ಪುರುಷರನ್ನು ಅತಿ ಹೆಚ್ಚಾಗಿ ಕಾಡುವ ಲಕ್ವಾ ಸಮಸ್ಯೆಯ ಸೂಚನೆಗಳು ಮತ್ತು ಚಿಕಿತ್ಸೆ.

0
1442

ತಟ್ಟನೆ ನಿಮ್ಮ ಕಣ್ಣುಗಳು ಮಂಜಾಗುವುದು, ಮಾತು ನಿಲ್ಲುವುದು, ಮಾತನಾಡಲು ತೊಂದರೆಯಾಗುವುದು, ಇತರರು ಹೇಳಿದ್ದು ನಿಮಗೆ ಅರ್ಥವಾಗದಿರುವುದು, ಇದ್ದಕ್ಕಿದ್ದ ಹಾಗೆ ತೀವ್ರ ತಲೆನೋವು ಕಾಡುವುದು, ಕಾರಣವಿಲ್ಲದೆ ತಲೆ ಸುತ್ತುವುದು, ನಡಿಗೆಯಲ್ಲಿ ಬಲಕ್ ಕಳೆದುಕೊಳ್ಳುವುದು ಅಥವಾ ಬೀಳುವುದು ಇನ್ನು ಮುಂತಾದ ಲಕ್ಷಣಗಳು ಗೋಚರವಾಗಿದೆ ಎಂದಾದರೆ ತುರ್ತಾಗಿ ವೈದ್ಯಕೀಯ ಸಹಾಯ ಪಡೆಯಬೇಕು, ಎಷ್ಟು ಬೇಗ ನೀವು ವೈದ್ಯರನ್ನು ಸಂಪರ್ಕಿಸುತ್ತಾರೆ ಅಷ್ಟು ನಿಮಗೆ ಒಳ್ಳೆಯದು, ಕರ್ಣ ಇದೆಲ್ಲಾ ಲಕ್ವ ರೋಗ ಸಮಸ್ಯೆಯ ಮುನ್ಸೂಚನೆ ಗಳಾಗಿವೆ.

ಎಲ್ಲ ವಯೋಮಾನದವರಲ್ಲೂ ಉಂಟಾಗಬಹುದಾದ ಕಾಯಿಲೆ ಇದಾಗಿದ್ದು ಪ್ರಮುಖವಾಗಿ 55 ರಿಂದ 85 ವರ್ಷ ವಯೋಮಾನದ ರೋಗದ ಅಪಾಯ ಹೆಚ್ಚಿರುತ್ತದೆ ಎಂದು ಅಧ್ಯಯನಗಳು ಹೇಳಿವೆ.

ಯುವಕರು ಮತ್ತು ಮಧ್ಯವಯಸ್ಕರ ಪುರುಷರಲ್ಲಿ ಲಕ್ವಾ ಅಪಾಯ ಮಹಿಳೆಯರಿಗಿಂತ ಹೆಚ್ಚು ಆದರೆ ವಯಸ್ಸು ಹೆಚ್ಚಿದಂತೆ ಅದು ಸ್ತ್ರೀ ಪುರುಷರಲ್ಲಿ ಸಮಾನ ವಾಗುತ್ತದೆ, ಈ ಲಕ್ವ ರೋಗದ ಸಮಸ್ಯೆಗೆ ಕೌಟುಂಬಿಕ ಇತಿಹಾಸವು ಇರಬಹುದು ಲಕ್ವಾ ವಂಶವಾಹಿಯಾಗಿ ಹರಿದು ಬರಬಹುದು, ಅಂತಹ ಕುಟುಂಬಗಳ ಸದಸ್ಯರಲ್ಲಿ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಅಂಶಗಳು ಹೆಚ್ಚಿರುತ್ತದೆ.

ಲಕ್ವ ಸಮಸ್ಯೆಯಿಂದ ದೂರವಿರಲು ಕೆಲವು ಸಲಹೆಗಳನ್ನು ನೀಡುತ್ತೇವೆ.

ಕೊಬ್ಬು ಕೊಲೆಸ್ಟ್ರಾಲ್ ಹೆಚ್ಚಿರುವ ಆಹಾರ ಸೇವಿಸಬಾರದು, ಉಪ್ಪನ್ನು ತಿನ್ನಲೇ ಬೇಡಿ ಕೊಲೆಸ್ಟ್ರಾಲ್ ಮತ್ತು ರಕ್ತದ ಒತ್ತಡ ನಿಯಂತ್ರಣ ದಲ್ಲಿ ಇರಬೇಕು.

ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳೇನಾದರೂ ನಿಮಗೆ ಇದ್ದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುವುದು ಉತ್ತಮ.

ಮದ್ಯಪಾನ ಸೇವನೆ ಮಾಡುವವರು ನೀವಾಗಿದ್ದರೆ ಮದ್ಯಪಾನ ಮಿತಿಯಲ್ಲಿರಲಿ ಸಾಧ್ಯವಾದರೆ ಮದ್ಯಪಾನ ಮಾಡದಿರುವುದು ಒಳ್ಳೆಯದು.

ಧೂಮಪಾನ ಮಾಡುವುದಿಲ್ಲ ಎಂದರೆ ತುಂಬಾ ಒಳ್ಳೆಯ ವಿಚಾರ ಅಥವಾ ಧೂಮಪಾನ ಮಾಡುತ್ತಿದ್ದರೆ ಮೊದಲು ಅದನ್ನು ಬಿಡಬೇಕು.

ನಿಯಮಿತವಾದ ಪರೀಕ್ಷೆಗಳು ಲಕ್ಷ್ಮಿ ಬರಬಹುದಾದ ಗಂಡಾಂತರಗಳನ್ನು ಅರಿಯಲು ಅವಶ್ಯಕ ಯಾವಾಗಲೂ ನಿಮ್ಮ ವೈದ್ಯರ ಸಲಹೆ ಪಡೆಯಿರಿ.

LEAVE A REPLY

Please enter your comment!
Please enter your name here