ಓದಿದ್ದು ಕೇವಲ PUC ಆದರೆ ಕೊಟ್ಟಿದ್ದು 2000ಕ್ಕೂ ಹೆಚ್ಚು ಡ್ರೈವರ್ ಗಳಿಗೆ ಉದ್ಯೋಗ!

0
2816

ಜೀವನದ ಕಷ್ಟಗಳು ತಾನಾಗಿಯೇ ಗೆಲುವಿನ ದಾರಿಯನ್ನು ತೋರಿಸಿ ಬಿಡುತ್ತವೆ, ಕಷ್ಟಗಳು ಬರದಿದ್ದರೆ ಮನುಷ್ಯ ಅದರಿಂದ ಪಾರಾಗಲು ಸಾಧನೆಯ ಹಾದಿಯನ್ನು ತಿಳಿಯೋದೇ ಇಲ್ಲ ಅನಿಸುತ್ತೆ, ಅದೇನೇ ಇರಲಿ ಶ್ರದ್ಧೆ ಮತ್ತು ಪರಿಶ್ರಮ ಒಬ್ಬ ವ್ಯಕ್ತಿಯನ್ನು ಯಾವರೀತಿ ಬದಲಾಯಿಸಬಹುದು ಎನ್ನುವುದಕ್ಕೆ ಒಂದು ಅತ್ಯುತ್ತಮ ಉದಾಹರಣೆ ಯಾಗಿ ಬೆಂಗಳೂರಿನ ನಮ್ಮ ಕನ್ನಡದ ಹೆಣ್ಣುಮಗಳೊಬ್ಬಳು ಮಾಡಿರುವ ಸಾಧನೆಯ ಬಗ್ಗೆ ಇಂದು ಈ ಲೇಖನದಲ್ಲಿ ಮಾಹಿತಿ ನೀಡುತ್ತದೆ.

ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ ದೇವಸ್ಥಾನದ ಅರ್ಚಕರ ಹಿರಿಯ ಮಗಳಾಗಿ ಹುಟ್ಟಿದ ನಂದಿನಿ, ತುಂಬಾ ಜಾಣೆ ಓದಿನಲ್ಲಿ ಆಕೆ ತುಂಬಾ ಮುಂದೆ, ಆದರೆ PUC ಮುಗಿಸಿದ ಮೇಲೆ ಇವರ ತಂದೆ ನಂದಿನಿ ಅವರಿಗೆ ಮದುವೆ ಮಾಡಿ ಬಿಡುತ್ತಾರೆ, ನಂದಿನಿಯವರ ಪತಿ ಸಹ ದೇವಸ್ಥಾನದ ಪುರೋಹಿತರು, ನಂತರ ಇವರು ಟ್ರಾವೆಲ್ ಕಂಪನಿಯೊಂದಕ್ಕೆ ಕೆಲಸಕ್ಕೆ ಸೇರಿ ಹೇಗೋ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಇವರ ತಂದೆ ತೀರಿಹೋದ ಸುದ್ದಿಯೊಂದು ಬರುತ್ತದೆ, ನಂತರ ನಂದಿನಿ ಅವರಿಗೆ ಅವರ ತಂಗಿಯ ಜವಾಬ್ದಾರಿ ಕೂಡ ತೆಗೆದುಕೊಳ್ಳಬೇಕಾಗುತ್ತದೆ.

ನಂದಿನಿ ಅವರಿಗೆ ತಮ್ಮ ತಂಗಿ ಮೇಲೆ ತುಂಬಾ ಪ್ರೀತಿ ಇದೇ ಪ್ರೀತಿಯೇ ಅವರ ಅತ್ಯುತ್ತಮ ಸಾಧನೆಯ ಹಾದಿ ತುಳಿಯುವಂತೆ ಮಾಡಿದೆ, ನನ್ನ ತಂಗಿಯನ್ನು ಒಂದು ಒಳ್ಳೆ ಕಡೆ ಕೊಟ್ಟು ಮದುವೆ ಮಾಡಬೇಕು, ಹಾಗೆಯೇ ಮದುವೆ ತುಂಬಾ ಜೋರಾಗಿ ನಡೆಸಬೇಕು ಎಂದೆಲ್ಲಾ ಕನಸು ಹೊತ್ತಿದ್ದ ನಂದಿನಿ ಅವರಿಗೆ ಯಾರೋ ಒಬ್ಬರು ಕೊಟ್ಟ ಸಲಹೆಯ ಮೇರೆಗೆ ತಮ್ಮ ಬಳಿಇದ್ದ ಆಭರಣಗಳನ್ನೆಲ್ಲಾ ಅಡವಿಟ್ಟು ಒಂದು ಕಾರನ್ನು ಖರೀದಿ ಮಾಡಿ ಅದನ್ನು ಉಬರ್ ಸಂಸ್ಥೆಗೆ ಬಿಟ್ಟರು.

ಈ ಸಂದರ್ಭದಲ್ಲಿ ನಂದಿನಿ ಅವರಿಗೆ ತಿಳಿದ ವಿಚಾರವೇನೆಂದರೆ ಉಬರ್ ಕಂಪನಿಗೆ ಡ್ರೈವರ್ ಒಬ್ಬರನ್ನು ನೇಮಕ ಮಾಡಿದರೆ ತಿಂಗಳಿಗೆ ಮೂರುವರೆ ಸಾವಿರ ಕಮಿಷನ್ ಬರುತ್ತದೆ ಎಂದು ಇದರಿಂದ ತಮಗೆ ತಿಳಿದಿರುವ ಎಲ್ಲಾ ಡ್ರೈವರ್ ಗಳನ್ನು ಉಬರ್ ಕಂಪನಿಗೆ ರೆಫರ್ ಮಾಡಿದರು, ಅಷ್ಟೇ ಅಲ್ಲದೆ ದಿನಪತ್ರಿಕೆಗಳಲ್ಲಿ ಜಾಹೀರಾತು ಸಹ ನೀಡಿದರು, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ ಈ ರೀತಿ ಸುತ್ತಾಡಿ ಉಬರ್ ಕಂಪನಿಗೆ ಹೆಚ್ಚುಹೆಚ್ಚು ಡ್ರೈವರ್ ಗಳನ್ನು ನೋಂದಾಯಿಸಿದರು, ಈಗ ಒಟ್ಟು ಎರಡು ಸಾವಿರಕ್ಕೂ ಹೆಚ್ಚಿನ ಡ್ರೈವರ್ ಗಳನ್ನು ನೋಂದಾಯಿಸಿದ್ದಾರೆ ಇದರಿಂದಲೇ ಪ್ರತಿ ತಿಂಗಳು ಎರಡು ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡುತ್ತಿದ್ದಾರೆ.

ತಮ್ಮದೇ ಸ್ವಂತ ಆಫೀಸ್ ತೆಗೆದಿರುವ ಇವರು ಆರು ಜನಕ್ಕೆ ಕೆಲಸ ನೀಡಿದ್ದು, ತಮ್ಮ ಆಸೆಯಂತೆ ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ ಹಾಗೂ ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದಾರೆ, ಸಾಲಗಳನ್ನೆಲ್ಲ ತೀರಿಸಿ ತಮ್ಮ ಮಗುವನ್ನು ಒಳ್ಳೆಯ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದಾರೆ, ಹಾಗೂ ಈ ಮಗುವನ್ನು ಮುಂದೆ ಡಾಕ್ಟರ್ ಮಾಡುವ ಆಸೆಯನ್ನು ಹೊಂದಿದ್ದಾರೆ, ಈ ಹೆಣ್ಣುಮಗಳ ಮುಂದಿನ ಜೀವನಕ್ಕೆ ಶುಭಕೋರೋಣ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here