ಮೈದಾ ಹಿಟ್ಟನ್ನ ಬಳಸುವವರೇ ಇದರ ಹಿಂದಿರುವ ಭಯಾನಕ ಸತ್ಯವನ್ನ ತಿಳಿಯಿರಿ. ಮೈದಾ ತಯಾರಾಗುವ ವಿಧಾನ ಗೊತ್ತಾ ?

0
2042

ಸಾಮಾನ್ಯವಾಗಿ ಆಹಾರ ಎಂದರೆ ರುಚಿಗೆ ಪ್ರಾಮುಖ್ಯತೆ ಕೊಡುತ್ತಾರೆ, ಆರೋಗ್ಯದ ಬಗ್ಗೆ ನಂತರ ಯೋಚನೆ ಮಾಡುತ್ತಾರೆ, ಅದರಲ್ಲೂ ಬೇಕರಿಯ ತಿಂಡಿಗಳು ಎಂದರೆ ಬಹಳ ಪ್ರಿಯ, ಕೆಲವರಂತೂ ಮಕ್ಕಳಿಗೆ ಕೊಡಿಸುವ ನೆಪದಲ್ಲಿ ಅವರು ತಿನ್ನುತ್ತಾರೆ, ನಿಮಗೆ ಗೊತ್ತಿರಲಿ ಬೇಕರಿಯಲ್ಲಿ ತಯಾರಾಗುವ 70 ಪರ್ಸೆಂಟ್ ತಿನಿಸು ಮೈದಾ ಹಿಟ್ಟನ್ನು ಬಳಸಿ ತಯಾರು ಮಾಡುತ್ತಾರೆ, ಮೈದಾ ಹಿಟ್ಟು ಆರೋಗ್ಯಕ್ಕೆ ಯಾವ ರೀತಿ ಕೆಡುಕನ್ನು ಬಯಸುತ್ತದೆ ಹಾಗೂ ಮೈದಾ ಹಿಟ್ಟನ್ನು ತಯಾರಿಸುವ ರೀತಿಯನ್ನು ಇಂದು ನಾವು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ.

ಮೈದಾ ಹಿಟ್ಟು ತಯಾರಾಗುವುದು ಗೋಧಿಯಿಂದ, ಗೋಧಿಯಲ್ಲಿ ಉಮಿ ಮತ್ತು ತೌಡು ಎಂಬುವ ನಾರಿನಂಶಗಳನ್ನೂ ಸಂಪೂರ್ಣವಾಗಿ ತೆಗೆದು, ಅದರಲ್ಲಿರುವ ಪುಡಿಯನ್ನು ಹಾಗೂ ತರಿ ಬೇರ್ಪಡಿಸಲಾಗುತ್ತದೆ, ನಂತರ ಇವೆರಡನ್ನು ಬೆನ್ಸೋಯಿಕ್ ಪೆರೋಕ್ಸೈಡ್ ಬಳಸಿ ಬ್ಲೀಚ್ ಮಾಡುತ್ತಾರೆ, ತರಿ ರವೆ ಹೆಸರಿನಲ್ಲಿ ಮಾರುಕಟ್ಟೆಗೆ ಸೇರುತ್ತದೆ, ಪುಡಿಯನ್ನು ಅಲೋಕ್ಸನ್ ಎಂಬ ಕೆಮಿಕಲ್ಸ್ ಸೇರಿಸಿ ಮೃದು ಮಾಡಿದ ಮೇಲೆ ಅದು ಮೈದಾ ಆಗುತ್ತದೆ.

ನಿಮಗೆ ಆಶ್ಚರ್ಯವೆನಿಸಬಹುದು ಆದರೂ ನಿಜ 1949 ರಲ್ಲಿ ಇಂಗ್ಲೆಂಡ್ ಮೈದಾ ವನ್ನು ನಿಷೇಧ ಮಾಡಿತ್ತು, ಸ್ವಲ್ಪ ಇತಿಹಾಸದ ಕಡೆ ನೋಡಿದಾಗ ಅಮೆರಿಕ ಮತ್ತು ಯುರೋಪ್ ದೇಶಗಳು ಟನ್ ಗಟ್ಟಲೆ ಮೈದಾ ನದಿ ದಂಡೆ ಮತ್ತು ಖಾಲಿ ಜಾಗಗಳಲ್ಲಿ ತಂದು ಸುರಿಯುತ್ತಿದ್ದರು, ಇದರಿಂದ ಪರಿಸರಕ್ಕೆ ಹಾನಿ ಆಗಲು ಶುರುವಾಯಿತು, ನಂತರ ಇದರ ಬಗ್ಗೆ ಯುರೋಪಿಯನ್ನರು ಹೆಚ್ಚು ಸಂಶೋಧನೆಯನ್ನು ನಡೆಸಿ, ನದಿ ದಡದ ಪಕ್ಕದಲ್ಲಿ ಇರುತ್ತಿದ್ದ ಹಸುಗಳ ಬೆನ್ನಿಗೆ ಮೈದಾ ಅಂಟಿರುವುದನ್ನು ಗಮನಿಸಿ ಕೇರ್ ಎಂಬ ಹೆಸರಿನಲ್ಲಿ ಆಹಾರ ಪದಾರ್ಥವನ್ನು ಮೂರನೇ ಜಗತ್ತಿನ ದೇಶಗಳಿಗೆ ಕಳುಹಿಸಲಾಯಿತು, ಆಗ ಭಾರತಕ್ಕೂ ಇದನ್ನು ಕಳುಹಿಸಿದರು.

ಚಳುವಳಿಗಾರರು ತಮ್ಮ ಭಿತ್ತಿಚಿತ್ರಗಳನ್ನು ಅಂಟಿಸಲು ಮೈದಾವನ್ನು ಬಳಸಲು ಶುರು ಮಾಡಿದರು, ಇಂದಿಗೂ ಚಲನ ಚಿತ್ರದ ಪೋಸ್ಟರ್ ಗಳನ್ನು ಅಂಟಿಸಲು ಮೈದಾ ಹಿಟ್ಟನ್ನು ಬಳಸಲಾಗುತ್ತಿದೆ.

ಮೈದಾದಿಂದ ತಯಾರಿಸುವ ಆಹಾರ ಪದಾರ್ಥಗಳು ಯಾವುದು ಮತ್ತು ಅದರಿಂದಾಗುವ ಆರೋಗ್ಯ ಸಮಸ್ಯೆಗಳು.

ಬೇಕರಿ ಪದಾರ್ಥಗಳ ಆದ ಕೇಕ್, ಬ್ರೆಡ್, ಬನ್, ರಸ್ಕ್, ನ್ಯೂಡಲ್ಸ್, ಸೇಮಿಯ, ಬಿಸ್ಕತ್, ಪರೋಟ, ಪುರಿ, ಚಪಾತಿ, ನಾನ್ ತಂದೂರಿ, ರೋಟಿ, ಇನ್ನು ಮುಂತಾದವುಗಳು, ಇವುಗಳನ್ನು ತಿನ್ನುವುದರಿಂದ ಬರಬಹುದಾದ ಆರೋಗ್ಯ ಸಮಸ್ಯೆಗಳಲ್ಲಿ ಪ್ರಮುಖವಾದದ್ದು ಸಕ್ಕರೆ ಕಾಯಿಲೆ ಕಾರಣ ಮೈದಾ ದಲ್ಲಿ ಬಳಸುವ ಅಲಾಕ್ಸ್‍ನ್ ಎಂಬ ಔಷಧಿಯು ಪ್ಯಾಂಕ್ರಿಯಾಸ್‍ನಲ್ಲಿರುವ ಬೀಟಾ ಜೀವಕೋಶಗಳನ್ನು ನಾಶ ಮಾಡಿ, ಇನ್‍ಸುಲಿನ್ ಕಡಿಮೆಯಾಗಲು ಕಾರಣವಾಗುತ್ತದೆ.

ಅಂಗಡಿಗಳಲ್ಲಿ ಮಾರುತ್ತಿರುವ ಎಲ್ಲಾ ಹಿಟ್ಟುಗಳಲ್ಲೂ ಅಲಾಕ್ಸನ್ ಬಳಸುವುದು ಸಾಮಾನ್ಯ. ನಾವು ತಯಾರಿಸುವ ಹಿಟ್ಟು ಇಷ್ಟು ಮೃದುವಾಗಲು ಸಾಧ್ಯವಿಲ್ಲ. ಇನ್ನು ಬೇಕರಿಯಲ್ಲಿ ಮೈದಾ ಬಳಸುವಾಗ ಉಪಯೋಗಿಸುವ ಪದಾರ್ಥಗಳ ಬಗ್ಗೆ ತಿಳಿದರೆ ಗಾಬರಿಯಾಗುತ್ತದೆ. ಕೃತಕ ಬಣ್ಣಗಳು, ಮಿನರಲ್ ಆಯಿಲ್, ಟೇಸ್ಟ್ ಮೇಕರುಗಳು, ಪ್ರಿಸರ್ವೇಟೀವ್‍ಗಳು, ಡಾಲ್ಡ, ಸಕ್ಕರೆ, ಸಾಕರಿನ್, ಅಜಿನೋಮೋಟೋ ಇವೆಲ್ಲವನ್ನೂ ಸೇರಿಸಲಾಗುತ್ತದೆ. ಬಣ್ಣವಾಗಿ ಬಳಸುವುದೆಲ್ಲವೂ ಪೆಟ್ರೋಲಿಯಂ ಉಪ ಉತ್ಪನ್ನಗಳೇ, ಈ ಬಣ್ಣಗಳು ಅರ್ಬುಧಕ್ಕೆ (ಕ್ಯಾನ್ಸರ್‍ಗೆ) ಕಾರಣವಾಗುತ್ತವೆ. ಬೇಕರಿಗಳಲ್ಲಿ ಎಣ್ಣೆಗೆ ಬದಲು ಬಳಸುವುದು ಮಿನರಲ್ ಆಯಿಲ್ ಎಂಬ ಲಿಕ್ವಿಡ್ ಪಾರಫೀನ್ ಆಗಿದೆ.

LEAVE A REPLY

Please enter your comment!
Please enter your name here