ಸಾಸಿವೆ ಎಣ್ಣೆಯ 30 ಸೆಕೆಂಡಿನ ಕಮಾಲ್ ಕೇಳಿದರೆ ಶಾಕ್ ಆಗ್ತೀರಾ!

0
1371

ಬಾಯಿಯ ವಾಸನೆ ಎಲ್ಲರಲ್ಲೂ ಕಂಡು ಬರುತ್ತದೆ, ಇದರ ಅನುಭವ ಪ್ರತಿಯೊಬ್ಬರಿಗೂ ಆಗಿರುತ್ತದೆ, ಕೆಲವರು ಬಾಯಿ ಬಿಟ್ಟರೆ ಸಾಕು ಎದುರಿಗೆ ಇರುವವರು ಮೂಗು ಮುಚ್ಚಿಕೊಳ್ಳುವಷ್ಟು ವಾಸನೆ ಬರುತ್ತದೆ, ಇಂತಹವರು ಕೆಲವು ವಿಧಾನಗಳನ್ನ ಅನುಸರಿಸಿದರೆ ಬಾಯಿಯ ವಾಸನೆಯಿಂದ ಮುಕ್ತಿ ಪಡೆಯ ಬಹುದು, ಅಂತಹ ಕೆಲವು ವಿಧಾನಗಳಲ್ಲಿ ಕೆಲವು ಇಲ್ಲಿವೆ ನೋಡಿ.

ದಾಲ್ಚಿನಿ : ದಾಲ್ಚಿನಿಯಲ್ಲಿ ಬ್ಯಾಕ್ಟೀರಿಯ ನಿರೋಧಕ ಗುಣ ಇದೆ, ಇದು ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುತ್ತದೆ, ಇದನ್ನು ಹಾಗೆಯೇ ತಿನ್ನಬಹುದು, ಇಲ್ಲವೇ ಚಹಾದಲ್ಲಿ ಹಾಕಿ ಕುಡಿಯಬಹುದು. ಬಿಸಿ ನೀರಿಗೆ ಹಾಕಿಯೂ ಸೇವಿಸಬಹುದು.

ಗ್ರೀನ್ ಟೀ : ನಿಮ್ಮ ಉಸಿರನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿದಿನ ಒಂದು ಕಪ್ ಗ್ರೀನ್ ಟೀ ಉತ್ತಮ.

ನೀರು : ನೀರನ್ನ ನಾವು ಪದೇ ಪದೇ ಕುಡಿಯುವುದರಿಂದ ಬಾಯಿಯ ವಾಸನೆಯನ್ನ ದೂರ ಮಾಡಬಹುದು.

ಸೋಂಪು : ಸೋಂಪು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಊಟದ ನಂತರ ಇದನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆ ಸುಲಭವಾಗುತ್ತದೆ. ಕೆಟ್ಟ ಉಸಿರಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಸಾಯಿಸುವುದಲ್ಲದೇ, ಗ್ಯಾಸ್ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ಪುದೀನಾ : ಮೌತ್ ಪ್ರೆಶನರ್ ಗಳಲ್ಲಿ ಪುದೀನಾ ಬಳಸುತ್ತಾರೆ. ಅದು ತಂಪನೆ ಅನುಭವ ನೀಡುತ್ತದೆ. ಅದರ ಚಹಾ ಕುಡಿಯುವುದರಿಂದ ಅಥವಾ ಹಾಗೇ ಪುದಿನಾ ತಿನ್ನುವುದರಿಂದ ದುರ್ವಾಸನೆ ಹೋಗಲಾಡಿಸಬಹುದು.

ಏಲಕ್ಕಿ : ಇದರ ಕಾಳುಗಳನ್ನು ಬಾಯಲ್ಲಿ ಹಾಕಿ ಜಗಿಯುಬೇಕು. ಊಟದ ನಂತರ ಏಲಕ್ಕಿ ಚಹಾ ಕುಡಿಯಬಹುದು ಇದರಿಂದ ದುರ್ವಾಸನೆ ದೂರವಾಗುತ್ತದೆ.

ಸಾಸಿವೆ ಎಣ್ಣೆ : ಒಂದು ಚಮಚ ಸಾಸಿವೆ ಎಣ್ಣೆಯನ್ನು ಬಾಯಲ್ಲಿ 30 ಸೆಕೆಂಡ್ ಇಟ್ಟುಕೊಂಡು ನಂತರ ಉಗಿಯಿರಿ ಇದರಿಂದ ಬಾಯಿಯ ವಾಸನೆ ಕಡಿಮೆಯಾಗುತ್ತದೆ.

LEAVE A REPLY

Please enter your comment!
Please enter your name here