ಈ ಭೂ ಮಂಡಾಳ ಅನ್ನೋದೇ ಒಂದು ವಿಸ್ಮಯ ಲೋಕ ಎಲ್ಲಿ ನೋಡಿದರು ಎಲ್ಲಿ ಹುಡುಕಿದರೂ ನಮಗೆ ಆಶ್ಚರ್ಯವನ್ನು ತೋರಿಸುತ್ತದೆ ಇನ್ನು ಭೂಮಿ ತಾನು ಬಚ್ಚಿಟ್ಟು ಕೊಂಡಿರುವ ವಸ್ತುಗಳನ್ನು ಆಗಾಗ ಮನುಷ್ಯನಿಗೆ ತೋರಿಸಿ ಬೆರಗಾಗುವಂತೆ ಮಾಡುತ್ತದೆ, ಒಬ್ಬ ವೆಕ್ತಿ ಅರಣ್ಯದಲ್ಲಿ ನೆಡೆದುಕೊಂಡು ಹೋಗುತ್ತಿದ್ದಾಗ ಆ ವ್ಯಕ್ತಿಗೆ ಸಿಕ್ಕಿದ್ದು ಏನು ಗೊತ್ತಾ ಆತ ಅದನ್ನು ಕನಸ್ಸಿನಲ್ಲೂ ಊಹೆ ಮಾಡಿರಲಿಲ್ಲ ಅಲ್ಲಿ ಸಿಕ್ಕಿದ್ದು ಚಿನ್ನ ಅಥವಾ ವಜ್ರ ಅಲ್ಲ ಹಾಗಾದ್ರೆ ಸಿಕ್ಕಿದ್ದು ಏನು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಸಂಪೂರ್ಣವಾಗಿ ಓದಿರಿ.
ಸಾಮಾನ್ಯವಾಗಿ ವಿದೇಶಿಗರಲ್ಲಿ ಒಂದು ಹವ್ಯಾಸ ಇದೆ ಅದು ಏನು ಅಂದ್ರೆ ರಜೆಗಳಲ್ಲಿ ಹಾಗು ವೀಕೆಂಡ್ ಗಳಲ್ಲಿ ಒಂದು ಮೆಟಲ್ ಡಿಟೆಕ್ಟಾರ್ ಇಟ್ಟುಕೊಂಡು ಐತಿಹಾಸಿಕ ಸ್ಥಳಗಳಿಗೆ ಹಾಗು ಪುರಾತನ ಸ್ಥಳಗಳಿಗೆ ಹೋಗಿ ನಮಗೇನಾದ್ರು ಸಿಗುತ್ತಾ ಎಂದು ಹುಡುಕುತ್ತಾರೆ, ಹೀಗೆ ಮಾಡಿ ಎದೆಷ್ಟೋ ಜನ ಇವತ್ತು ಮಿಲೇನಿಯರ್ ಗಳಾಗಿದ್ದಾರೆ ಇನ್ನು ಕೆಲವರು ತಮಗೆ ಸಿಕ್ಕ ಅಪರೂಪದ ವಸ್ತುಗಳನ್ನು ಮ್ಯೂಸಿಯಂ ನಲ್ಲಿ ಇಟ್ಟು ತಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುತ್ತಾರೆ.
ಅದೇ ರೀತಿ ರಷ್ಯಾಗೆ ಸೇರಿದ ಒಬ್ಬ ವ್ಯಕ್ತಿ ನನಗು ಏನಾದರೂ ಸಿಗಬಹುದು ಎಂದು ಆಲೋಚನೆ ಮಾಡಿ ಮೆಟಲ್ ಡಿಟೆಕ್ಟಾರ್ ಅನ್ನು ತೆಗೆದುಕೊಂಡು ಹೋಗಿ ಹುಡುಕಾಡಿದ ಆದರೆ ಏನು ಸಿಗಲಿಲ್ಲ ಆಗ ಸುಮ್ಮನೆ ಡಿಟೆಕ್ಟಾರ್ ಅನ್ನು ಕೈ ಯಲ್ಲಿ ಹಿಡಿದುಕೊಂಡು ಅರಣ್ಯದಲ್ಲಿ ಸುಮ್ಮನೆ ಹೋಗುತ್ತಿದ್ದಾಗ ಅದು ಸಡನ್ ಆಗಿ ಶಬ್ದ ಮಾಡಿದೆ, ಇದರಿಂದ ಆಶ್ಚರ್ಯ ಗೊಂಡ ವ್ಯಕ್ತಿ ಇಲ್ಲಿ ಭೂಮಿಯೊಳಗೆ ಏನಿರಬಹುದು ಎಂದು ಅಗೆದು ನೋಡಿ ಒಂದು ಕ್ಷಣ ಆಶ್ಚರ್ಯ ಚಿಕಿತನಾದ ಭೂಮಿಯನ್ನು ಅಗೆಯುವಾಗ ಮೊದಲಿಗೆ ಒಂದು ಐರನ್ ಟ್ಯಾಂಕ್ ಕಾಣಿಸಿತು ಇನ್ನಷ್ಟು ಅಗೆದು ನೋಡಿದಾಗ ಆತನಿಗೆ ಸಿಕ್ಕಿದ್ದು ಒಂದು ಸುಂದರವಾದ ಬೈಕ್.
ಅದರ ಹೆಸರು ಕ್ರಿಸ್ನಿ ವಕ್ತ್ಯ ಬರ್ಗ್ ಇದನ್ನು ಲ್ಯೂಸ್ಸ್ಸ್ ಕಂಪನಿ ಎರಡನೇ ಮಹಾಯುದ್ದಕ್ಕೂ ಮುಂಚೆ ತಯಾರು ಮಾಡುತ್ತಿತ್ತು, ಭೂಮಿಯಲ್ಲಿ ಸಿಕ್ಕ ಈ ಬೈಕ್ ಅನ್ನು ನಗರಕ್ಕೆ ತೆಗೆದುಕೊಂಡು ಹೋಗಿ ಪರಿಶೀಲಿಸಿದಾಗ ಇದು ಎಂಬತ್ತು ವರ್ಷದ ಹಿಂದಿನ ಬೈಕ್ ಎಂದು ಗೊತ್ತಾಗಿದೆ, ಎರಡನೇ ಮಹಾಯುದ್ಧದ ಸಮಯದಲ್ಲಿ ಯಾವುದೋ ಕಾರಣಕ್ಕೆ ಈ ಬೈಕ್ ಹೂತಿಹೋಗಿರಬಹುದು ಎಂಬತ್ತು ವರ್ಷಗಳ ಸಿಕ್ಕಿದರು ಇನ್ನು ನೋಡೋಕೆ ಗಟ್ಟಿಯಾಗಿರುವ ಈ ಬೈಕ್ ನೋಡಿ ಜನ ಬೆರಗಾಗಿದ್ದು ನಿಜ ಇಂತಹ ಅಪರೂಪದ ಬೈಕ್ ಅನ್ನು ಆಕ್ಷನ್ ನಲ್ಲಿ ಇಟ್ಟರೆ ಖಂಡಿತ ಲಕ್ಷಾನು ಘಟ್ಟನೆ ಹಣ ಕೈಗೆ ಬರುತ್ತದೆ ಎಂದು ತುಂಬಾ ಜನ ಹೇಳಿದರು ಅದಾವುದರ ಬಗ್ಗೆ ಆಲೋಚನೆ ಮಾಡದ ಈ ವ್ಯಕ್ತಿ ಬೈಕ್ ಅನ್ನು ಮ್ಯೂಸಿಯಂ ಗೆ ಕೊಟ್ಟಿದ್ದಾರೆ, ಈಗ ಈ ಅಪುರೂಪದ ಬೈಕ್ ನನ್ನ ಮ್ಯೂಸಿಯಂ ನಲ್ಲಿ ಇಟ್ಟಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.