ನಟಿ ತಾರಾ ಅವರು ಈಗ ಹೇಗಿದ್ದಾರೆ ಅವರ ಗಂಡ ಮತ್ತು ಮಗ ಯಾರು ಗೊತ್ತಾ?

  0
  2687

  ನಟಿ ತಾರಾ ಅವರು ಈಗ ಹೇಗಿದ್ದಾರೆ ಮತ್ತು ಅವರ ಮಗ ಯಾರು ಗೊತ್ತಾ, ಅದೆಲ್ಲವನ್ನು ಇಂದು ಈ ಲೇಖನದಲ್ಲಿ ತಿಳಿಸುತ್ತೇವೆ, ತಾರಾ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ, ನಾಯಕನಟಿ, ಪೋಷಕ ನಟಿ, ಸಹಾಯಕ ನಟಿ ಹೀಗೆ ಯಾವುದೇ ಪಾತ್ರ ಕೊಟ್ಟರೂ ನೂರಕ್ಕೆ ನೂರರಷ್ಟು ಜೀವತುಂಬಿ ನಟಿಸುವ ಪ್ರತಿಭಾನ್ವಿತ ನಟಿ, ತಾರಾ ಅವರು ಕಣ್ಣಲ್ಲೇ ಮಾತನಾಡುತ್ತಾರೆ, ಮೌನದಲ್ಲಿ ಅಭಿನಯಿಸುತ್ತಾರೆ, 1984 ರಲ್ಲಿ ತಮಿಳು ಚಿತ್ರದ ಮೂಲಕ ತಾರಾ ಅವರು ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿದರು, ಆದರೆ ಕನ್ನಡ ಚಿತ್ರರಂಗಕ್ಕೆ 1985 ರಲ್ಲಿ ತುಳಸಿದಳ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ.

  ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಆನಂದ್ ಚಿತ್ರದಲ್ಲಿ ನಟಿಸುತ್ತಾರೆ, ಹಾಗೂ ರಮೇಶ್ ಅರವಿಂದ್ ಅವರ ಸುಂದರ ಸ್ವಪ್ನಗಳು, ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಗುರಿ ಚಿತ್ರದಲ್ಲಿ ನಡೆಸುತ್ತಾರೆ, ನಟ ಶಶಿಕುಮಾರ್ ಅವರ ಜೊತೆ ಇಬ್ಬರ ಹೆಂಡತಿಯರ ಮುದ್ದಿನ ಪೊಲೀಸ್, ಅನಂತನಾಗ್ ಅವರ ಜೊತೆ ಉಂಡು ಹೋದ ಕೊಂಡು ಹೋದ ಚಿತ್ರದಲ್ಲಿ ಹಾಗೂ ಇನ್ನೂ ಹಲವು ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ, ಕನ್ನಡದ ಬಹುತೇಕ ಎಲ್ಲಾ ನಾಯಕನಟನ ಚಿತ್ರದಲ್ಲಿ ತಾರಾ ಅವರು ಅಭಿನಯಿಸಿದ್ದಾರೆ.

  ಇವರಿಗೆ ಕಲಾತ್ಮಕ ಚಿತ್ರಗಳು ಹೆಚ್ಚು ಹೆಸರನ್ನು ತಂದು ಕೊಟ್ಟಿದೆ, ಕಲಾತ್ಮಕ ಚಿತ್ರದಲ್ಲಿ ನಾಯಕಿ ಪ್ರಧಾನ ಪಾತ್ರಗಳನ್ನು ತುಂಬಾ ಮನೋಜ್ಞವಾಗಿ ಅಭಿನಯ ಮಾಡುತ್ತಾರೆ, 1990 ರಲ್ಲಿ ತೆರೆಕಂಡ ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದ ಕಾನೂರು ಹೆಗ್ಗಡತಿ ತಾರಾ ಅವರಿಗೆ ಚಿತ್ರರಂಗದಲ್ಲಿ ಅದುವರೆಗಿನ ಅತಿಹೆಚ್ಚಿನ ಹೆಸರು ತಂದುಕೊಟ್ಟಿತು, ಈ ಚಿತ್ರದಲ್ಲಿನ ಇವರ ಉತ್ತಮ ನಟನೆಗೆ ಫಿಲಂ ಫೇರ್ ಅವಾರ್ಡ್ ಕೂಡ ದೊರಕಿದೆ, ಈ ಚಿತ್ರಕ್ಕೆ ನ್ಯಾಷನಲ್ ಫಿಲಂ ಫೇರ್ ಅವಾರ್ಡ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತು, ನಂತರ ಮತದಾನ, ಸೈನೆಡ್, ಹಸೀನಾ ಚಿತ್ರಗಳಲ್ಲಿ ಇವರ ಅಭಿನಯಕ್ಕೆ ರಾಷ್ಟ್ರ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ದೊರಕಿದೆ.

  ಹೀಗೆ ನಟಿ ತಾರಾ ಅವರು ಹತ್ತು ಹಲವು ಪ್ರಶಸ್ತಿಗಳನ್ನು ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ, ತಾರಾ ಅವರು 2012 13ರ ಸಮಯದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಭಾರತೀಯ ಜನತಾ ಪಾರ್ಟಿಯಲ್ಲಿ ಸಹ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ, ಇನ್ನು ತಾರಾ ಅವರು ಛಾಯಾಗ್ರಾಹಕರಾದ ಎಚ್ ಸಿ ವೇಣು ಅವರನ್ನು ಮದುವೆಯಾಗಿದ್ದಾರೆ, ಛಾಯಾಗ್ರಾಹಕ ವೇಣು ಅವರು ಸಹ ಕನ್ನಡ ಚಿತ್ರರಂಗದಲ್ಲಿ ಉತ್ತಮ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ, ತಾರಾ ಅವರಿಗೆ ಶ್ರೀಕೃಷ್ಣ ಎಂಬ ಮಗನಿದ್ದಾನೆ, ನಿಮಗೂ ಸಹ ತಾರಾ ಅವರು ಇಷ್ಟವಾದಲ್ಲಿ ಮರೆಯದೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

  ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

  LEAVE A REPLY

  Please enter your comment!
  Please enter your name here