎಂಬ ಪೋಷಕಾಂಶ ಕಾರಣವಾಗಿದೆ, ಇದು ಒಂದು ನೈಸರ್ಗಿಕವಾದ ಕರಗದ ನಾರು ಆಗಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ ಹಾಗೂ ಮೂಲವ್ಯಾಧಿಯ ಸಂಭವತೆಯನ್ನು ಕಡಿಮೆಗೊಳಿಸುತ್ತದೆ, ಜೀರ್ಣಕ್ರಿಯೆ ಸರಳಗೊಂಡು ವಿಸರ್ಜನಾ ಕ್ರಿಯೆಯನ್ನು ಸುಲಲಿತಗೊಳಿಸುತ್ತದೆ, ಇದೇ ಕಾರಣದಿಂದ ವಿಷಕಾರಿ ವಸ್ತುಗಳು ಶೀಘ್ರವಾಗಿ ದೇಹದಿಂದ ಹೊರಹೋಗುವಂತಾಗಿ ಆರೋಗ್ಯ ವೃದ್ಧಿಸುತ್ತದೆ, ಕರುಳಿನ ಕ್ಯಾನ್ಸರ್ ನ ಸಂಭವತೆಯನ್ನೂ ಕಡಿಮೆಗೊಳಿಸುತ್ತದೆ.

ಮೂತ್ರದ ಪ್ರಮಾಣ ಹೆಚ್ಚಿಸುತ್ತದೆ : ಬಾರ್ಲಿ ಒಂದು ಉತ್ತಮ ಮೂತ್ರವರ್ಧಕವಾಗಿದ್ದು ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಸಹಕರಿಸುತ್ತದೆ, ಬಾರ್ಲಿಯ ಸೇವನೆಯಿಂದ ದೇಹದ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗುವುದರಿಂದ ದೇಹವು ತಂಪಾಗಿರುತ್ತದೆ, ವಿಶೇಷವಾಗಿ ಬೇಸಿಗೆಯಲ್ಲಿ ಖಾರವಾದ ಊಟವನ್ನು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಉರಿಯುಂಟಾಗುವುದನ್ನು ಬಾರ್ಲಿ ತಡೆಯುತ್ತದೆ, ಹಾಗಾಗಿ ಖಾರದ ಊಟದ ಬಳಿಕ ಬಾರ್ಲಿ ನೀರನ್ನು ಸೇವಿಸಲು ಮರೆಯದಿರಿ.

ಸಂಧಿವಾತದಿಂದ ರಕ್ಷಣೆ ನೀಡುತ್ತದೆ : ಬಾರ್ಲಿ ಒಂದು ಅತ್ಯುತ್ತಮವಾದ ಉರಿಯೂತ ನಿವಾರಕವಾಗಿದೆ, ಇದೇ ಕಾರಣದಿಂದ ಸಂಧಿವಾತದಿಂದ ಬಳಲುತ್ತಿರುವವರು ಬಾರ್ಲಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಧಾನವಾಗಿ ಸಂಧಿವಾತದಿಂದ ಮುಕ್ತಿ ಪಡೆಯಬಹುದು.

ಮಧುಮೇಹಿಗಳಿಗೂ ಉತ್ತಮ : ಬಾರ್ಲಿಯಲ್ಲಿರುವ ಬೀಟಾ ಗ್ಲುಕಾನ್ ಆಹಾರದಲ್ಲಿರುವ ಗ್ಲುಕೋಸ್ ಸಕ್ಕರೆಯನ್ನು ರಕ್ತದಲ್ಲಿ ಸೇರಿಸುವ ಗತಿಯನ್ನು ನಿಧಾನಗೊಳಿಸುವ ಕಾರಣ ಮಧುಮೇಹಿಗಳು ಸಹ ಸುರಕ್ಷಿತವಾಗಿ ಸೇವಿಸಬಹುದು, ಮಧುಮೇಹಿಗಳ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರಿದರೆ ಅಪಾಯಕಾರಿಯಾದುದರಿಂದ ಬಾರ್ಲಿ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ನಿಧಾನವಾಗಿ ಲಭ್ಯವಾಗುವಂತೆ ಮಾಡಿ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ.

ದಿನಕ್ಕೊಂದು ಲೋಟದ ಮೂಲಕ ದಿನದ ನಾರಿನ ಅಗತ್ಯ ಪೂರ್ಣಗೊಳ್ಳುತ್ತದೆ ಇಂದು ಮೈದಾ ಆಧಾರಿತ ಆಹಾರಗಳನ್ನು ಸೇವಿಸುವ ಮೂಲಕ ದೇಹಕ್ಕೆ ಲಭ್ಯವಾಗುವ ನಾರಿನ ಪ್ರಮಾಣ ಕಡಿಮೆಯಾಗುತ್ತದೆ, ಇದನ್ನು ಪೂರ್ಣಗೊಳಿಸಲು ದಿನಕ್ಕೊಂದು ಲೋಟ ಬಾರ್ಲಿ ನೀರನ್ನು ಕುಡಿಯುವುದು ಉತ್ತಮ.

ಕೊಲೆಸ್ಟ್ರಾಲ್ ಪ್ರಮಾಣ ಕುಗ್ಗಿಸುತ್ತದೆ : ಬಾರ್ಲಿ ನೀರಿನಲ್ಲಿ ಹೆಚ್ಚಿನ ನಾರು ಇರುವುದರಿಂದ ಪಚನಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ. ಪರಿಣಾಮವಾಗಿ ರಕ್ತದಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡುವ ಅಗತ್ಯ ಕಡಿಮೆಯಾಗುತ್ತದೆ.

ಮೂತ್ರಪಿಂಡಗಳಲ್ಲಿನ ಕಲ್ಲು ಕರಗಿಸುತ್ತದೆ : ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗುವ ಕಲ್ಲುಗಳಿಗೆ ಆಹಾರದಲ್ಲಿರುವ ಲವಣಗಳು ಕಾರಣವಾಗಿವೆ, ಒಂದು ಚಿಕ್ಕ ಕಣದಿಂದ ಪ್ರಾರಂಭವಾಗುವ ಇವು ದಿನಗಳೆದಂತೆ ದೊಡ್ಡದಾಗುತ್ತಾ ಹೋಗುತ್ತವೆ, ಒಂದು ನಿರ್ದಿಷ್ಟ ಪ್ರಮಾಣಕ್ಕೆ ಬೆಳೆದ ಬಳಿಕ ನೋವು ನೀಡಲು ಪ್ರಾರಂಭವಾಗುತ್ತದೆ, ಅಲ್ಲಿಯವರೆಗೂ ಈ ಕಲ್ಲುಗಳ ಇರುವಿಕೆಯೇ ಗೊತ್ತಾಗುವುದಿಲ್ಲ, ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಈ ಕಲ್ಲುಗಳು ನಿಧಾನವಾಗಿ ಕರಗುತ್ತವೆ, ಪರಿಣಾಮವಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

ಬಾರ್ಲಿ ನೀರು ಮಾಡುವುದು ಹೇಗೆ : ಅಂಗಡಿಯಿಂದ ತಂಡ ಬಾರ್ಲಿಯನ್ನು ಎರಡು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ನಂತರ ಅದೇ ನೀರಿನಲ್ಲಿ ಚೆನ್ನಾಗಿ ಕುಡಿಸಿ, ನಂತರ ನೀರು ತಣ್ಣಗಾದಮೇಲೆ ಬಾರ್ಲಿಯನ್ನು ಸೋಸಿ ನೀರನ್ನು ಕುಡಿಯಿರಿ.

LEAVE A REPLY

Please enter your comment!
Please enter your name here