ಎಷ್ಟೇ ಕಷ್ಟಪಟ್ಟರೂ ದೇಹದ ತೂಕ ಕಡಿಮೆಯಾಗುತ್ತಿಲ್ಲವೇ ಅದಕ್ಕೆ ಕಾರಣಗಳು ಏನು ಗೊತ್ತಾ..?

0
1628

ಕೆಲವರು ಎಷ್ಟೇ ಪ್ರಯತ್ನಪಟ್ಟರೂ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಆಗುತ್ತಿರುವುದಿಲ್ಲ, ಎಷ್ಟೇ ಹರಸಾಹಸ ಪಡುತ್ತಿದ್ದರು ಕಸರತ್ತುಗಳು ಮಾಡುತ್ತಿದ್ದರು ತೂಕ ಕಡಿಮೆ ಆಗದಿರಲು ಕಾರಣವೇನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರಗಳು.

ಗುರಿ ಸ್ಪಷ್ಟತೆ : ವ್ಯಾಯಾಮ ಯಾಕೆ ಮಾಡಬೇಕು ಅದರ ಹಿಂದಿನ ಗುರಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು, ಈ ಕೆಲಸ ನಮ್ಮ ಕೈಯಿಂದ ಆಗುತ್ತದೆ ಎಂಬ ದೊಡ್ಡ ವಾದ ನಂಬಿಕೆಯನ್ನು ಹೊಂದಿರಬೇಕು, ತೂಕ ಕಡಿಮೆ ಮಾಡುವ ಯಾವುದೇ ಔಷಧಿಗಳ ಮೊರೆ ಹೋಗಬಾರದು, ತೂಕ ಕಡಿಮೆಯಾಗಲು ಹೆಚ್ಚು ಸಮಯ ಬೇಕಾಗುತ್ತದೆ ಆದ್ದರಿಂದ ತಾಳ್ಮೆಯ ಅವಶ್ಯಕತೆ ತುಂಬಾ ಇದೆ.

ನಿಯಮಿತ ಆಹಾರ : ಮನಸ್ಸಿನ ಜೊತೆ ದೇಹಕ್ಕೂ ಹಿತವನ್ನು ನೀಡುವ ಆಹಾರಗಳನ್ನು ತಿನ್ನಬೇಕು, ಸಾಮಾನ್ಯವಾಗಿ ಮನುಷ್ಯ ಒತ್ತಡ ಅಥವಾ ಅನ್ಯ ದುಃಖದಲ್ಲಿದ್ದಾಗ ಹೆಚ್ಚು ಆಹಾರ ಸೇವಿಸುತ್ತಾರೆ, ಇದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ ಅಷ್ಟೇ ಅಲ್ಲದೆ ಪದೇ ಪದೇ ತಿನ್ನುವ ಅಭ್ಯಾಸವು ರೂಢಿಯಾಗುತ್ತದೆ, ನಮ್ಮ ದೇಹಕ್ಕೆ ಎಷ್ಟು ಬೇಕು ಎಂಬುದನ್ನು ನಿರ್ಧರಿಸಿ ಕೊಂಡು ತಿನ್ನುವ ಅಭ್ಯಾಸ ಮಾಡಿಕೊಳ್ಳಿ.

ಡಯಟ್ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ : ಸಾಮಾನ್ಯವಾಗಿ ಡಯಟ್ ಎಂದ ಕೂಡಲೇ ಉಪವಾಸ ಇರುವುದು ಎಂದು ಅರ್ಥ ಮಾಡಿಕೊಂಡು ಬಿಡುತ್ತಾರೆ ಅಥವಾ ಡಯಟ್ ಸಮಯದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಮಾತ್ರ ತಿನ್ನಬಹುದು ಎಂದು ಅರ್ಥವಲ್ಲ, ಮನುಷ್ಯನ ದೇಹಕ್ಕೆ ಬೇಕಾದ ಎಲ್ಲಾ ರೀತಿಯ ಆಹಾರಗಳು ನಿಯಮಿತ ಪ್ರಮಾಣದಲ್ಲಿ ಸೇವಿಸುವುದು ಡಯಟ್ ಇನ್ನು ಆಹಾರ ಏರುಪೇರಾದರೆ ದೇಹದ ತೂಕದಲ್ಲಿ ವ್ಯತ್ಯಾಸ ಕಾಣುತ್ತಿದೆ.

ಶಾರೀರಿಕ ಸಮಸ್ಯೆ : ಈ ಮೇಲೆ ತಿಳಿಸಿದ ಅಷ್ಟು ಕ್ರಮಗಳನ್ನು ಚಾಚೂತಪ್ಪದೆ ಪಾಲನೆ ಮಾಡುತ್ತಿದ್ದರು ದೇಹದ ತೂಕ ಕಡಿಮೆ ಯಾಗುತ್ತದೆ ಎಂದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ, ಕಾರಣ ಕೆಲವೊಮ್ಮೆ ಕರುಳಿನ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ, ಥೈರಾಯಿಡ್ ಸಮಸ್ಯೆಗಳೆಂದರೆ ತೂಕ ಕಡಿಮೆಯಾಗುವುದಿಲ್ಲ, ಇವುಗಳಿಗೆ ಮೊದಲು ಚಿಕಿತ್ಸೆಯನ್ನು ಪಡೆಯಬೇಕು.

ತೂಕ ಕಳೆದುಕೊಳ್ಳುವುದು ನಮ್ಮ ಅಂತಿಮ ಗುರಿ ಎಂದು ಯೋಚನೆ ಮಾಡದೆ ಅದರ ಬದಲು ಉತ್ತಮ ಆರೋಗ್ಯ ಪಡೆಯುವುದು ನಮ್ಮ ಅಂತಿಮ ಗುರಿ ಎಂದು ಯೋಚನೆ ಮಾಡಬೇಕು, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here