ಬಡ ಹೆಣ್ಣುಮಗಳು 500 ಸಾಲ ಪಡೆದು ಮಾಡಿದ ಬಿಸಿನೆಸ್ ಈಗ ಕೋಟಿ ಹಣ ಮಾಡುತ್ತಿದೆ ಹೇಗೆ ನೋಡಿ

0
1355

ಯಾವುದೇ ಕೆಲಸದಲ್ಲಿ ದೊಡ್ಡದು ಅಥವಾ ಚಿಕ್ಕದು ಅಂತ ಇರೋದಿಲ್ಲ ನೀವು ಅದನ್ನು ಚಿಕ್ಕದಾಗಿ ಮಾಡುತ್ತಿರೋ ಅಥವಾ ದೊಡ್ಡದಾಗಿ ಮಾಡುತ್ತಿರೋ ಎಂಬುದರ ಮೇಲೆ ನಿಂತಿರುತ್ತದೆ ಈ ಮಾತಿಗೆ ನಿಜವಾದ ಅರ್ಥ ನೀಡುವ ಸತ್ಯ ಕಥೆಯೊಂದನ್ನು ನಿಮಗೆ ಇಂದು ತಿಳಿಸುತ್ತೇವೆ, ಒಂಟಿಯಾಗಿ ಈ ಭೂಮಿಯ ಮೇಲೆ ಕಾಲಿಡುವ ನಾವು ಇನ್ನೊಬ್ಬರ ಸಹಾಯವನ್ನು ಬಯಸಿ ಬಾಳುವ ಅವಶ್ಯಕತೆ ಇರುವುದಿಲ್ಲ, ಸಾಧನೆಯ ಹಾದಿಯಲ್ಲಿ ನೀವೊಬ್ಬರೇ ಗಟ್ಟಿಯಾಗಿ ನಿಂತರೆ ಸಾಕು ಗೆಲುವು ನಿಮ್ಮನ್ನು ತುಂಬಿಕೊಳ್ಳುತ್ತದೆ, ಇಂದು ನಿಮಗೆ ಉತ್ತರ ಪ್ರದೇಶದ ಮಹಿಳೆ ಕೃಷ್ಣ ಯಾದವ್ ಅವರ ಪರಿಚಯ ಮಾಡಿ ಕೊಡುತ್ತೇವೆ.

ಇವರಿಗೆ ಇಬ್ಬರು ಮಕ್ಕಳು ಜೀವನೋಪಾಯಕ್ಕಾಗಿ ಉತ್ತರಪ್ರದೇಶದ ಇವರ ಹಳ್ಳಿಯಲ್ಲಿ ಉಪ್ಪಿನಕಾಯಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು ಆದರೆ ಇದರಿಂದ ಲಾಭ ತುಂಬಾ ಕಡಿಮೆ ಬರುತ್ತಿತ್ತು ಅದಕ್ಕಾಗಿ ಅಲ್ಲಿಂದ ಅವರ ಗಂಡ ಉದ್ಯೋಗವನ್ನು ಆರಿಸಿ ದೆಹಲಿಗೆ ಅವರನ್ನು ಕರೆದುಕೊಂಡು ಬಂದರು, ಆಗಲೂ ಸುಮ್ಮನೆ ಕೂರಲು ಇಷ್ಟವಿರದ ಕೃಷ್ಣ ಯಾದವ್ ಅಡುಗೆ ತಯಾರಿ ಬಗ್ಗೆ ಸಂಸ್ಥೆಯೊಂದರಲ್ಲಿ ತರಬೇತಿ ಪಡೆದುಕೊಂಡರು, ಆದರೂ ಇವರಿಗೆ ಯಾವುದೇ ಕೆಲಸ ತಕ್ಷಣಕ್ಕೆ ಸಿಗಲಿಲ್ಲ.

ಮತ್ತೆನು ಮಾಡೋದು ಉಪ್ಪಿನಕಾಯಿ ಮಾಡಿ ಮಾರುವುದನ್ನು ಬಿಟ್ಟರೆ ಬೇರೆ ವಿದ್ಯೆ ಇವರಿಗೆ ತಿಳಿದಿಲ್ಲ, ಹಾಗಾಗಿ ತಮಗೆ ತಿಳಿದಿರುವ ವಿದ್ಯೆಯನ್ನೇ ಮತ್ತೊಮ್ಮೆ ಉಪಯೋಗಿಸಿಕೊಂಡರು, ಆ ಸಮಯದಲ್ಲಿ ಅವರ ಬಳಿ ನೂರು ರೂಪಾಯಿ ಕೂಡ ಆಗಿರಲಿಲ್ಲ, ಐದು ನೂರು ರೂಪಾಯಿಯನ್ನು ತಮ್ಮ ಸ್ನೇಹಿತರ ಬಳಿ ಸಾಲ ಪಡೆದರು ಅದು ಸಹ ಸಾಲದೆ ಬರದಿದ್ದಾಗ ಮತ್ತೆರಡು ಸಾವಿರ ಸಾಲ ಮಾಡಿ ಮನೆಯಲ್ಲಿ ಉಪ್ಪಿನಕಾಯಿ ಮಾಡಿ ಅದನ್ನು ಮನೆಯ ಹತ್ತಿರದ ಮನೆಗಳಲ್ಲಿ ಮಾರಾಟ ಮಾಡಿದರು ಇದರಿಂದ ಮೊಟ್ಟಮೊದಲ ಬಾರಿಗೆ 5250 ರೂಪಾಯಿಗಳ ಲಾಭವನ್ನು ಪಡೆದರು.

ಮತ್ತೆ ತಿರುಗಿ ನೋಡಲೇ ಇಲ್ಲ, ಮಾರುಕಟ್ಟೆಗಳಿಗೆ ಉಪ್ಪಿನಕಾಯಿಯನ್ನು ಕೊಡಲು ಶುರುಮಾಡಿದರು ಇದರಿಂದ ಬಹಳ ಒಳ್ಳೆಯ ಲಾಭ ಬರತೊಡಗಿತ್ತು ಹಾಗೂ ಅವರ ಉಪ್ಪಿನಕಾಯಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಯಿತು ನಂತರ ಶ್ರೀಕೃಷ್ಣ ಪಿಕಲ್ಸ್ ಅನ್ನೋ ಕಂಪನಿಯನ್ನು ತೆರೆದರು, ಇದೀಗ ಇವರ ಬಳಿ 400 ಮಹಿಳೆಯರು ಕೆಲಸ ಮಾಡುತ್ತಿದ್ದಾರೆ, ಉಪ್ಪಿನಕಾಯಿ ಮಾರಾಟ ಮಾಡುತ್ತಾ ದೆಹಲಿಯಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದು ನಿಂತಿದ್ದಾರೆ, ಸ್ವಲ್ಪಮಟ್ಟಿಗೆ ಓದಿರುವ ಇವರು ಕೋಟಿ ಕೋಟಿ ಹಣ ದುಡಿಯುತ್ತಿರುವ ಬಗ್ಗೆ ಮೆಚ್ಚಿ ಹಲವಾರು ಪ್ರಶಸ್ತಿಗಳು ಇವರಿಗೆ ಬಂದಿದೆ, ಸಣ್ಣ ಕಷ್ಟಗಳಿಗೆ ತಲೆಕೆಡಿಸಿಕೊಂಡು ಜೀವನವೇ ಬೇಡ ಎನ್ನುವವರು ಈ ಮಹಿಳೆಯನ್ನು ಪ್ರೇರಣೆಯಾಗಿ ಪಡೆದರೆ ಉತ್ತಮ ಎಂಬುದು ನಮ್ಮ ಅಭಿಪ್ರಾಯ, ನಿಮ್ಮ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here