ಸಾಮಾನ್ಯವಾಗಿ ಪ್ರತಿಯೊಂದು ಹಣ್ಣಿನಲ್ಲಿ ಹಲವು ರೋಗ ನಿರೋಧಕ ಶಕ್ತಿ ಇರುತ್ತದೆ ಆದರೆ ಪ್ರತಿ ಹಣ್ಣುಗಳು ತನ್ನದೇ ಆದ ವೈಶಿಷ್ಠ್ಯತೆ ಜೊತೆಗೆ ವಿಶಿಷ್ಟ ಗುಣಗಳನ್ನು ಹೊಂದಿರುತ್ತದೆ ಹಾಗಾಗಿ ನಾವು ನಮ್ಮ ಬರವಣಿಗೆಯಲ್ಲಿ ಹಣ್ಣುಗಳ ಅರೋಗ್ಯ ಗುಣಗಳ ಬೆಗ್ಗೆ ಮತ್ತು ಅವುಗಳನ್ನು ಬಳಸುವ ಸರಿಯಾದ ವಿಧಾನಗಳ ಬಾಗೆ ಆಗಾಗ ಮಾಹಿತಿ ನೀಡುತ್ತೇವೆ, ಅದರಂತೆ ಇಂದು ದ್ರಾಕ್ಷಿ ಹಣ್ಣಿನ ಬಗ್ಗೆ ಕೆಲವು ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದೇವೆ ಒಮ್ಮೆ ಸಂಪೂರ್ಣವಾಗಿ ಓದಿರಿ.
ದ್ರಾಕ್ಷಿ ಹಣ್ಣು ಹೆಚ್ಚಾಗಿ ಸಿಹಿಮೂತ್ರ ( ಸಕ್ಕರೆ ಕಾಯಿಲೆ ) ರೋಗಿಗಳಿಗೆ, ನರಗಳ ನವಚೈತನ್ಯತೆ, ಅಲ್ಸರ್ ನ ತೊಂದರೆಗೆ ಹಾಗೂ ರಕ್ತದ ಹಿಮೋಗ್ಲೋಬಿನ್ ವೃದ್ಧಿಗಾಗಿ, ಮಲಬದ್ಧತೆಯಿಂದ ನರಳುವವರಿಗೆ ದ್ರಾಕ್ಷಿಹಣ್ಣು ಸಹಾಯಮಾಡುತ್ತದೆ ಎಂದು ಹಲವು ಸಂಶೋದನೆಗಳು ತಿಳಿಸಿವೆ ಹಾಗು ನಮ್ಮ ಆಯುರ್ವೇದ ಕೂಡ ಇದನ್ನೇ ಹೇಳುತ್ತದೆ.
ದ್ರಾಕ್ಷಿಹಣ್ಣು ಮೂರು ನಾಲ್ಕು ಬಗೆಯಲ್ಲಿ ಇರುತ್ತದೆ ಈ ಪೈಕಿ ಕರಿ ಬಣ್ಣದ ದ್ರಾಕ್ಷಿ ಆರೋಗ್ಯಕ್ಕೆ ಇನ್ನೂ ಉತ್ತಮ, ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತ ವೃದ್ಧಿ ಮತ್ತು ನರದೌರ್ಬಲ್ಯ ಶಮನವಾಗುತ್ತದೆ.
ಬಿಳಿ ದ್ರಾಕ್ಷಿ ಹಣ್ಣಿನ ರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸುವುದರಿಂದ ರಕ್ತ ವೃದ್ದಿಯಾಗುತ್ತದೆ ಹಾಗೂ ನರಗಳಲ್ಲಿ ನವಚೈತನ್ಯ ತುಂಬಿಕೊಳ್ಳುತ್ತದೆ.
ದ್ರಾಕ್ಷಿ ಹಣ್ಣಿನ ರಸವನ್ನು ಸಿಹಿಮೂತ್ರ ರೋಗಗಳಿಗೆ ಸಕ್ಕರೆ ಹಾಕದೆ ಕೊಟ್ಟರೆ ಬೇಗ ಗುಣ ಆಗುತ್ತದೆ, ಬಿಳಿ ದ್ರಾಕ್ಷಿಯನ್ನು ಆಗಾಗ್ಗೆ ತಿನ್ನುತ್ತಿದ್ದರೆ ಹೊಟ್ಟೆ ಹುಣ್ಣು ಗುಣವಾಗುವುದು ಅಲ್ಲದೆ ಶರೀರದಲ್ಲಿ ರಕ್ತವನ್ನು ಕೂಡ ಶುಚಿಗೊಳಿಸುತ್ತದೆ.
ಹಾಗೂ ಒಣದ್ರಾಕ್ಷಿಯನ್ನು ತಿನ್ನುತ್ತಿದ್ದರೆ ಶರೀರದಲ್ಲಿ ಶುದ್ಧ ರಕ್ತ ವೃದ್ಧಿಯಾಗುವುದು, ಕರಿಯ ದ್ರಾಕ್ಷಿಯನ್ನು ತಿಂದರೆ ಹೊಟ್ಟೆ ಉಬ್ಬರ, ಹುಳಿತೇಗು ಮತ್ತು ಅಜೀರ್ಣ, ಮಲಬದ್ಧತೆ ಕೂಡ ನಿವಾರಣೆಯಾಗುವುದು.
ಹಣ್ಣು ತಿನ್ನುವುದು ಒಳ್ಳೆ ಅಭ್ಯಾಸ ಆದ್ರೆ ನಾವು ತಿನ್ನೋ ಹಣ್ಣಿನಲ್ಲಿ ಇಷ್ಟೆಲ್ಲ ರೋಗ ನಿವಾರಣೆ ಅಂಶಇದೆ ಅದು ನಮ್ಮ ದೇಹಕ್ಕೆ ಸಹಾಯ ಮಾಡುತ್ತೆ ಅಂದ್ರೆ ಯಾಕೆ ಬಿಡಬೇಕು ಹೇಳಿ..?