ಅನಂತ್ ನಾಗ್ – ಗಾಯತ್ರಿ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?

  0
  1512

  ಆಲದ ಮರದಂತೆ ಆರ್ಭಟಿಸಿ ಹಬ್ಬದೇ ತೆಂಗಿನ ಮರದಂತೆ ಸರಳವಾಗಿ ನೇರವಾಗಿ ತುಂಬಾ ಎತ್ತರಕ್ಕೆ ಕನ್ನಡ ಚಿತ್ರರಂಗದಲ್ಲಿ ಬೆಳೆದ ಅದ್ಭುತ ನಟ ನಮ್ಮ ಶಂಕರನಾಗ್ ಅವರ ಅಣ್ಣ ಅನಂತ್ ನಾಗರಕಟ್ಟೆ ಕೂಡ ಕನ್ನಡದ ಸತ್ಯದ ಹಿರಿಯ ಮತ್ತು ಅತ್ಯುತ್ತಮ ನಟ ಎಂದರೆ ತಪ್ಪಾಗಲಾರದು, ಬಿಸಿಲಾದರೇನು ಮಳೆಯಾದರೇನು ಎಂದು ಸುಮ್ಮನೆ ತಮ್ಮ ಪಾಡಿಗೆ ತಾವು ಕನ್ನಡ ಚಿತ್ರದಲ್ಲಿ ನಟಿಸುತ್ತಾ ಸಾಗಿದರು ಸಾಧನೆಯ ದಾರಿಯನ್ನು ಸವೆಸಿದರು, ಒಂದು ಕಾಲದಲ್ಲಿ ಅನಂತನಾಗ್ ಕನ್ನಡ ಚಿತ್ರರಂಗದಲ್ಲಿ ಯಂಗ್ ಅಂಡ್ ಎನರ್ಜಿಟಿಕ್ ಹೀರೋ ಆಗಿ ಮಿಂಚಿದ್ದಾರೆ, ಎಷ್ಟು ಯುವತಿಯರು ಅಂದು ನಿಮ್ಮ ಗಂಡ ಹೇಗಿರಬೇಕು ಎಂದು ಕೇಳಿದರೆ ಅನಂತನಾಥ ರೀತಿ ಇರಬೇಕು ಎಂದು ಹೇಳುತ್ತಿದ್ದರು.

  ನವರಸಗಳನ್ನು ನಾಜೂಕಾಗಿ ಹೆಚ್ಚು ಕಡಿಮೆ ಇಲ್ಲದೆ ಬ್ಯಾಲೆನ್ಸ್ ಮಾಡಿಕೊಂಡು ನಟಿಸುವ ನಟರಲ್ಲಿ ಅನಂತನಾಗ್ ಕೂಡ ಒಬ್ಬರು, ಅವರ ಕನ್ನಡ ಭಾಷೆ ಸ್ಪಷ್ಟತೆ ಹಾಗೂ ಡೈಲಾಗ್ ಡಿಲೆವರಿ ಯಂತೂ ಅದ್ಭುತ, ಇಂದಿಗೂ ಬಹಳಷ್ಟು ಯುವ ನಟರಿಗೆ ಸ್ಫೂರ್ತಿಯಾಗಿದ್ದಾರೆ ಅನಂತನಾಗ್, ಅದೆಷ್ಟೋ ಸಿನಿಮಾಗಳಲ್ಲಿ ಅನಂತನಾಗ್ ತಮ್ಮ ಅಭಿಮಾನಿಗಳ ಕಣ್ಣಲ್ಲಿ ನೀರು ಹಾಕಿಸಿದ್ದಾರೆ ಹಾಗೂ ಹೊಟ್ಟೆತುಂಬಾ ನಗುವಂತೆ ಕೂಡ ಮಾಡಿದ್ದಾರೆ, ಹಂಸಗೀತೆ ಅಂತಹ ಚಿತ್ರದಲ್ಲಿ ನಟಿಸಿ ಜನರ ಮನಸ್ಸನ್ನು ಜಾಗೃತಿ ಕಳಿಸಿದ್ದಾರೆ, ಇಂತಹ ಅನಂತನಾಗ್ ಅವರಿಗೆ ಒಂದು ಸಣ್ಣ ಲವ್ ಸ್ಟೋರಿ ಇದೆ.

  ಒಂದು ಸಿನಿಮಾ ಶೂಟಿಂಗ್ ಗಾಗಿ ನಂದಿಬೆಟ್ಟಕ್ಕೆ ಅನಂತನಾಗ್ ಅವರು ಹೋಗಿ ಬರುವಾಗ ನಟಿ ಗಾಯತ್ರಿ ಅವರನ್ನು ತಮ್ಮ ಕಾರಿನಲ್ಲಿಯೇ ಕೂರಿಸಿಕೊಂಡರು ಹೀಗೆ ಕಾರಿನಲ್ಲಿ ನೇರವಾಗಿ ಗಾಯತ್ರಿ ಯವರಿಗೆ ನೀವು ನನ್ನನ್ನು ಮದುವೆ ಆಗುವುದರಲ್ಲಿ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿಯೇಬಿಟ್ಟರು ಇಲ್ಲಿ ಯಾವುದೇ ಪ್ರೀತಿಯ ಬಗ್ಗೆ ಅವರು ಮಾತನಾಡಲಿಲ್ಲ ನೇರವಾಗಿ ಮದುವೆಯ ಪ್ರಪೋಸಲ್ ಮುಂದೆ ಇಟ್ಟರು ನಂತರ ಇಬ್ಬರೂ ಒಪ್ಪಿ 1987 ರಲ್ಲಿ ಮದುವೆಯಾದರು ಮದುವೆಯಾದ ಮೇಲೆ ಅನಂತನಾಗ್ ಅವರು ಪ್ರೀತಿ ಮಾಡಲು ಕಲಿತಿದ್ದು ಹಾಗೂ ಮದುವೆ ನಂತರ ಸಿನಿಮಾಗಳಲ್ಲಿ ನಟನೆ ಮಾಡು ಎಂದು ಕೇಳಬಾರದು ಎಂದು ಮೊದಲೇ ಹೇಳಿದ್ದರಂತೆ ಗಾಯತ್ರಿ.

  ಅದೇ ಕಾರಣಕ್ಕಾಗಿ ಮದುವೆಯ ನಂತರ ಗಾಯತ್ರಿ ಅವರು ಯಾವುದೇ ಸಿನಿಮಾದಲ್ಲಿ ನಟನೆ ಮಾಡಲಿಲ್ಲ, ಅನಂತನಾಗ್ ಅವರನ್ನು ಗಾಯತ್ರಿ ಅವರು ತುಂಬಾನೇ ಪ್ರೀತಿ ಮಾಡುತ್ತಾರಂತೆ ಅನಂತನಾಥ ಅವರಿಗೆ ಎಂತಹ ಪರಿಸ್ಥಿತಿ ಎದುರಾದರೂ ಬೆಂಬಲವಾಗಿ ನಿಲ್ಲುತ್ತಾರೆ ಪತ್ನಿ ಗಾಯತ್ರಿ ಈ ಎಲ್ಲಾ ವಿಷಯಗಳನ್ನು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ ನಟ ಅನಂತನಾಗ್ ಇನ್ನು ಅನಂತ್ ನಾಗ್ ಅವರ ಯಾವ ಚಿತ್ರ ನಿಮಗೆ ತುಂಬಾ ಇಷ್ಟ ಎಂದು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

  LEAVE A REPLY

  Please enter your comment!
  Please enter your name here