ಮಲಬದ್ಧತೆ ನೀಗಿಸಲು ಸುಲಭ ಮನೆಮದ್ದು.

0
1207

ಮಲಬದ್ಧತೆ ಬಹಳ ತೊಂದರೆ ಕೊಡುವ ರೋಗ. ನೀವು ಈ ರೋಗದಿಂದ ಪಾರ್ ಆಗದಿದ್ದರೆ ಅನೇಕ ರೋಗಗಳು ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತವೆ ನಾವು ಕೆಲವು ಸೂಚನೆಗಳನ್ನು ಕೊಟ್ಟಿದೀವಿ ಕೆಳಗೆ ಓದಿ.

ಪ್ರತಿನಿತ್ಯ ಕನಿಷ್ಠ ಎಂಟು ಲೋಟ ನೀರನ್ನಾದರೂ ಕುಡಿಯಬೇಕು. ದೇಹದಲ್ಲಿ ಇರುವ ನೀರಿನ ಅಂಶ ಮಲವಿಸರ್ಜನೆಗೆ ಸಹಾಯಕಾರಿಯಾಗುತ್ತದೆ.

ಹರಳೆಣ್ಣೆಯನ್ನು ತಯಾರಿಸಲು ಅರಳು ಕಾಳುಗಳನ್ನು ಉಪಯೋಗಿಸುವವರು ಹರಳು ಗಿಡದ ಎಳೆಯ ಎಲೆಗಳನ್ನು ತರಕಾರಿಯಂತೆ ಬಳಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

ಕೋಸು ಮಲಬದ್ಧತೆ ನಿವಾರಿಸುವುದರ ಲ್ಲಿ ಮುಖ್ಯವಾದ ಪಾತ್ರ ಹೊಂದಿದ್ದು. ಕೋಸನ್ನು ಸಣ್ಣಗೆ ಹೆಚ್ಚಿ ನಿಂಬೆರಸ, ಉಪ್ಪು, ಕಾಳುಮೆಣಸಿನ ಪುಡಿಯನ್ನು ಸೇರಿಸಿ ಆಗಾಗ್ಗೆ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ.

ಅತಿಯಾದ ಮಲಬದ್ಧತೆಯಿಂದ ನರಳುವವರು ಪ್ರತಿದಿನ ಸೇಬನ್ನು ಸೇವಿಸಬೇಕು ಅದಲ್ಲದೆ ಸೇಬಿನಲ್ಲಿ ಅತ್ಯುತ್ತಮವಾದ ಜೀವಸತ್ವ ಇದ್ದು ಮಲಬದ್ಧತೆಗೆ ಸೇಬು ರಾಮಬಾಣ ವಾಗಿರುತ್ತದೆ.

ಹರಳೆಣ್ಣೆಯನ್ನು ಮೈಯಿಗೆ ತಿಕ್ಕಿ ಸ್ನಾನ ಮಾಡುವುದರಿಂದ ಮಲಬದ್ಧತೆ ಸ್ವಲ್ಪಮಟ್ಟಿಗೆ ನಿವಾರಿಸಬಹುದು.

ಮಲಬದ್ಧತೆಯಿಂದ ದೇಹದ ರಕ್ತವು ಕೆಡುತ್ತದೆ ರಕ್ತವನ್ನು ಶುಚಿಗೊಳಿಸುವ ಮೂಲಕ ಮಲಬದ್ಧತೆಯಿಂದ ದೂರ ಇರಬಹುದು.

ದೇಹದ ಕಲ್ಮಶವ ಹೊರ ಬೀಳದಿದ್ದರೆ ಆಹಾರ ಸೇವನೆ ಮಾಡಲಾಗದು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಆಗ ಮಲಬದ್ಧತೆ ನಿಮ್ಮ ಬಳಿ ಸುಳಿಯೋದಿಲ್ಲ.

LEAVE A REPLY

Please enter your comment!
Please enter your name here