ಕೂದಲು ಉದುರುವಿಕೆ ಹಾಗೂ ತಲೆಹೊಟ್ಟಿಗೆ ಇಲ್ಲಿದೆ ಪರಿಹಾರ…..!

0
1758

ಇಂದು ಹರೆಯದ ಹುಡುಗ ಅಥವಾ ಹುಡುಗಿಯರಿಗೆ ಕೂದಲು ಉದುರುವುದು ತುಂಬಾ ಸಾಮಾನ್ಯವಾಗಿ ಕಾಣುವಂತಹ ಕಾಯಿಲೆ ಕೂದಲಿನಲ್ಲಿ ಅತಿಯಾದ ಹೊಟ್ಟು ಇರುವುದರಿಂದ ಕೂದಲು ಉದುರುವುದು ಮತ್ತೆ ಸರಿಯಾದ ಆರೈಕೆ ಪೋಷಣೆ ಇಲ್ಲದೆ ಇರುವುದರಿಂದಲೂ ಕೂದಲು ಉದುರುತ್ತದೆ ಎಂದು ಕೂಡ ಹೇಳಬಹುದು.

ವಾರಕ್ಕೆ ಎರಡು ಬಾರಿಯಾದರೂ ಕೂದಲನ್ನು ತೊಳೆಯಬೇಕು ಮತ್ತು ಕೂದಲಿಗೆ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಶಾಂಪೂಗಳನ್ನು ಉಪಯೋಗಿಸಬಾರದು.

ಒದ್ದೆ ಕೂದಲನ್ನು ಯಾವುದೇ ಕಾರಣದಿಂದ ಬಾಚಬಾರದು ಒದ್ದೆ ಕೂದಲನ್ನು ಬಾಚುವುದರಿಂದ ಹೊಟ್ಟು ಉಂಟಾಗಿ ಕೂದಲು ಉದುರುವುದು ಮತ್ತು ಬೆಳವಣಿಗೆ ಕುಂಠಿತವಾಗುತ್ತದೆ.

ಹಾಗೆ ಬಿಳಿ ಕೂದಲು ಅತಿ ಚಿಕ್ಕ ವಯಸ್ಸಿನವರನ್ನು ಕಾಡುತ್ತಿದೆ ಇದಕ್ಕೆ ಕೊಬ್ಬರಿ ಎಣ್ಣೆಗೆ ಮೆಂತ್ಯೆ ಸೇರಿಸಿ ಚೆನ್ನಾಗಿ ಕಾಯಿಸಿ ಪ್ರತಿದಿನ ಕೂದಲಿಗೆ ಮೆಂತ್ಯೆ ಬೆರೆಸಿದ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ ಮತ್ತು ದಂಟಿನ ಸೊಪ್ಪಿನ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು.

ನಾವು ತಾಂಬೂಲವಾಗಿ ಬಳಸುವ ವೀಳ್ಯದೆಲೆಯನ್ನು ಚೆನ್ನಾಗಿ ಅರೆದು ಕೊಬ್ಬರಿ ಎಣ್ಣೆಗೆ ಬೆರೆಸಿ ಸ್ವಲ್ಪ ಕಾಯಿಸಿ ಉಗುರುಬೆಚ್ಚಗಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂಡ ಕೂದಲು ಬಿಳಿ ಆಗುವುದಿಲ್ಲ.

ಪ್ರತಿದಿನ ತಣ್ಣೀರು ಸ್ನಾನ  ಮಾಡುವುದು ಒಳ್ಳೆಯ ಅಭ್ಯಾಸ ಅಂತ ಕೂಡ ಹೇಳಬಹುದು ಯಾಕಂದ್ರೆ ತಣ್ಣೀರು ಸ್ನಾನ ಮಾಡುವುದರಿಂದ ಕೂಡ ಕೂದಲು ಉದುರುವುದಿಲ್ಲ.

ಮೆಂತೆಯನ್ನು ಹಾಲಿನಲ್ಲಿ ನೆನೆಸಿ ಮರುದಿನ ನುಣ್ಣಗೆ ರುಬ್ಬಿ ಕೂದಲಿಗೆ ಹಚ್ಚಬೇಕು ಹೀಗೆ ಮಾಡುವುದರಿಂದ ಕೂದಲು ರೇಷ್ಮೆಯಂತೆ ನೆನಪಾಗುವುದು.

ದಾಸವಾಳದ ಎಲೆಗಳನ್ನು ಅರೆದು ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುವುದು ಅದಲ್ಲದೆ ಎಳ್ಳಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ.

ಕೂದಲು ಬೆಳೆಯಲು ದೆಹದಲ್ಲಿ ಉತ್ಕೃಷ್ಟವಾದ ಜೀವಸತ್ವಗಳು ಇರಬೇಕು ಕೂದಲು ಬೆಳೆಯಲು ಸಮತೋಲನದ ಆಹಾರ ಸೇವಿಸಬೇಕು.

LEAVE A REPLY

Please enter your comment!
Please enter your name here