ನೀವು ಉಪವಾಸದ ಆಚರಣೆ ಮಾಡುತ್ತೀರಾ ಹಾಗಾದರೆ ತಪ್ಪದೆ ಈ ಮಾಹಿತಿ ನೋಡಿ

0
1000

ಲಂಘನಂ ಪರಮೌಷಧಂ ಎಂದು ಹೇಳುವುದುಂಟು, ಉಪವಾಸವೇ ಆರೋಗ್ಯ ಅಜೀರ್ಣವೇ ಮಹಾರೋಗ ಎಂದು ನಮ್ಮ ಹಿರಿಯರು ಯಾವಾಗಲೂ ಹೇಳುತ್ತಿದ್ದರು ನಿಮ್ಮ ಕಣ್ಣಿ ಕಾಣುವ ದೇಹದ ಅಂಗಗಳಿಗೆ ಹೇಗೆ ನೀವು ವಿಶ್ರಾಂತಿ ನೀಡುತ್ತಿರೋ ಹಾಗೆ ನಿಮ್ಮ ದೇಹದ ಒಳಗೆ ನಿಮಗೆ ಕಾಣದ ಅಂಗಗಳಿಗೂ ವಿಶ್ರಾಂತಿ ನೀಡುವುದರ ಹೆಸರೇ ಉಪವಾಸ, ಒಂದು ಹೊತ್ತು ಉಪವಾಸವನ್ನು ಆಚರಿಸಿದಲ್ಲಿ ಶರೀರದ ಅಂಗಾಂಗಗಳೆಂಬ ಮಾನವ ಯಂತ್ರಗಳಿಗೆ ಸ್ವಲ್ಪವಾದರೂ ಬಿಡುವು ಕೊಟ್ಟು ಮತ್ತೆ ತುಂಬಾ ಚುರುಕುಗೊಳ್ಳಲು ಕಾರಣವಾಗುತ್ತದೆ.

ಕೆಲವರು ದಿನಕ್ಕೊಂದು ಬಾರಿ ಉಪವಾಸ ಆಚರಿಸುತ್ತಾರೆ ಇದು ಧಾರ್ಮಿಕ ಭಾವನೆಯಿಂದ ಇರಬಹುದು ಆದರೆ ಅದು ತಪ್ಪು ವಾರಕ್ಕೆ ಒಮ್ಮೆ ಉಪವಾಸ ಇದ್ದರೆ ಸಾಕು.

ರೋಗವಿಲ್ಲದೆ ಇರಬೇಕಾದರೆ ತಿಂಗಳಿಗೆ ಒಂದು ಬಾರಿಯಾದರೂ ನಿರಾಹಾರ ವ್ರತ ಆಚರಿಸಬೇಕಾದ್ದು ಅಗತ್ಯ, ಉಪವಾಸದ ಅವಧಿಯಲ್ಲಿ ಕೇವಲ ಹಣ್ಣಿನ ರಸ ಹಾಗೂ ನಿದ್ರವಾಹಾರ ಪದಾರ್ಥಗಳನ್ನು ಮಾತ್ರ ಸೇವಿಸಬೇಕು ಈ ರೀತಿಯ ಪದ್ಧತಿ ಆಚರಿಸುವುದರಿಂದ ಜೀರ್ಣಶಕ್ತಿ ಹೆಚ್ಚುವುದು ಕಣ್ಣಿನ ಹೊಳಪು ಹೆಚ್ಚಾಗಿ ಚರ್ಮದ ಸೌಂದರ್ಯ ಹೆಚ್ಚುತ್ತದೆ ಶರೀರದಲ್ಲಿ ಹೊಸ ಹುರುಪು ತುಂಬಿಕೊಳ್ಳುತ್ತದೆ.

ವಿಶ್ರಾಂತಿಯಿಂದ ಆರೋಗ್ಯಕ್ಕೆ ಸಿಗುವ ಹಲವು ಲಾಭಗಳು : ದಿನನಿತ್ಯ ದುಡಿಯುವವರಿಗೆ ವಿಶ್ರಾಂತಿ ಅತ್ಯಾವಶ್ಯಕ ವಿಶ್ರಾಂತಿ ಪಡೆದ ನಂತರ ಮನಸ್ಸು ಪ್ರಫುಲ್ಲವಾಗಿ ಮುಂದಿನ ಕೆಲಸ ಕಾರ್ಯಗಳನ್ನು ಬಗ್ಗೆ ಮನದಲ್ಲಿ ಹುರುಪು ನೀಡುತ್ತದೆ.

ಯಾವುದಾದರೂ ಒಂದು ಕೆಲಸ ಕಾರ್ಯದತ್ತ ಚಿಂತನೆ ಮಾಡುತ್ತಾ ವಿಶ್ರಾಂತಿ ಪಡೆಯಬಹುದು ಆದರೆ ಸೋಮಾರಿತನ ಕೂಡದು.

ಮನಸ್ಸಿಗೆ ಯಾವುದೇ ರೀತಿಯ ಚಿಂತನೆಯನ್ನು ಹಚ್ಚಿಕೊಳ್ಳದೆ ನಿತ್ಯ ಕ್ರಮಗಳನ್ನು ಕ್ರಮಬದ್ಧವಾಗಿ ಆಚರಿಸಿಕೊಂಡು ಒಂಟಿಯಾಗಿರುವುದನ್ನು ಅಭ್ಯಾಸ ಮಾಡಿಕೊಂಡರೆ ನಿಜವಾದ ವಿಶ್ರಾಂತಿ ದೊರಕಿದಂತಾಗುತ್ತದೆ ಮುಂಜಾನೆಯ ವೇಳೆಯಲ್ಲಿ ಹಾಗೂ ಸಂಜೆ ಸಮಯದಲ್ಲಿ ಪಾರ್ಕ್ ಗಳಲ್ಲಿ ನಡೆದಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

LEAVE A REPLY

Please enter your comment!
Please enter your name here