ಪ್ರತಿದಿನ ಬೆಳಗ್ಗೆ ಇದೊಂದು ಮಾತ್ರ ಜಪಿಸಿ ಶುರು ಮಾಡಿದರೆ ದಿನವೆಲ್ಲ ಧನಲಾಭ!

0
1745

ಶ್ಲೋಕಗಳು ದೇವರ ಭಾಷೆಯಾದ ಸಂಸ್ಕೃತ ದಲ್ಲಿರುವ ಭಗವಂತನ ಸ್ಮರಿಸುವ ಪದ್ಯಗಳು, ಈ ಶ್ಲೋಕಗಳನ್ನು ಪ್ರತಿದಿನ ಜಪಿಸುವುದರಿಂದ ಸಕಾರಾತ್ಮಕ ಶಕ್ತಿಗಳು ನಮ್ಮ ದೇಹವನ್ನು ಸೇರುತ್ತವೆ ಹಾಗೂ ಉತ್ತಮ ಜೀವನ ನಡೆಸುವಲ್ಲಿ ನಮಗೆ ಸಹಕಾರ ನೀಡುತ್ತವೆ, ಜೊತೆಯಲ್ಲಿ ನಮ್ಮಲ್ಲಿ ಅಥವಾ ನಮ್ಮ ಸುತ್ತಮುತ್ತಲಿನ ಎಲ್ಲಾ ನಕಾರಾತ್ಮಕ ಶಕ್ತಿ ಗಳನ್ನು ತೊಲಗಿಸಿ ನಮ್ಮ ಪರಿಸರವನ್ನು ಸಕಾರಾತ್ಮಕ ದೈವಿಕ ಶಕ್ತಿಗಳಿಂದ ತುಂಬಿರುವಂತೆ ಮಾಡುತ್ತದೆ, ಇದರಿಂದ ಮನುಷ್ಯನಿಗೆ ಯಾವುದೇ ತೊಂದರೆಗಳಾಗಲೀ ಅಥವಾ ಮಾನಸಿಕ ಹಿಂಸೆ ಗಳಾಗಲಿ, ಪ್ರತಿಬಾರಿಯೂ ಸೋಲುವುದು ಆಗಲಿ ಇರುವುದಿಲ್ಲ, ಒಂದು ಉತ್ತಮ ಜೀವನ ನಮ್ಮನ್ನು ಕೈಹಿಡಿದು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ, ಸುಖ ಶಾಂತಿ ನೆಮ್ಮದಿ ನಮ್ಮಲ್ಲಿಯೇ ನೆಲೆಸುತ್ತದೆ.

ಮಕ್ಕಳಿಗೆ ಈ ರೀತಿಯ ಹುಮ್ಮಸ್ಸು ಅಥವಾ ಧೈರ್ಯ ಸಕಾರಾತ್ಮಕ ಶಕ್ತಿಗಳ ಅವಶ್ಯಕತೆ ಹೆಚ್ಚಾಗಿರುತ್ತದೆ, ಆದ್ದರಿಂದ ಮಕ್ಕಳಿಗೆ ಕೆಲವು ಶ್ಲೋಕಗಳನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ನಮ್ಮ ಧರ್ಮದಲ್ಲಿ ಹಲವುಕಡೆ ಉಲ್ಲೇಖವಾಗಿದೆ, ಆದರೆ ಕ್ಲಿಷ್ಟಕರ ಸಂಸ್ಕೃತ ಶ್ಲೋಕಗಳನ್ನು ಮಕ್ಕಳು ಹೇಳುವುದು ಕಷ್ಟ, ಇಂದು ನಾವು ನಿಮಗೆ ತೆಗೆಸುವ ಮಕ್ಕಳಿಗೆ ಕಲಿಸಬಹುದಾದ ಸುಲಭ ಹಾಗೂ ಸರಳ ಶ್ಲೋಕಗಳು ಇಂತಿವೆ.

ಓಂ ಸಹನಾ ಭವತುಃ ಸಹನೋ ಭುನಕ್ತುಃ ಸಹವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿ ಶಾಂತಿ ಶಾಂತಿ.

ಶ್ಲೋಕದ ಅರ್ಥ ಹೀಗಿದೆ : ನಮ್ಮೆಲ್ಲರನ್ನೂ ದೈವಿಕ ಶಕ್ತಿ ರಕ್ಷಿಸಲಿ, ಎಲ್ಲರೂ ಜೊತೆಯಾಗಿ ಆಹಾರ ಸೇವಿಸೋಣ, ಅಗಾಧವಾದ ಶಕ್ತಿಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ನಮ್ಮೆಲ್ಲರ ಬೌದ್ಧಿಕ ಬೆಳವಣಿಗೆ ಮತ್ತಷ್ಟು ವೃದ್ಧಿಯಾಗಲಿ. ನಮ್ಮೆಲ್ಲರ ನಡುವೆ ವೈರತ್ವ ಬಾರದೇ ಇರಲಿ ಎಂಬುದು ಈ ಶ್ಲೋಕದ ಅರ್ಥವಾಗಿದೆ.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ: ಈ ಶ್ಲೋಕವನ್ನು ಮಕ್ಕಳಿಗೆ ಕಲಿಸುವುದರಿಂದ ಮಕ್ಕಳಲ್ಲಿ ಬಾಲ್ಯದಿಂದಲೇ ಬೋಧನೆ ಮಾಡುವ ಗುರುಗಳ ಬಗ್ಗೆ ಗೌರವಾದರಗಳು ಬೆಳೆಯುತ್ತವೆ. ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವರಿಗೆ ಹೋಲಿಕೆ ಮಾಡಲಾಗಿದ್ದು, ಗುರುವೇ ಸಾಕ್ಷಾತ್ ಪರಬ್ರಹ್ಮ ಎಂಬ ಅರ್ಥವನ್ನು ಈ ಶ್ಲೋಕ ನೀಡುತ್ತದೆ.

LEAVE A REPLY

Please enter your comment!
Please enter your name here