ಎಚ್ಚರ ರಾತ್ರಿ ನಿಮಗೆ ನಿದ್ರೆ ಸರಿಯಾಗಿ ಬರದಿದ್ದರೆ ಈ ಕಾಯಿಲೆಯ ಮುನ್ಸೂಚನೆ.

0
1966

ನಿದ್ರೆ ಯಾಕೆ ಮಾಡಬೇಕು ಗೊತ್ತಾ, ನಿದ್ರಾವಸ್ಥೆಯಲ್ಲಿ ಮೆದುಳು ಕೆಲುವು ಕ್ರಮಗಳನ್ನು ಕೈಗೊಳ್ಳುತ್ತವೆ. ಸದ್ಯಕ್ಕೆ ಇವಾವುವು ಎಂದು ಸ್ಪಷ್ಟವಾಗಿ ತಿಳಿಯದಿದ್ದರೂ, ಶರೀರಕ್ಕೆ ನಿದ್ರೆ ಬಹಳ ಮುಖ್ಯವಾದುದ್ದೆಂದು ಹೇಳಲಾಗುತ್ತದೆ. ಮನುಷ್ಯರು ನಿದ್ರೆ ಮಾಡುವಾಗ ಕನಸು ಕಾಣುತ್ತಾರೆ, ಪ್ರಾಣಿಗಳೂ ಕಾಣಬಹುದೇನೊ. ಸಾಮಾನ್ಯವಾಗಿ ಎಲ್ಲರೂ ದಿನಕ್ಕೊಮ್ಮೆ ಮಲಗಿದರೆ, ಬೆಕ್ಕುಗಳಂಥ ಪ್ರಾಣಿಗಳು ದಿನಕ್ಕೆ ಹಲವು ಭಾರಿ ಸಣ್ಣ ನಿದ್ರೆ ಮಾಡುತ್ತವೆ.

ನಿದ್ರೆ ಯಾವಾಗ ಮತ್ತು ಎಷ್ಟು ಇವೆರಡೂ ಮುಖ್ಯವಾದದ್ದು, ಇವು ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ, ಇದು ಆ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತ, ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ನಿದ್ದೆ ಅವಶ್ಯಕ, ನವಜಾತ ಶಿಶುಗಳು ದಿನಕ್ಕೆ 18 ತಾಸು ಮಲಗಿದರೆ, ಒಂದು ವರ್ಷದ ಮಗುವಿಗೆ 14 ತಾಸು ಸಾಕಾಗುತ್ತ, ವಯಸ್ಕರಿಗೆ ಕನಿಷ್ಟ 8 ತಾಸು ನಿದ್ರಾ ಸಮಯ ಅತ್ಯವಶ್ಯಕ.

ಒಂದು ದಿನ ನೀವು ಸರಿಯಾದ ಪೂರ್ಣ ನಿದ್ರೆ ಮಾಡದೆ ಹೋದರೆ ನಿಮಗೆ ನಿಶಕ್ತಿ, ನಿರಾಸಕ್ತಿ, ಬೇಗ ಸಿಟ್ಟು ಬರುವುದು ಇಂತಹ ಸಮಸ್ಯೆ ಬರುವುದು ಸಾಮಾನ್ಯ, ಇದೆ ರೀತಿಯಲ್ಲಿ ನೀವು ಅಲ್ಪ ನಿದ್ರೆಯನ್ನ ಮುಂದುವರೆಸಿದರೆ ಮೆದುಳಿನ ಯೋಚನಾ ಶಕ್ತಿ, ಬಾವನೆಗಳ ಮೇಲಿನ ನಿಯಂತ್ರ ಹಾಗು ನಿತ್ಯದ ಕೆಲಸದ ಮೇಲಿನ ಆಸಕ್ತಿಯನ್ನು ಕೇಳುದು ಕೊಳ್ಳಿತ್ತಿರ.

ನಿದ್ರೆ ಕಡಿಮೆ ಅಷ್ಟೇ ಅಲ್ಲದ ಎಚ್ಚು ನಿದ್ರಿಸಿದರು ನಿಮಗೆ ಖಿನ್ನತೆ ಕಾಡಲು ಶುರು ಮಾಡುತ್ತದೆ, ಎಂಟು ಗಂಟೆ ಗಿಂತ ಕಡಿಮೆ ನಿದ್ರೆ ಅಥವಾ ಹೆಚ್ಚು ನಿದ್ರಿಸುವ ಅಭ್ಯಾಸವು ನಿಮ್ಮನ್ನು ಮಾನಸಿಕ ಹಾಗು ದೈಹಿಕ ಖಿನ್ನತೆಗೆ ತಳ್ಳುತ್ತದೆ.

ನಿದ್ರಾ ಹೀನತೆ ಮೆದುಳಿನಲ್ಲಿರುವ ಹಿಪ್ಪೋಕ್ಯಾಂಪಸ್​ ಮೇಲೆ ಪರಿಣಾಮ ಬೀರುವುದರಿಂದ ನಿಮ್ಮ ದೀರ್ಘಕಾಲದ ನೆನಪಿನ ಶಕ್ತಿ, ಹೊಸ ವಿಚಾರಗಳ ಕಲಿಕೆ ಹಾಗು ನಿಮ್ಮ ಬಾವನೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

LEAVE A REPLY

Please enter your comment!
Please enter your name here