ಸೋರೆಕಾಯಿಂದ ಪಲ್ಯ, ಕಾಳು ಹುಳಿ, ಮಜ್ಜಿಗೆ ಹುಳಿ ತಯಾರಿಸಿದರೆ ತಿನ್ನಲು ಚೆನ್ನ ಬೆಂದ ಸೋರೆಕಾಯಿ ದೇಹಕ್ಕೆ ತಂಪನ್ನುಂಟುಮಾಡುವ ಖಾದ್ಯ ವಸ್ತು ಇದು ಗರ್ಭಿಣಿಯರಿಗೆ ಉತ್ತಮ ಆಹಾರ.
ಸೋರೆಕಾಯಿ ಮಾನಸಿಕ ಕ್ರಿಯೆಯ ವೇಗವನ್ನು ಸ್ಥಗಿತಗೊಳಿಸುವ ಗುಣ ಹೊಂದಿರುವುದು ಇದನ್ನು ಸೇವಿಸಿದ ನಂತರ ಮನಸ್ಸಿಗೆ ಒಂದು ಬಗೆಯ ನಿಷ್ಕ್ರಿಯ ಅಥವಾ ಅನುತೇಜಕ ಸ್ಥಿತಿಉಂಟಾಗುತ್ತದೆ.
ಸೋರೆಕಾಯಿ ಸೇವಿಸುವುದರಿಂದ ವೀರ್ಯವೃದ್ಧಿಯಾಗುವುದು ಮತ್ತು ವೀರ್ಯಸ್ಕಲನ ತಡೆದು ಆಗುವುದು.

ಸೋರೆಕಾಯಿ ಇಂದ ತಯಾರಿಸಿದ ಸಾರು ಕ್ಷಯ, ಉನ್ಮಾದ, ಅಧಿಕ ರಕ್ತದ ಒತ್ತಡ, ಮೂಲವ್ಯಾಧಿ, ಮಧುಮೇಹ, ಕಾಮಾಲೆ, ಜಠರದ ಹುಣ್ಣು ಇತ್ಯಾದಿಗಳಿಂದ ವ್ಯಾಧಿಗಳಿಂದ ನರಳುವ ರೋಗಿಗಳಿಗೆ ಉತ್ತಮ ಆಹಾರ.
ಸೋರೆಕಾಯಿ ತುರಿದು ಹಿಂಡಿದರೆ ರಸ ಹೊರಡುವುದು ಒಂದು, ಬಟ್ಟಲು ಹೇೂಳು ರಸಕ್ಕೆ ಒಂದು ಹೋಳು ನಿಂಬೆರಸ ಹಿಂಡಿ ದಿನಕ್ಕೆರಡು ಬಾರಿ ಸೇವಿಸಿದರೆ ಮೂತ್ರವಿಸರ್ಜನೆಯ ಕಾಲದಲ್ಲಿ ಉರಿಯಾಗುತ್ತಿದ್ದ ಪಕ್ಷದಲ್ಲಿ ಗುಣ ಕಂಡುಬರುವುದು.
ಒಂದು ಬಟ್ಟಲು ಸೋರೆಕಾಯಿ ರಸಕ್ಕೆ ಸ್ವಲ್ಪ ಉಪ್ಪು ಸೇರಿಸಿ ದಿನಕ್ಕೊಂದು ಬಾರಿ ಸೇವಿಸಿದರೆ ಬಹಳ ಕಾಲದಿಂದ ಗುಣವಾಗದ ಮಲಬದ್ಧತೆ ಪರಿಹಾರವಾಗಿ ಜೀರ್ಣಕ್ರಿಯೆ ಹೆಚ್ಚುವುದು.
ಅಂಗೈ, ಅಂಗಾಲು ಉರಿಯುತ್ತಿದ್ದರೆ ಮತ್ತು ಮೖ ನವೆಯಾಗುತ್ತಿದ್ದರೆ ಸೋರೆಕಾಯಿರಸ ಲೇಪಿಸುವುದರಿಂದ ಗುಣ ಕಂಡುಬರುವುದು.