ಆರೋಗ್ಯಕ್ಕಾಗಿ ಜನರು ಏನೆಲ್ಲ ಮಾಡುತ್ತಿರುತ್ತಾರೆ, ಕಾರಣ ಆರೋಗ್ಯ ಇದ್ದರೆ ಮಾತ್ರ ಆಯಸ್ಸು, ನಾವು ಎಷ್ಟೇ ಜವಾಬ್ದಾರಿಯಿಂದ ನಮ್ಮ ಆರೋಗ್ಯವನ್ನು ನೋಡಿಕೊಂಡರು ಒಂದಲ್ಲ ಒಂದು ಸಣ್ಣ ಪುಟ್ಟ ಸಮಸ್ಯೆಗಳು ಬಂದೇ ಬರುತ್ತವೆ, ಅಂತಹ ನೋವುಗಳಿಗೆ ನಾವು ಆದಷ್ಟು ಮನೆಯಲ್ಲೇ ಉಪಶಮನ ಪಡೆಯುವುದು ಉತ್ತಮ, ಹೊಟ್ಟೆ ನೋವು ಸಹ ಈ ಸಮಸ್ಯೆಗಳಲ್ಲಿ ಪ್ರಮುಖವಾಗಿ ನಿಲ್ಲುತ್ತದೆ, ಬಿಡದೆ ಕಾಡುವ ಹೊಟ್ಟೆ ನೋವಿಗೆ ಬಿಸಿ ನೀರಿನ ಪರಿಹಾರದ ಬಗ್ಗೆ ಇಂದು ನಿಮಗೆ ಮಾಹಿತಿಯನ್ನು ನೀಡುತ್ತೇವೆ.
ಹೊಟ್ಟೆ ನೋವು ಬಂದಾಗ ಹೊಟ್ಟೆಯ ಮೇಲೆ 15 ನಿಮಿಷ ಬಿಸಿ ನೀರಿಂದ ತುಂಬಿದ ಪಾತ್ರೆ ಅಥವಾ ಬಾಟಲ್ ಗಳನ್ನು ಇರುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ, ಇದು ಬಹಳ ಉಪಕಾರಿ ಯಾಗಿದ್ದು ಮನೆಯಲ್ಲಿ ಎಲ್ಲಾ ವಯಸ್ಸಿನವರಿಗೂ ಅನ್ವಯವಾಗುತ್ತದೆ, ನೀರಿನ ಬಿಸಿ ಪ್ರಮಾಣವನ್ನು ಜಾಗ್ರತೆಯಿಂದ ನೋಡಿಕೊಳ್ಳತಕ್ಕದ್ದು.
ಹೊಟ್ಟೆ ನೋವು ಬರಲು ಒಂದು ಕಾರಣ ಅದು ನೀವು ತಣ್ಣಗಿನ ಆಹಾರಗಳನ್ನು ಸೇವಿಸುವುದು, ಬಿಸಿ ಆಹಾರಗಳನ್ನ ಅಥವಾ ಊಟವನ್ನು ಮಾಡಿದರೆ ಜೀರ್ಣಕ್ರಿಯೆಯೂ ಉತ್ತಮ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳು ಕೂಡ ಬರುವುದಿಲ್ಲ.
ಪ್ರತಿದಿನ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡವರಿಗೆ ಯಾವುದೇ ರೀತಿಯ ಸಣ್ಣ ಪುಟ್ಟ ಕಾಯಿಲೆಗಳು ಬರುವುದಿಲ್ಲ, ಬಿಸಿ ನೀರನ್ನು ಮಿತಿಯಾಗಿ ಕುಡಿಯುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ಆಹಾರಗಳು ಬಲು ಬೇಗನೆ ಜೀರ್ಣವಾಗುತ್ತದೆ, ಊಟ ಮಾಡಿದ ಅರ್ಧ ಗಂಟೆ ಗಳನ್ನು ಬಿಟ್ಟು ನಂತರ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಆರೋಗ್ಯಕ್ಕೆ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಅಷ್ಟೇ ಅಲ್ಲದೆ ಬೊಜ್ಜು ನಿವಾರಣೆ ಸಹಾಯವಾಗುತ್ತದೆ.
ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಕರುಳುಗಳು ಶುದ್ಧವಾಗುತ್ತದೆ ಅಲ್ಲದೆ ಮಲಬದ್ಧತೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆ, ಹೊಟ್ಟೆಯ ಬೊಜ್ಜು ಇದರಿಂದ ಕರಗುತ್ತದೆ, ಸಣ್ಣ ಪುಟ್ಟ ಕಾಯಿಲೆಗೆ ಮಾತ್ರೆ ತೆಗೆದುಕೊಳ್ಳುವುದನ್ನು ಬಿಟ್ಟುಬಿಡಿ, ಮನೆಯಲ್ಲಿಯೇ ಕೆಲವು ಮದ್ದು ತಯಾರಿಸಿಕೊಂಡರೆ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ.