ಮನುಷ್ಯ ದೇಹದಲ್ಲಿ ಪ್ರತಿಯೊಂದು ಅಂಗವು ಪ್ರತಿಯೊಂದು ಅಂಗಕ್ಕೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹೊಂದಿ ಕೊಂಡಿದೆ, ಆದ್ದರಿಂದ ನಮ್ಮ ದೇಹದ ಯಾವುದೇ ಸಣ್ಣ ಅಂಗವನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ, ಇಂದು ಲಿವರ್ ನಮ್ಮ ದೇಹದದಲ್ಲಿ ನಿರ್ವಹಿಸುವ ಕಾರ್ಯ ಹಾಗು ಲಿವರ್ ಆರೋಗ್ಯಕ್ಕೆ ಸುಲಭ ಉಪಾಯ ಇವುಗಳ ಬಗ್ಗೆ ತಿಳಿಯೋಣ.
ನಮ್ಮ ದೇಹದಲ್ಲಿ ಹಲವು ಪ್ರಮುಖ ಅಂಗಗಳಲ್ಲಿ ಲಿವರ್ ಕೂಡ ಒಂದು, ಕಾರಣ ಒಂದು ಕ್ಷಣವೂ ನಿಲ್ಲದೆ ಕೆಲಸ ಮಾಡುವ ಅಂಗಗಳ ಸಾಲಿನಲ್ಲಿ ಇವರು ಕೂಡ ಬರುತ್ತದೆ, ಒಂದು ಕ್ಷಣ ಕೆಲಸ ಮಾಡುವುದನ್ನು ನಿಲ್ಲಿಸಿದರು ಮನುಷ್ಯನ ಪ್ರಾಣಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ, ಇಂತಹ ಪ್ರಮುಖ ದೇಹದ ಅಂಗವಾದ ಲಿವರ್ ಆರೋಗ್ಯದ ಬಗ್ಗೆ ನಾವು ಬಹಳಷ್ಟು ಕಾಳಜಿಯನ್ನು ವಹಿಸ ಬೇಕಾಗುತ್ತದೆ.
ದೇಹದ ಆರೋಗ್ಯ ಕ್ಕಾಗಿ ಲಿವರ್ ಬಹಳ ಮುಖ್ಯ, ಕೊಲೆಸ್ಟ್ರಾಲ್, ಪ್ರೋಟೀನ್ ಮತ್ತು ಪಿತ್ತರಸ ಬಿಡುಗಡೆ ವಿಟಮಿನ್, ಖನಿಜಾಂಶ ಮತ್ತು ಕಾರ್ಬೋಹೈಡ್ರೇಟ್ ಶೇಖರಣೆ ಇವೆಲ್ಲ ಪ್ರಮುಖ ಕಾರ್ಯಗಳು, ಈ ಕೆಲಸಗಳಲ್ಲಿ ಯಾವುದೇ ವ್ಯತ್ಯಾಸ ವಾಗಬಾರದು.
ಲಿವರ್ ಅನ್ನು ಆರೋಗ್ಯವಾಗಿರುವ ಶಕ್ತಿಯು ಒಂದು ಸಣ್ಣ ಬೆಳ್ಳುಳ್ಳಿಯಲ್ಲಿ ಇದೆ, ಬೆಳ್ಳುಳ್ಳಿಯಲ್ಲಿ ಸೆಲೆನಿಯಮ್ ಎನ್ನುವ ಅಂಶವಿದ್ದು ಇದು ಲಿವರ್ ನ ಆರೋಗ್ಯಕ್ಕೆ ಬಹಳ ಒಳ್ಳೆಯದು, ಅಷ್ಟೇ ಅಲ್ಲದೆ ಬೆಳ್ಳುಳ್ಳಿಯಲ್ಲಿ ಅರ್ಜಿ ನೈನ್ ಎಂಬ ಅಮಿನೋ ಆಮ್ಲ ವಿದ್ದು ಇದು ರಕ್ತನಾಳಗಳಿಗೆ ತುಂಬಾ ಉಪಯುಕ್ತ, ಇದರಿಂದ ಲಿವರ್ ನ ರಕ್ತದೊತ್ತಡ ಕಡಿಮೆಯಾಗುತ್ತದೆ.
ಇನ್ನು ನಿಮ್ಮ ಅಡುಗೆಯಲ್ಲಿ ಆಲಿವ್ ಆಯಿಲ್ ಅನ್ನು ಮಿತವಾಗಿ ಬಳಸುವುದನ್ನು ಮರೆಯದಿರಿ, ಆಲಿವ್ ಆಯಿಲ್ ನಲ್ಲಿ ದೇಹದಲ್ಲಿನ ವಿಷ ಇರುವಂತಹ ಲಿಪಿಡ್ ಡೇಸ್ ಇರುತ್ತದೆ, ಇದರಿಂದ ಲಿವರ್ ಕಾರ್ಯ ನಿರ್ವಹಣೆಗೆ ಆಲಿವ್ ಆಯಿಲ್ ಬಹಳಷ್ಟು ನೆರವನ್ನು ನೀಡುತ್ತದೆ.