ಅತ್ಯುತ್ತಮ ಪೋಷ್ಟಿಕಾಂಶ ಇರುವುದು ಮೊಟ್ಟೆಯ ಬಿಳಿ ಭಾಗದಲ್ಲೊ ಅಥವಾ ಹಳದಿ ಭಾಗದಲ್ಲೊ.

0
1084

ನಿಮಗೆ ನೆನಪಿರಬಹುದು ದಿನಕ್ಕೆ ಒಂದು ಮೊಟ್ಟೆ ತುಂಬುವುದು ಹೊಟ್ಟೆ ಎಂಬುವ ಜಾಹೀರಾತನ್ನು ಸರ್ಕಾರವೇ ನೀಡುತ್ತಿದೆ, ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ ಆರೋಗ್ಯವಾಗಿರಿ ಎಂಬುದು ಇದರ ತಾತ್ಪರ್ಯ, ಆದರೆ ಕೆಲವು ಜನರಲ್ಲಿ ಒಂದು ಗೊಂದಲವಿದೆ ಅದೇನೆಂದರೆ ಕೆಲವರು ಪ್ರಕಾರದಲ್ಲಿ ಮೊಟ್ಟೆಯ ಬಿಳಿಭಾಗ ಹೆಚ್ಚು ಆರೋಗ್ಯಕರ ಎಂದರೆ ಇನ್ನು ಕೆಲವರು ಇಲ್ಲ ಮೊಟ್ಟೆಯ ಹಳದಿ ಭಾಗ ದಲ್ಲಿ ಹೆಚ್ಚಿನ ಪೋಷಕಾಂಶಗಳು ಇರುತ್ತದೆ ಎಂದು ವಾದ ಮಾಡುತ್ತಾರೆ ಹಾಗಾದರೆ ಮೊಟ್ಟೆಯ ಯಾವ ಭಾಗದಲ್ಲಿ ನಿಜವಾದ ಪೌಷ್ಟಿಕಾಂಶ ಇದೆ.

ಸದ್ಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಫಾರಂ ಮೊಟ್ಟೆಗಳಲ್ಲಿ ಅಗತ್ಯ ಪೋಷಕಾಂಶಗಳು ಇರುತ್ತದೆ ಎಂಬುದೇ ಅನುಮಾನ, ಇನ್ನು ನೀವೇನಾದರೂ ನಾಟಿ ಕೋಳಿ ಮೊಟ್ಟೆಗಳನ್ನು ಕಂಡುಕೊಂಡಲ್ಲಿ ಅಗತ್ಯ ವಿಟಮಿನ್ಸ್ ತುಂಬಿ ತುಳುಕುತ್ತಿರುತ್ತದೆ, ಆದರೂ ಬಿಳಿಯೋ ಅಥವಾ ಹಳದಿಯೋ ಎಂಬ ಪ್ರಶ್ನೆಗೆ ಉತ್ತರಕ್ಕೆ ಮುಂದೆ ಓದಿ.

ಸರಿ ಸುಮಾರು ಒಂದು ಮೊಟ್ಟೆಯಲ್ಲಿ 200mg ಎಷ್ಟು ಕೊಲೆಸ್ಟ್ರಾಲ್ ಹಾಗೂ 6 ಗ್ರಾ ಫ್ಯಾಟ್ ಹೊಂದಿರುತ್ತದೆ, ಆರೋಗ್ಯದ ದೃಷ್ಟಿಯಿಂದ ಹೃದಯ ತಜ್ಞರು ಹೇಳುವ ಪ್ರಕಾರ ದಲ್ಲಿ ಒಂದು ದಿನಕ್ಕೆ ಒಬ್ಬ ಮನುಷ್ಯನು 300mg ಕೊಲಸ್ಟ್ರಾಲ್ ಸೇವನೆ ಮಾಡಬಹುದು ಅಷ್ಟೇ.

ಇನ್ನು ಮೊಟ್ಟೆಯನ್ನು ಬಿಳಿ ಮತ್ತು ಹಳದಿ ಭಾಗವನ್ನು ಬಿಡಿಸಿ ಹೇಳಿದಾಗ, ಮೊಟ್ಟೆಯ ಬಿಳಿ ಭಾಗದಲ್ಲಿ 7 ಗ್ರಾಂ ಪ್ರೊಟೀನ್ ಇರುತ್ತದೆ, ಇನ್ನು ಕೊಲೆಸ್ಟ್ರಾಲ್ ಹೆಚ್ಚಿರುವುದು ಮೊಟ್ಟೆಯ ಹಳದಿ ಭಾಗದಲ್ಲಿ ಅದರ ಜೊತೆಯಲ್ಲಿ ನಿಮ್ಮ ಮೆದುಳು ಆರೋಗ್ಯವನ್ನು ಕಾಪಾಡುವ ಕೊರೀನ್ ಅಂಶವು ಹೆಚ್ಚಿರುವುದು ಹಳದಿ ಭಾಗದಲ್ಲೇ, ಅಲ್ಲದೆ ವಿಟಮಿನ್ A B -12 ಹಾಗೂ B6 ಅಧಿಕವಾಗಿದೆ ಎನ್ನಲಾಗಿದೆ.

ಒಟ್ಟಾರೆ ಹೇಳಬೇಕೆಂದರೆ ಒಂದು ಮೊಟ್ಟೆಯ ಸೇವಿಸಿದರೆ ಪ್ರೊಟೀನ್ ಹಾಗೂ ವಿಟಮಿನ್ ಸೂಕ್ತ ಪ್ರಮಾಣದಲ್ಲಿ ಸಿಗುತ್ತದೆ ಆದರೆ ದೇಹದ ತೂಕವನ್ನು ಇಳಿಸಲು ಬಯಸುವವರು ಕೊಲೆಸ್ಟ್ರಾಲ್ ಅರಗಿಸಿಕೊಳ್ಳಬೇಕು ಎನ್ನುವವರು ಬಿಳಿ ಭಾಗವನ್ನು ತಿಂದರೆ ಬೆಸ್ಟ್ ಎಂಬುದು ವೈದ್ಯರ ಅಭಿಪ್ರಾಯ.

LEAVE A REPLY

Please enter your comment!
Please enter your name here