ನಿಮ್ಮ ಅದೃಷ್ಟದ ಬಗ್ಗೆ ಕಾಗೆ ನೀಡೋ ಈ ಸೂಚನೆ ಬಗ್ಗೆ ತಪ್ಪದೇ ತಿಳಿದು ಕೊಳ್ಳಿ!

0
1285

ಬಹುಶಹ ಭೂಮಿಯ ಮೇಲೆ ಇರುವ ಎಲ್ಲ ರೀತಿಯ ಪಕ್ಷಿಯ ಜಾತಿಯನ್ನು ಒಬ್ಬರಲ್ಲ ಒಬ್ಬರು ಇಷ್ಟಪಟ್ಟೇ ಪಡುತ್ತಾರೆ, ಹಲವರಿಗೆ ನವಿಲು ಇಷ್ಟವಾದರೆ ಕೆಲವರಿಗೆ ಕೋಗಿಲೆ ಇಷ್ಟ ಇರಬಹುದು, ನವಿಲು ಕಣ್ಣಿಗೆ ಆನಂದ ನೀಡಿದರೆ ಕೋಗಿಲೆ ಕಿವಿಗೆ ಮೃದ ನೀಡುತ್ತದೆ, ಆದರೆ ಕಾಗೆಯ ವಿಚಾರ ಇದಕ್ಕೆ ವಿರುದ್ಧ ಇದು ಕಣ್ಣಿಗೆ ಆನಂದ ನೀಡುವುದಿಲ್ಲ ಕಿವಿಗೆ ಮೃದವು ಕೊಡುವುದಿಲ್ಲ, ಇದೇ ಕಾರಣಕ್ಕಾಗಿಯೇ ಏನೋ ಕಾಗೆಯನ್ನು ಮಾನವಕುಲ ಕಡೆಗಣಿಸುತ್ತದೆ, ಅಷ್ಟೇ ಅಲ್ಲದೆ ಕಾಗೆಯನ್ನು ಅಪಶಕುನ ಇದೊಂದು ದುಷ್ಟಶಕ್ತಿ ಎಂದೆಲ್ಲ ಮಾತನಾಡುತ್ತಾರೆ ಆದರೆ ನಿಮಗೆ ನೆನಪಿರಲಿ ಕಾಗೆ ಶನಿಯ ವಾಹನ.

ಇಂತಹ ಕಾಗೆ ನಿನಗೆ ಬರುವ ಅದೃಷ್ಟದ ಶುಭ ಸಂಖ್ಯೆಯನ್ನು ನೀಡುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ, ಇವುಗಳ ಬಗ್ಗೆ ಇಂದು ನಿಮಗೆ ಸಂಪೂರ್ಣವಾಗಿ ಮಾಹಿತಿ ನೀಡುತ್ತೇವೆ ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ಮೊದಲನೆಯದಾಗಿ ನಿಮ್ಮ ಕನಸಿನಲ್ಲಿ ಕಾಗೆ ಸಿಹಿ ಪದಾರ್ಥಗಳನ್ನು ತಿನ್ನುತ್ತಿದ್ದರೆ ಇದು ನಿಮಗೆ ಬಹಳ ದೊಡ್ಡ ಶುಭ ಸಂಕೇತ ಎಂದೇ ಕರೆಯಲಾಗುತ್ತದೆ, ಮುಂದಿನ ದಿನಗಳಲ್ಲಿ ನಿಮಗಾಗುವ ಬಹುದೊಡ್ಡ ಧನ ಲಾಭದ ಮುನ್ಸೂಚನೆಯನ್ನು ಎಂದು ಹೇಳಲಾಗುತ್ತದೆ.

ನಿಮ್ಮ ಕೆಲಸದ ಸ್ಥಳಗಳಲ್ಲಿ ಅಥವಾ ವ್ಯಾಪಾರದ ಸ್ಥಳಗಳಲ್ಲಿ ಕಾಗೆ ಬಂದು ಒಂದೇ ಸಮನೆ ಕೂಗುತ್ತಿದ್ದರೆ ಅದು ಸಹ ಅಂದಿನ ನಿಮ್ಮ ವ್ಯಾಪಾರ ವ್ಯವಹಾರ ಅದ್ಭುತವಾಗಿ ನಡೆಯುತ್ತದೆ ಎಂದು ಸೂಚನೆ ಎನ್ನಲಾಗಿದೆ.

ನಿರುದ್ಯೋಗಿಗಳು ಕೆಲಸ ಹುಡುಕಿಕೊಂಡು ಮನೆಯಿಂದ ಹೊರ ಬಂದಾಗ ಕಸದ ಮೇಲೆ ಕಾಗೆ ಕೂತಿರುವ ದೃಶ್ಯ ಕಂಡರೆ ಇದು ಕೂಡ ಅಂಥವರಿಗೆ ಬಹಳ ಶುಭ ಸಂಕೇತ ಎಂದು ಹೇಳಲಾಗುತ್ತದೆ.

ದಂಪತಿಗಳು ಅಥವಾ ಪ್ರೀತಿ ಮಾಡುತ್ತಿರುವವರು ಜೊತೆಯಾಗಿ ಕೂತು ಸಿಹಿ ಪದಾರ್ಥವನ್ನು ತಿನ್ನಬೇಕಾದರೆ ಕಾಗೆಯೊಂದು ಸಿಹಿ ಪದಾರ್ಥ ಒಂದು ತುಂಡನ್ನು ಕಚ್ಚಿಕೊಂಡು ತಿಂದರೆ ಅದು ಸಹ ಶುಭ ಸಂಕೇತವೇ.

ಗರ್ಭಿಣಿ ಸ್ತ್ರೀಯರ ತಲೆಯಮೇಲೆ ಕಾಗೆ ಹಾರಿ ಹೋದರೆ, ಅಂತವರಿಗೆ ಶುಭ ಸುದ್ದಿ ಕಾದಿದೆ ಎಂದು ಅರ್ಥಮಾಡಿಕೊಳ್ಳಬೇಕು ಎಂದು ಪುರಾಣದಲ್ಲಿ ಹೇಳಲಾಗಿದೆ, ಇಂಥವರಿಗೆ ಗಂಡು ಮಗು ಜನಿಸುತ್ತದೆ ಹಾಗೂ ಆ ಮಗು ಭವಿಷ್ಯದಲ್ಲಿ ಉತ್ತಮ ಮನುಷ್ಯನಾಗಿ ಬಾಳುತ್ತಾನೆ.

ದಂಪತಿಗಳು ರಸ್ತೆಯಲ್ಲಿ ನಡೆಯುವಾಗ ಅವರ ಬಲಭಾಗದ ಭುಜದ ಮೇಲೆ ಕಾಗೆ ಹಾರಿಹೋದರೆ ಅಂತವರಿಗೆ ಬಹುಬೇಗ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುವ ಸಂಕೇತ ಎಂದು ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here