ಯಾವುದೇ ಕಾರಣಕ್ಕೂ ಈ 10 ವಸ್ತುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ

0
2022

ನಾವು ಪ್ರತಿ ನಿತ್ಯ ಕೆಲವು ವಸ್ತುಗಳನ್ನು ಬಳಸುತ್ತೇವೆ, ಅವು ನಮಗೆ ಅನಿವಾರ್ಯವೂ ಹೌದು, ‌ಅಂತಹ ವಸ್ತುಗಳನ್ನು ನಾವು ಮಾತ್ರ ಬಳಸಿದರೇ ಉತ್ತಮ, ಇಲ್ಲದಿದ್ದರೆ ನಮಗೆ ಹಾನಿಯಾಗುತ್ತದೆ, ಅವು ಯಾವುವು ತಿಳಿಯೋಣ ಬನ್ನಿ.

ಬ್ರಷ್ : ಟೂತ್ ಬ್ರಷ್ ನ್ನು ಎಲ್ಲರೂ ಪ್ರತಿ ದಿನ ಬೆಳಿಗ್ಗೆ ಬಳಸುತ್ತೇವೆ, ಹಲ್ಲುಗಳ ಶುಚಿತ್ವಕ್ಕೆ ಬ್ರಷ್’ನಿಂದ ಉಜ್ಜಿದರೆ ಅವುಗಳಲ್ಲಿನ ಕೀಟಾಣುಗಳು ಹೋಗುತ್ತವೆ, ನಮ್ಮ ದೇಹದ ಬೇರೆ ಭಾಗಗಳಿಗಿಂತ ಹಲ್ಲುಗಳಲ್ಲಿ ಕೀಟಾಣುಗಳು ಹೆಚ್ಚು ಇರುತ್ತವೆ, ಆದುದರಿಂದ ಬ್ರಷನ್ನು ನಾವು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.

ಟೂತ್ ಪೇಸ್ಟ್ : ಟೂತ್ ಪೇಸ್ಟನ್ನು ನಾವು ಒಂದು ಬ್ರಷ್’ಗೆ ಹಾಕುವಾಗ ಅದು ತಾಕುತ್ತದೆ, ಬ್ರಷಿನಲ್ಲಿರುವ ಕೀಟಾಣುಗಳು ಪೇಸ್ಟಿಗೆ ತಾಗುವ ಸಂಭವ ಇರುತ್ತದೆ, ಆದುದರಿಂದ ಪೇಸ್ಟನ್ನ ತಾಗಿಸದೇ ಬಳಸಬೇಕು, ಒಂದು ವೇಳೆ ತಾಗಿಸುವ ಅಭ್ಯಾಸ ಇದ್ದರೆ ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು

ಟವೆಲ್ : ನಾವು ಸ್ನಾನ ಮಾಡುವಾಗ ಟವೆಲ್ ಬಳಸುತ್ತೇವೆ, ಅದರಿಂದ ನಮ್ಮ ಮೈಯನ್ನು ಒರೆಸಿಕೊಳ್ಳುತ್ತೇವೆ, ಅದರಿಂದ ನಮ್ಮ ದೇಹದ ಕೀಟಾಣುಗಳು ಹಾಗೂ ನಮ್ಮ ಬೆವರು ಟವಲ್’ಗೆ ಸೇರಿಕೊಳ್ಳುತ್ತದೆ, ಇದನ್ನು ಬೇರೆಯವರಿಗೆ ಕೊಟ್ಟರೆ ಅವರಿಗೂ ಖಾಯಿಲೆ ಬರುತ್ತದೆ.

ಸೋಪು : ಸೋಪನ್ನು ನಮ್ಮ ಮೈ ತೊಳೆಯಲು ಬಳಸುತ್ತೇವೆ, ಇದನ್ನು ಉಪಯೋಗಿಸಿ ಇನ್ನೊಬ್ಬರಿಗೆ ಕೊಡಬಾರದು, ಕೊಟ್ಟರೆ ನಮ್ಮ ದೇಹದ ಕೀಟಾಣುಗಳು ಅವರ ದೇಹಕ್ಕೆ ಹೋಗುವ ಸಂಭವ ಇರುತ್ತದೆ.

ಕಿವಿಯೋಲೆ : ಕಿವಿಯೋಲೆಯನ್ನು ಕಂಡರೆ ಮಹಿಳೆಯರಿಗೆ ಆಸೆ ಜಾಸ್ತಿ, ಕಿವಿಯೋಲೆಯನ್ನು ಬೇರೆಯವರಿಗೆ ಕೊಡಬಾರದು ಏಕೆಂದರೆ ಚುಚ್ಚಿದ ಕಿವಿಯಿಂದ ಕಿವಿಯೋಲೆಯನ್ನು ತೆಗೆದು ಇನ್ನೊಬ್ಬರಿಗೆ ಕೊಟ್ಟಾಗ ರೋಗಾಣುಗಳು ಅವರಿಗೂ ಹರಡುವ ಸಂಭವ ಇರುತ್ತದೆ.

ಚಪ್ಪಲಿ : ಚಪ್ಪಲಿಯನ್ನು ಎಲ್ಲರು ಹಾಕಿಕೊಳ್ಳುತ್ತಾರೆ, ಚಪ್ಪಲಿಯನ್ನು ಬಳಸಿ ಇನ್ನೊಬ್ಬರಿಗೆ ಕೊಡಬಾರದು, ನಮ್ಮ ಪಾದದ ಬೆವರು ಬೇರೆಯವರ ಪಾದಕ್ಕೆ ತಗುಲುತ್ತದೆ, ಇದರಿಂದ ರೋಗಾಣುಗಳು ಬಹುಬೇಗನೆ ಹರಡುತ್ತದೆ.

ರೇಜರ್ ಟ್ರಿಮ್ಮರ್ : ಶೇವಿಂಗ್ ಮಾಡುವಾಗ ಚರ್ಮಕ್ಕೆ ತಾಗಿ ರಕ್ತ ಸೋರಿ ಬ್ಲೇಡ್’ಗೆ ಅಂಟಿಕೊಳ್ಳುತ್ತದೆ, ಆ ಬ್ಲೇಡ್ ಅಥವಾ ಟ್ರಿಮ್ಮರನ್ನ ಇನ್ನೊಬ್ಬರು ಬಳಸಿದಾಗ ಖಾಯಿಲೆ ಬರಬಹುದು.

ಇಯರ್ ಬಡ್ : ಹಾಡುಗಳನ್ನು ಇಯರ್ ಬಡ್ ಬಳಸಿ ಕೇಳುತ್ತಾರೆ, ಇಯರ್ ಬಡ್ ಗಳನ್ನು ಕಿವಿಯೊಳಗೆ ಹಾಕಿದಾಗ ಸಾವಿರಾರು ಕೀಟಾಣುಗಳು ಉತ್ಪಾದನೆ ಆಗುತ್ತದೆ ಹಾಗೂ ಇಯರ್ ಬಡ್ ‘ನಿಂದ ಗುಗ್ಗೆಗಳು ಅದಕ್ಕೆ ಅಂಟಿಕೊಳ್ಳುತ್ತದೆ, ಅದನ್ನು ಇನ್ನೊಬ್ಬರು ಬಳಸಿದಾಗ ಕಾಯಿಲೆ ಬರಬಹುದು.

ಲಿಪ್ ಸ್ಟಿಕ್ : ನಮ್ಮ ತುಟಿಯ ನಾಳಕ್ಕೆ ಲಿಪ್ ಸ್ಟಿಕ್ ಹಚ್ಚಿದಾಗ ಅದರ ಮೂಲಕ ಲಿಪ್ ಸ್ಟಿಕ್’ಗೆ ಕೀಟಾಣುಗಳು ಬರುವ ಸಂಭವ ಇರುತ್ತದೆ.

LEAVE A REPLY

Please enter your comment!
Please enter your name here