ಮಧುಮೇಹ (ಸಕ್ಕರೆ ಕಾಯಿಲೆ) ಇರುವವರು ಮೊದಲು ಇದನ್ನ ನೋಡಿ ಸತ್ಯ ಉಪಯೋಗವಾಗುತ್ತೆ!

0
1983

ಇಂದು ಸಿಹಿ ಮೂತ್ರ ರೋಗ ಜಗತಿನ ಎಲ್ಲಾ ಭಾಗದ ಜನರನ್ನು ಕಾಡುತಿದುವ ತೀವ್ರವಾದ ಸಮಸ್ಯೆ, ಸಿಹಿ ಮೂತ್ರ ರೋಗವನ್ನು ಮಧುಮೇಹ, ಸಕ್ಕರೆ ಕಾಯಿಲೆ, ಡಯಾಬಿಟೀಸ್‌ ಎಂದೂ ಸಹ ಕರೆಯುವರು, ಸಿಹಿ ಮೂತ್ರ ರೋಗ ಯುವಕರನು ಬಹಳ ಬೇಗ ಮುತ್ರಿಕೊಂಡು ಕಾಡುತಿದೆ.

ಕೆಲವು ಬಾರಿ ವಂಶಪಾರಂಪರ್ಯವಾಗಿ ಕಾಡಬಹುದು, ಅತಿಯಾದ ಟೆನ್ಷನ್‌, ವ್ಯಾಯಾಮ ರಹಿತ ಜೀವನ, ಅತಿಯಾದ ಕಾಫಿ ಟೀ ಬಳಕೆ, ಆಹಾರದ ವೈಪರೀತ್ಯಗಳು ಸಿಹಿ ಮೂತ್ರ ರೋಗಕ್ಕೆ ಕಾರಣಗಳು.

ಉತ್ತಮವಾದ, ಕಲಬೆರಕೆ ಇಲ್ಲದ ಜೇನುತುಪ್ಪವನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆಯನ್ನು ದೂರ ಮಾಡಬಹುದು.

ಸಕ್ಕರೆಯನ್ನು ಬೆರೆಸದೆ ದ್ರಾಕ್ಷಿ ಹಣ್ಣಿನ ರಸವನ್ನು ಸಿಹಿ ಮೂತ್ರ ರೋಗಿಗಳಿಗೆ ಕೊಡುವುದರಿಂದ ರೋಗವನ್ನು ಗುಣಪಡಿಸಬಹುದು.

ಸಿಹಿ ಮೂತ್ರ ರೋಗಿಗಳು ಪ್ರತಿದಿನ ಏಳೆಂಟು ದಿನಗಳ ಕಾಲ ಕರಿಬೇವಿನ ಸೊಪ್ಪನ್ನು ಸೇವಿಸುವುರಿಂದ ರೋಗವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.

ಊಟದ ಜೊತೆ ಕರಿಬೇವಿನ ಸೊಪ್ಪು ಬಳಕೆ ಮಾಡುವುದರಿಂದ ಸಿಹಿ ಮೂತ್ರ ರೋಗ ಬರದಂತೆ ತಡೆಯಬಹುದು. ಹೀಗೆ ಸಿಹಿ ಮೂತ್ರವನ್ನು ತಡೆಯಬಹುದು.

ಆಲೂಗಡ್ಡೆಯ ಸೇವನೆಯಿಂದ ರೋಗ ಉಲ್ಬಣವಾಗುವುದು, ಅಕ್ಕಿಯಲ್ಲಿ ತಯಾರಿಸಿದ ಪದಾರ್ಥಗಳನ್ನು ಮಿತವಾಗಿ ಸೇವಿಸಬೇಕು.

ಖಾಲಿ ಹೊಟ್ಟೆಯಲ್ಲಿ ತಾಜಾ ಟೆಮೋಟೋ ರಸಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು ಸೇರಿಸಿ ಕುಡಿಯುವುದರಿಂದ ಸಕ್ಕರೆ ರೋಗ ದೂರವಾಗುವುದು.

ಹಾಗಲಕಾಯಿಯ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುರಿಂದ ಸಕ್ಕರೆ ಕಾಯಿಲೆ ದೂರವಾಗುವುದು, ನೇರಳೆ ಹಣ್ಣಿನ ಕಾಲದಲ್ಲಿ ನೇರಳೆ ಹಣ್ಣನ್ನು ಸೇವಿಸಿ. ಇದರಿಂದ ಸಿಹಿ ಮೂತ್ರ ರೋಗ ಹತೋಟಿಯಲ್ಲಿರುವುದು.

ಬಾರ್ಲಿ ಸೇವನೆ ಸಿಹಿ ಮೂತ್ರ ರೋಗಿಗಳಿಗೆ ಒಳ್ಳೆಯದು. ಬಾರ್ಲಿಯನು ಹುರಿದು ಪುಡಿ ಮಾಡಿಕೊಂಡು, ಕಡಲೆ ಬೆಳೆ ಹಿಟ್ಟನ್ನು ಸೇರಿಸಿ ರೊಟ್ಟಿಮಾಡಿಕೊಂಡು ತಿನ್ನಿ.

ಪ್ರತಿನಿತ್ಯ ಅಮೃತ ಬಳ್ಳಿಯ ರಸವನ್ನು ಕುಡಿಯುವುದರಿಂದ ಸಿಹಿ ಮೂತ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಪ್ರತಿನಿತ್ಯ ಬೆಟ್ಟದ ನಲ್ಲಿಕಾಯಿ ಪುಡಿಯನ್ನು ಸೇವಿಸುವುರಿಂದ ಸಿಹಿ ಮೂತ್ರ ದೂರವಾಗುವುದು. ಕಡಲೆ ಬೀಜದ ಸೇವನೆಯಿಂದ ಸಿಹಿ ಮೂತ್ರ ರೋಗವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.

ಸಕ್ಕರೆ ಕಾಯಿಲೆ ಪ್ರಾಥಮಿಕ ಹಂತದಲ್ಲಿರುವಾಗ ಒಂದು ಹಿಡಿ ಉದ್ದಿನ ಬೇಳೆಯನ್ನು ಮೊಳಕೆ ಕಟ್ಟಿ ಅದಕ್ಕೆ ಹಾಗಲ ಕಾಯಿ ರಸ, ಜೇನುತುಪ್ಪ ಸೇರಿಸಿ, ಸೇವಿಸುವುರಿಂದ ವಾಸಿಯಾಗುವುದು.

ಮೆಂತ್ಯೆಯ ಸೇವನೆಯಿಂದ ಸಿಹಿ ಮೂತ್ರ ರೋಗವನ್ನು ದೂರ ಮಾಡಬಹುದು. ಮೆಂತ್ಯೆ ದೋಸೆ, ಮೆಂತ್ಯೆ ಗೊಜ್ಜು ಮಾಡಿ ಸೇವಿಸಿ, ಮೆಂತ್ಯೆ ಸೇರಿಸಿ ದೋಸೆ ಹಿಟ್ಟನ್ನು ಮಾಡಿಕೊಳ್ಳಿ. ಬೇಕಾದಾಗ ಹಿಟ್ಟನ್ನು ಕಲೆಸಿ ದೋಸೆ ಹಾಕಿಕೊಳ್ಳಬಹುದು. ಪ್ರತಿನಿತ್ಯ ದೋಸೆ ಹಾಕಿ ಕೊಡಬಹುದು. ಇದು ಸಿಹಿ ಮೂತ್ರ ರೋಗಿಗಳಿಗೆ ಉತ್ತಮವಾದ ಆಹಾರ.

ಸಿಹಿ ಮೂತ್ರ ರೋಗಿಗಳು ಬೆಟ್ಟದ ನಲ್ಲಿಕಾಯಿ, ಹಾಗಲಕಾಯಿ, ನೇರಳೆ ಹಣ್ಣಿನ ಚೂರ್ಣವನ್ನು ಮಾಡಿಟ್ಟುಕೊಳ್ಳಿ. ಈ ಮೂರರ ಚೂರ್ಣವನ್ನು ಒಂದು ಡಬ್ಬದಲ್ಲಿ ಹಾಕಿಟ್ಟುಕೊಂಡು ಪ್ರತಿನಿತ್ಯ ಒಂದು ಚಮಚದಂತೆ ಸೇವಿಸುವುದರಿಂದ ಸಿಹಿ ಮೂತ್ರ ರೋಗ ನಮ್ಮ ಕೈ ಮೀರಿ ಹೋಗುವುದಿಲ್ಲ.

ಸಿಹಿಮೂತ್ರ ರೋಗ ಪ್ರಾಥಮಿಕ ಹಂತದಲ್ಲಿರುವಾಗ ಬೇವಿನ ಎಲೆಯನ್ನು ಬಿಡಿಸಿ ಶುಚಿಯಾಗಿ ತೊಳೆದುಕೊಂಡು ನೀರಿಗೆ ಹಾಕಿ ಕುದಿಸಿ. ನೀರು ಒಂದು ಲೋಟಕ್ಕೆ ಬಂದ ನಂತರ ಕಷಾಯ ತಯಾರಾಗಿದೆ ಎಂದು ತಿಳಿದುಕೊಳ್ಳಬಹುದು, ತಣ್ಣಗಾದ ಕಷಾಯಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿ, ಹೀಗೆ ಸುಮಾರು ಒಂದು ತಿಂಗಳ ಕಾಲ ಮಾಡಿ, ಆಗ ರೋಗ ಉಲ್ಬಣಗೊಳ್ಳುವುದಿಲ್ಲ.

ಗಮನಿಸಿ : ಸಿಹಿ ಮೂತ್ರ ರೋಗವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ತುಂಬಾ ಅವಶ್ಯ. ಸಾಂಬಾರ ಪದಾರ್ಥಗಳಲ್ಲಿರುವ ಔಷಧೀಯ ಗುಣಗಳು ಸಿಹಿ ಮೂತ್ರ ರೋಗವನ್ನು ನಿಯಂತ್ರಣದಲ್ಲಿ ಇಡುವುದು.

LEAVE A REPLY

Please enter your comment!
Please enter your name here