ಹೌದು ಸೊಳ್ಳೆ ಅನ್ನೋದು ತುಂಬ ಡೇಂಜರ್ ಕೀಟ, ಸೊಳ್ಳೆಗಳು ಬದುಕಿದ್ದಾಗ ಮಾತ್ರವಲ್ಲ ಸತ್ತ ಮೇಲೂ ಅಪಾಯಕಾರಿ, ಸೊಳ್ಳೆಗಳು ಮನುಷ್ಯನನ್ನು ಕಚ್ಚಿ ಡೆಂಗ್ಯೂ ತರಹದ ಅಪಾಯಕಾರಿ ರೋಗಗಳನ್ನು ಹರಡಿದರೆ, ಸತ್ತ ಮೇಲೆ ಅಸ್ತಮಾ, ಅಲರ್ಜಿ ಸಮಸ್ಯೆಯನ್ನು ಹರಡುತ್ತದೆ. ದಿಲ್ಲಿಯ ವಿಶ್ವವಿದ್ಯಾನಿಲಯದ ವಲ್ಲಾಬಬಾಯ್ ಪಟೇಲ್ ಹೃದ್ರೋಗ ಚಿಕಿತ್ಸಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ರೋಗಿಗಳಲ್ಲಿ ಅಲರ್ಜಿ, ಅಸ್ತಮಾ ಸಮಸ್ಯೆ ಉಲ್ಬಣಗೊಳ್ಳಲು ಎರಡನೇ ಅತ್ಯಂತ ಪ್ರಮುಖ ಕಾರಣ ಇದೇ ಆಗಿದೆ ಎಂದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ.
ಈ ಅಧ್ಯಯನದ ಮುಂದಾಳತ್ವ ವಹಿಸಿದ ಡಾ ರಾಜ್ ಕುಮಾರ್ ಸೊಳ್ಳೆಯ ರೋಮ, ಎಂಜಲು ಹಾಗೂ ದೇಹದ ಇತರ ಭಾಗಗಳು ವಾತಾವರಣದ ಗಾಳಿ ಜತೆ ಸೇರಿ ಉಸಿರಾಟದ ಮೂಲಕ ನಮ್ಮ ದೇಹವನ್ನು ಸೇರುತ್ತದೆ, ಇದರಿಂದ ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಮತ್ತಷ್ಟು ಉಲ್ಬಣವಾಗುವುದು ಎಂದಿದ್ದಾರೆ.
ಪ್ರತಿದಿನ ಕನಿಷ್ಠ 6 ಲೋಟ ನೀರು ಕುಡಿಯುವುದರಿಂದ ಮೂತ್ರನಾಳ ಸೋಂಕಿನಿಂದ ಮುಕ್ರಗಬಹುದಂತೆ ನೋಡಿ, ಹೌದು ದಿನಕ್ಕೆ ಕನಿಷ್ಠ 6 ಗ್ಲಾಸ್ ನೀರು ಕುಡಿಯುವುದರಿಂದ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕಾಗುವ ಸಾಧ್ಯತೆಗಳು ಕಡಿಮೆ ಎಂದು ಒಂದು ಸಂಶೋಧನೆಯೊಂದರಲ್ಲಿ ಪತ್ತೆಯಾಗಿದೆ.
ಮೂತ್ರವಿಸರ್ಜನೆ ಮಾಡುವಾಗ ನೋವು, ತೊಂದರೆ ಅಥವಾ ಮೂತ್ರಕೋಶ ತುಂಬಿದೆ ಎಂಬ ಭಾವ, ಮೂತ್ರ ವಿಸರ್ಜನೆಗೆ ತುರ್ತು ಅಥವಾ ಪದೇ ಪದೇ ಹೋಗಬೇಕೆನಿಸುವುದು, ಕಿಬ್ಬೊಟ್ಟೆಯ ಬಳಿ ಕಿರಿಕಿರಿ ಎನ್ನಿಸುವುದು, ಮೂತ್ರದಲ್ಲಿ ರಕ್ತ ಇವು ಮೂತ್ರಕೋಶಕ್ಕೆ ಸೋಂಕಾಗಿರುವ ಲಕ್ಷಣಗಳಾಗಿವೆ.
ಈ ಕುರಿತು ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ಕಂಡು ಬಂದ ಫಲಿತಾಂಶದ ಪ್ರಕಾರ ದಿನಕ್ಕೆ ಕನಿಷ್ಠ 1.5 ಲೀಟರ್ ನೀರು ಕುಡಿಯುವ ಮಹಿಳೆಯರಲ್ಲಿ ಮೂತ್ರಕೋಶದ ಸೋಂಕು ತಗಲುವ ಸಾಧ್ಯತೆಗಳು ಶೇ 48% ಕಡಿಮೆ, ನೀರು ಅಥವಾ ದ್ರವಾಹಾರ ಸೇವನೆ ಮೂತ್ರಕೋಶಕ್ಕೆ ತಗಲುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡಲು ಮತ್ತು ಆ ಬ್ಯಾಕ್ಟೀರಿಯಾಗಳ ಸಾಮರ್ಥ್ಯ ಕುಂದಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಸಂಶೋದನೆಯಲ್ಲಿ ತಿಳಿಸಿದ್ದಾರೆ.
ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದಲ್ಲಿ ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವಿಚಾರವೇ.