ಲಾಕ್ ಡೌನ್ ನಲ್ಲಿ ಗುಡ್ಡವನ್ನೇ ಕೆಡವಿ ಈ ಶಿಕ್ಷಕ ಏನು ಮಾಡುತ್ತಿದ್ದಾರೆ ನೋಡಿ

0
1239

ವರ್ಕ್ ಫ್ರಮ್ ಹೋಂ ಕೆಲಸ ಇದ್ದವರನ್ನು ಬಿಟ್ಟರೆ ಜಗತ್ತಿನಾದ್ಯಂತ ಎಲ್ಲರಿಗು ಒಂದೇ ಯೋಚನೆ ಲಾಕ್ ಡೌನ್ ಸಮಯವನ್ನು ಹೇಗೆ ಕಳಿಯುವುದು ಮತ್ತು ಹೇಗೆ ಹಣವನ್ನು ದುಡಿಯುವುದು ಎಂದರೆ ತಪ್ಪಾಗಲಾರದು, ಲಾಕ್ ಡೌನ್ ಸಂಧರ್ಭವನ್ನು ಸಮರ್ಪಕವಾಗಿ ಹಲವರು ಬಳಸಿಕೊಳ್ಳುತ್ತಿದ್ದಾರೆ, ಆದರೆ ಈ ಸಮಯವನ್ನು ಅತ್ಯದ್ಭುತವಾಗಿ ಬಳಸಿಕೊಂಡಿರುವ ಶಾಲಾ ದೈಹಿಕ ಶಿಖರ ಸೂಪರ್ ವರದಿಯೊಂದನ್ನ ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಸಂಪೂರ್ಣವಾಗಿ ಒಮ್ಮೆ ಓದಿಬಿಡಿ.

ದಿನೇಶ್ ಮುದೂರಿ ಹಾಲಾಡಿ ಗ್ರಾಮದ ಮುದೂರಿನ ನಿವಾಸಿಯಾಗಿದ್ದು ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ, ಲಾಕ್ ಡೌನ್ ಸಮಯದಲ್ಲಿ ಏನು ಮಾಡಬೇಕು ಎಂಬುದು ಇವರಿಗೆ ಬಹಳ ಸಮಯ ಚಿಂತಿಸಿದರು ಯಾವುದೇ ಐಡಿಯಾ ಬರಲಿಲ್ಲ ಆದರೆ ಕೆಲವು ದಿನಗಳ ನಂತರ ತಮ್ಮ ಮನೆಯ ಅರ್ಧ ಕಿಲೋಮೀಟರ್ ಪಕ್ಕದಲ್ಲಿ ಇದ್ದ ಗುಡ್ಡವೊಂದನ್ನು ನೋಡಿ ಸಖತ್ ಐಡಿಯಾ ಒಂದು ಬರುತ್ತದೆ ಅದೇ ಈ ಗುಡ್ಡವನ್ನು ಮಟ್ಟ ಮಾಡಿ ಅಲ್ಲಿ ಸಾವಯವ ಕೃಷಿ ಮಾಡುವುದು.

ಆದರೆ ಗುಡ್ಡ ಮಟ್ಟ ಮಾಡಲು ಕೂಲಿ ಕಾರ್ಮಿಕರು ಈ ಸಂಧರ್ಭದಲ್ಲಿ ಸಿಗುವುದಿಲ್ಲ ಆದ್ದರಿಂದ ಛಲಬಿಡದೆ ಒಬ್ಬರೇ ನಿಂತು ಸಂಪೂರ್ಣ ಗುಡ್ಡವನ್ನು ಮಟ್ಟ ಮಾಡಿದ್ದಾರೆ, ನಂತರ ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಹಟ್ಟಿ ಗೊಬ್ಬರ ಬಳಸಿ ಬೆಳೆಯನ್ನು ಬೆಳೆಯಲು ಮುಂದಾರು, ಕಾಡು ಪ್ರಾಣಿಗಳ ಕಾಟಕ್ಕೆ ಬೇಲಿಯನ್ನು ಹಾಕಿದರು, ನೀರಿನ ವ್ಯವಸ್ಥೆ ಸಹ ಇತ್ತು ಈಗ ಈ ಕೈತೋಟದಲ್ಲಿ ಸೌತೆ, ಬೆಂಡೆಕಾಯಿ, ಅಲಸಂಡೆ ಬೆಳೆದಿದ್ದಾರೆ. ಸೌತೆ ಬಳ್ಳಿ ಕಾಯಿ ಬಿಟ್ಟಿದ್ದು, ಅಲಸಂಡೆ ಬಳ್ಳಿ, ಬೆಂಡೆ ಗಿಡ ಇನ್ನಷ್ಟು ಬೆಳೆಯಬೇಕಿದೆ.

ಇದರಿಂದ ಸಾಕಷ್ಟು ಖುಷಿಯಲ್ಲಿರುವ ದಿನೇಶ್ ಮುದೂರಿ ಲಾಕ್‌ಡೌನ್‌ ಸಮಯವನ್ನು ಹೇಗೆ ಕಳೆಯುವುದೆಂದು ಯೋಚಿಸುತ್ತಿದ್ದಾಗ ತರಕಾರಿ ಕೃಷಿ ಮಾಡುವ ಯೋಚನೆ ಬಂತು. ಉತ್ತಮ ನೀರು ಕೂಡ ಇರುವುದರಿಂದ ಬೆಂಡೆ, ಅಲಸಂಡೆ, ಸೌತೆ ಬಳ್ಳಿಗಳು ಉತ್ತಮವಾಗಿ ಬೆಳೆಯುತ್ತಿದೆ. ಸಾವಯವ ಗೊಬ್ಬರವೇ ಹಾಕಿರುವುದರಿಂದ ಉತ್ತಮ ಇಳುವರಿಯ ನಿರೀಕ್ಷೆಯಿದೆ ಎಂದರು, ಈ ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೆ ನಿಮ್ಮ ಸ್ನೇಹಿತರೊಂದಿ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here