ರವಿ ಚಂದ್ರನ್ ಹಳ್ಳಿ ಮೇಷ್ಟ್ರು ಚಿತ್ರದಲ್ಲಿ ನಟಿಸಿದ್ದ ನಟಿ ಈಗ ಹೇಗಿದ್ದಾರೆ ಗೊತ್ತಾ?

  0
  2050

  ಜಾನ್ ತೆರೆ ನಾಂ ಚಿತ್ರದಿಂದ ಬಾಲಿವುಡ್ ನಲ್ಲಿ ಹೆಸರು ಮಾಡಿದ ನಟಿ ಫಾರಿನ್, ಈ ನಟಿಯ ಕನ್ನಡದ ಇನ್ನೊಂದು ಹೆಸರು ಬಿಂದಿಯಾ, ನೋಡಲು ಬಾಲಿವುಡ್ನ ಮಾಧುರಿ ದೀಕ್ಷಿತ್ ರೀತಿ ಇದ್ದ ಇವರನ್ನು ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಹಳ್ಳಿಮೇಷ್ಟ್ರು ಚಿತ್ರಕ್ಕೆ ಕರೆತಂದರು, ರವಿಚಂದ್ರನ್ ಅವರು ತಮ್ಮ ಹಳ್ಳಿಮೇಷ್ಟ್ರು ಚಿತ್ರಕ್ಕೆ ನಾಯಕಿಯ ಹುಡುಕಾಟದಲ್ಲಿ ಇದ್ದಾಗ ಫರಿನ್ ರವರು ಕಣ್ಣಿಗೆ ಬಿದ್ದರೂ ಪರಿ ಅವರು ನಟಿ ಮಾಧುರಿ ದೀಕ್ಷಿತ್ ಅವರನ್ನು ಹೋಗುತ್ತಿದ್ದರಿಂದ ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಂಡು ಬಿಂದಿಯಾ ಎಂದು ಇವರ ಹೆಸರನ್ನು ಬದಲಾಯಿಸಿದರು.

  ಹಳ್ಳಿಮೇಷ್ಟ್ರು ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಾರೆ ಬಿಂದಿಯಾ, ಆದರೆ ಚಿತ್ರೀಕರಣ ಮುಕ್ತಾಯವಾದ ಮೇಲೆ ಚಿತ್ರೀಕರಣ ತಂಡದಿಂದ ಬಿಂದಿಯಾ ಅವರು ಸೆಟ್ ನಲ್ಲಿ ತುಂಬಾ ಕಿರಿಕ್ ಮಾಡುತ್ತಾರೆ ಎನ್ನುವ ಹೊರಬಂತು, ಅಷ್ಟೇ ಅಲ್ಲದೆ ನಟಿ ಬಿಂದಿಯಾ ರವಿಚಂದ್ರನ್ ಅವರ ಮೇಲೆ ಕೂಡ ಗಂಭೀರವಾದ ಆರೋಪ ಮಾಡಿದ್ದರು, ರವಿಚಂದ್ರನ್ ಅವರು ನನ್ನ ಮೇಲೆ ಲೈಂಗಿ ಕ ದೌರ್ಜನ್ಯ ಎಸಗಲು ಮುಂದಾಗಿದ್ದರು ಎನ್ನುವ ಆರೋಪ ಮಾಡಿದ್ದರು, ಈ ಆರೋಪದಿಂದ ಇನ್ನು ಮುಂದೆ ತಲೆ ಎತ್ತಿ ನಡೆಯುವುದು ಹೇಗೆ ಎಂದು ಯೋಚನೆ ಮಾಡಿದ ರವಿಚಂದ್ರನ್ ನ್ಯಾಯಾಲಯದಲ್ಲಿ ಬಿಂದಿಯಾ ಮೇಲೆ ಒಂದು ರೂಪಾಯಿ ಮಾನ ನಷ್ಟ ಮೊಕದ್ದಮೆ ಹೂಡಿದ್ದರು.

  ನಂತರ ತೀರ್ಪು ರವಿಚಂದ್ರನ್ ಪರವಾಗಿ ಬಂದಿತು, ಇನ್ನು ಬಿಂದಿಯಾ ಕೋರ್ಟ್ ನಲ್ಲಿ ಯಲ್ಲಾರ ಮುಂದೆ ರವಿಚಂದ್ರನ್ ಬಳಿ ಕ್ಷಮೆ ಕೇಳಿದರು, ನಂತರದ ದಿನಗಳಲ್ಲಿ ಬಿಂದಿಯಾ ಅವರಿಗೆ ಕನ್ನಡ ಚಿತ್ರಗಳಲ್ಲಿ ಅವಕಾಶ ಸಿಗಲಿಲ್ಲ, ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ನಟನೆ ಮಾಡಿದ್ದು ಬಿಟ್ಟರೆ ಮತ್ತೆ ಯಾವ ಚಿತ್ರದಲ್ಲಿ ನಟಿ ನಟಿಸಲಿಲ್ಲ, ಅತ್ತ ಬಾಲಿವುಡ್ ನಲ್ಲಿ ಈ ನಟಿಗೆ ಅವಕಾಶ ಸಿಗಲಿಲ್ಲ, ಇದೇ ವೇಳೆಯಲ್ಲಿ ಅದಾಗಲೇ ಮದುವೆಯಾಗಿದ್ದ ಭಾರತದ ಖ್ಯಾತ ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ಪ್ರೀತಿಸಿದರು ನಂತರ ಮನೋಜ್ ಪ್ರಭಾಕರ್ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ ಈಕೆಯನ್ನು ಮದುವೆಯಾದರೂ.

  ಈಗ ಈ ನಟಿ ದೆಹಲಿಯಲ್ಲಿ ಇಬ್ಬರು ಮಕ್ಕಳ ಜೊತೆ ತಮ್ಮ ಗಂಡನೊಂದಿಗೆ ದೆಹಲಿಯಲ್ಲಿ ನೆಮ್ಮದಿಯಾಗಿ ವಾಸವಾಗಿದ್ದಾರೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

  LEAVE A REPLY

  Please enter your comment!
  Please enter your name here