ನಮ್ಮ ಧರ್ಮಾಚರಣೆಯಲ್ಲಿ ನಾವು ಪ್ರಥಮ ಆದ್ಯತೆ ನೀಡುವುದು ಭಗವಂತನಿಗೆ, ಆದ್ದರಿಂದ ಭಗವಂತನನ್ನು ಒಲಿಸಿಕೊಳ್ಳಲು ಹಲವು ರೀತಿಯ ಪೂಜೆಗಳು, ಹೋಮಗಳು, ಪ್ರತಿ ದೇವರಿಗೂ ಹಬ್ಬಗಳು ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡುತ್ತೇವೆ, ಹಾಗೂ ಈ ಕಾರ್ಯಗಳಿಗೆ ಅಥವಾ ಪೂಜೆಗಳಿಗೆ ನಾವು ಪವಿತ್ರವೆಂದು ಭಾವಿಸುವುದು ಹಾಗೂ ಬಳಸುವುದು ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು, ಇವುಗಳು ನಾವು ಮುಖ್ಯವಾಗಿ ದೇವರಿಗೆ ನೀಡುವ ನೇವೇದ್ಯ, ಅದರಲ್ಲೂ ಒಂದು ತೆಂಗಿನಕಾಯಿ ಹಿಂದೆ ಹಲವು ಸಾಂಪ್ರದಾಯಿಕ ಅರ್ಥಗಳಿವೆ ಇದರ ಬಗ್ಗೆಯೂ ಇಂದು ನಾವು ಸಂಪೂರ್ಣವಾಗಿ ತೆಗೆದುಕೊಳ್ಳೋಣ.
ಮೊದಲಿಗೆ ಬಾಳೆ ಹಣ್ಣಿನ ಬಗ್ಗೆ ತಿಳಿದುಕೊಳ್ಳೋಣ : ನಿಮಗೆ ತಿಳಿದಿರಲಿ ಬೀಜವಿಲ್ಲದ ಹಣ್ಣು ಎಂದರೆ ಅದು ಬಾಳೆಹಣ್ಣು ಮಾತ್ರ, ಬಾಳೆಹಣ್ಣನ್ನು ಹೊರತುಪಡಿಸಿ ನೀವು ಯಾವುದೇ ಹಣ್ಣನ್ನು ನೆಲದ ಮೇಲೆ ಎಸೆದರೆ ಅದರಲ್ಲಿರುವ ಬೀಜದಿಂದ ಅದು ಮತ್ತೆ ಗಿಡವಾಗಿ ಚಿಗುರುತ್ತದೆ, ಆದರೆ ಬಾಳೆಹಣ್ಣನ್ನು ನೀವು ನೆಲದ ಮೇಲೆ ಬಿಸಾಡಿದರೆ ಅದು ಮತ್ತೆ ಗಿಡವಾಗಿ ಸಿಗುವುದಿಲ್ಲ, ಅಂದರೆ ಇದು ಪವಿತ್ರತೆಯ ಸಂಕೇತ, ಬಾಳೆಹಣ್ಣಿಗೆ ಪುನರ್ಜನ್ಮವಿಲ್ಲ, ಅದೇ ರೀತಿ ಭಕ್ತಿಯಿಂದ ನಾವು ಪೂಜೆ ಮಾಡುತ್ತಿರುವುದು ನಮಗೆ ಮತ್ತೊಂದು ಜನ್ಮ ಬೇಡ, ಇದೇ ಜನುಮಕ್ಕೆ ನಮಗೆ ಮುಕ್ತಿ ಕೊಟ್ಟು ಸ್ವರ್ಗಪ್ರಾಪ್ತಿ ಮಾಡು ಎನ್ನುವುದು ಬಾಳೆಹಣ್ಣನ್ನು ದೇವರಿಗೆ ಇಟ್ಟು ಪೂಜೆ ಮಾಡುವುದರ ಹಿಂದೆ ಇರುವ ಉದ್ದೇಶ.
ಇನ್ನೂ ತೆಂಗಿನಕಾಯಿ : ನಮ್ಮ ಪೂರ್ವಜರು ತೆಂಗಿನಕಾಯಿಯನ್ನು ಮನುಷ್ಯನ ದೇಹಕ್ಕೆ ಹೋಲಿಕೆ ಮಾಡುತ್ತಾರೆ, ತೆಂಗಿನಕಾಯಿ ಮನುಷ್ಯನ ಮುಖವಾದರೆ ಅದರ ಮೇಲಿರುವ ಚೊಟ್ಟು ಮನುಷ್ಯನ ಕೂದಲ ಅಂತೆ, ತೆಂಗಿನಕಾಯಿ ಒಳಗೆ ಇರುವ ನೀರು ಮನುಷ್ಯನ ರಕ್ತ ವಾದರೆ ಇನ್ನು ತೆಂಗಿನಕಾಯಿ ಮನುಷ್ಯನ ಮನಸ್ಥಿತಿ ಅಂತೆ, ನೀವು ಗಮನಿಸಬಹುದು ತೆಂಗಿನಕಾಯಿಯನ್ನು ಕೂಡ ನೀವು ನೆಲದ ಮೇಲೆ ಬಿಸಾಡಿದರೆ ಮತ್ತೆ ಮರವಾಗಿ ಬೆಳೆಯುವುದಿಲ್ಲ, ತೆಂಗಿನಕಾಯಿಯನ್ನು ಭಗವಂತನಿಗೆ ಅರ್ಪಿಸಿ ಪೂಜೆ ಮಾಡಲು ಇದು ಒಂದು ಮುಖ್ಯ ಕಾರಣ.
ಇಂದಿನ ಕಾಯಿಯನ್ನು ಮನುಷ್ಯನೇ ಹಾಕಿ ಹೋಲಿಕೆ ಮಾಡುತ್ತಾರೆ ಎಂದಾದರೆ, ಪೂಜೆ ಮಾಡುವಾಗ ತೆಂಗಿನ ಕಾಯಿ ಕೊಳೆತ ಸ್ಥಿತಿಯಲ್ಲಿ ನಮಗೆ ದೊರೆತರೆ ಏನು ಮಾಡಬೇಕು ಇದರ ಅರ್ಥ ಏನು ಎಂದು ಹಲವರು ಬಹಳಷ್ಟು ಯೋಚನೆ ಮಾಡುತ್ತಾರೆ, ಆದರೆ ಅಂತವರಿಗೆ ಇಂದು ನಾವು ತಿಳಿಸುವುದು ಏನೆಂದರೆ ಇದು ಯಾವುದರ ಸಂಕೇತವು ಅಲ್ಲ, ಈ ರೀತಿಯ ಕೊಳೆತ ಸ್ಥಿತಿಗೆ ಕಾಯಿಗಳು ನಿಮಗೆ ದೊರೆತರೆ ಅದನ್ನು ಸ್ವಚ್ಛಗೊಳಿಸಿ ಬೇರೆ ಕಾಯಿಯನ್ನು ನೀವು ಬಳಸಬಹುದು, ಯಾವುದೇ ಕಾರಣಕ್ಕೂ ಈ ವಿಚಾರವಾಗಿ ಭಯಭೀತರಾಗುವ ಅವಶ್ಯಕತೆ ಇಲ್ಲ.
ಇನ್ನು ತೆಂಗಿನಕಾಯಿಯ ಒಳಗಡೆ ಹೂವು ದೊರೆತರೆ ನಿಮ್ಮ ಮನೆಯಲ್ಲಿರುವ ಮಗಳು ಅಥವಾ ಸೊಸೆ ಗರ್ಭವತಿಯಾಗುತ್ತಾಳೆ ಎಂಬುದು ನಮ್ಮ ಪೂರ್ವಜರ ನಂಬಿಕೆ, ನಮ್ಮ ಧರ್ಮದಲ್ಲಿ ಇದಕ್ಕೆ ಯಾವುದೇ ಪುರಾವೆಗಳಿಲ್ಲ ಆದರೂ ಒಳ್ಳೆಯ ನಂಬಿಕೆಗಳು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ, ಆದ್ದರಿಂದ ಒಳ್ಳೆಯ ವಿಚಾರಗಳನ್ನು ಅಥವಾ ಮನಸ್ಸಿಗೆ ಹಿತ ನೀಡುವ ವಿಚಾರಗಳ ಬಗ್ಗೆಯೇ ಹೆಚ್ಚಾಗಿ ನಾವು ಗಮನ ಕೊಡುತ್ತಾ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುವ ಕೆಲವು ಮೂಢನಂಬಿಕೆಗಳಿಂದ ಬಹಳಷ್ಟು ದೂರವಿದ್ದರೆ ಒಳ್ಳೆಯದು, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ, ಹಾಗೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.