ಕಡಲೆ ಒಂದು ದ್ವಿದಳ ಧಾನ್ಯ, ಇದರ ಪ್ರತಿಯೊಂದು ಕಾಳಿನಲ್ಲಿ ಪೋಷಕಾಂಶ ಅಧಿಕವಾಗಿ ಇರುತ್ತದೆ, ಸದ್ಯ ಇದನ್ನು ನಾವು ಮನೆಯಲ್ಲಿ ಅಡುಗೆಗಾಗಿ ಬಳಕೆ ಮಾಡುತ್ತೇವೆ, ಕಾರಣ ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ, ಆದರೂ ಈ ಕಡಲೆಯನ್ನು ನಾವು ಪ್ರತಿದಿನ ಸಾಂಬಾರಿನಲ್ಲಿ ಬಳಕೆ ಮಾಡುವುದಿಲ್ಲ ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಬಳಸಿದರೆ ಹೆಚ್ಚು, ಇನ್ನು ಪ್ರತಿದಿನ ನಾವು ಕಡಲೆಯನ್ನು ಆಹಾರ ಪದಾರ್ಥವಾಗಿ ಸೇವನೆ ಮಾಡುವುದರಿಂದ ಸಿಗುವ ಲಾಭಗಳ ಬಗ್ಗೆ ತಿಳಿದರೆ ಆಶ್ಚರ್ಯಪಡುತ್ತೀರ.
ಕಡಲೆಯಲ್ಲಿ ಫೈಬರ್ ಅಂಶ ಅತಿ ಹೆಚ್ಚಾಗಿ ಇರುತ್ತದೆ, ಮುಖ್ಯವಾಗಿ ಈ ಫೈಬರ್ ಅಂಶ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ಹೀಗೆ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಯಾವುದೇ ಇದ್ದರೂ ಅವು ಕಡಿಮೆ ಆಗುತ್ತವೆ.
ಸಸ್ಯಹಾರಿ ಅಡುಗೆ ಪ್ರಿಯರಿಗೆ ಈ ಕಡಲೆ ಒಂದು ವರ ಎಂದರೆ ತಪ್ಪಾಗಲಾರದು, ಕಾರಣ ಮಾಂಸಾಹಾರದಲ್ಲಿ ಇರುವ ಹಲವು ಪ್ರೋಟೀನ್ ಗಳು ಅಂದರೆ ಪೊಟ್ಯಾಶಿಯಂ, ಮೆಗ್ನೇಶಿಯಂ, ಕ್ಯಾಲ್ಸಿಯಂ ರೀತಿಯ ಹಲವು ಮಿನರಲ್ಸ್ ಕಡೆಯಲ್ಲಿ ಇರುತ್ತದೆ, ಕಡಲೆ BP ಕಡಿಮೆ ಮಾಡುತ್ತದೆ, ಬಹಳಷ್ಟು ಸಮಯ ಹಸಿವು ಬಾರದಂತೆ ನೋಡಿಕೊಳ್ಳುತ್ತದೆ, ಇದೇ ಕಾರಣಕ್ಕಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೆ ಕಡಲೆ ಒಂದು ಉತ್ತಮವಾದ ಆಹಾರ.
ಕಡಲೆಯನ್ನು ತಿನ್ನುವುದರಿಂದ ನಿಮ್ಮ ದೇಹದ ರಕ್ತದಲ್ಲಿ ಬಿಳಿ ರಕ್ತಕಣಗಳು ಹೆಚ್ಚಾಗುತ್ತದೆ, ರಕ್ತಹೀನತೆ ಇದ್ದರೂ ಅಂತವರಿಗೆ ಈ ಕಡಲೆ ಬಹಳ ಒಳ್ಳೆಯದು, ಕಡಲೆಯಲ್ಲಿ amino acid, serotonin ರೀತಿಯ ಹಲವು ಪೋಷಕಾಂಶ ಹೇರಳವಾಗಿ ಸಿಗುತ್ತದೆ, ರಾತ್ರಿ ಒಳ್ಳೆಯ ನಿದ್ರೆ ಬರುವಂತೆ ಕಡಲೆ ಮಾಡುತ್ತದೆ, ಕಡಲೆ ಬಗ್ಗಿನ ಇನ್ನು ಹೆಚ್ಚಿನ ಆರೋಗ್ಯ ಮಾಹಿತಿಗಾಗಿ ಈ ಕೆಳಗಿರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.