ನಿಮ್ಮ ಕಣ್ಣುಗಳ ಕೆಳಗೆ ಮೂಡುವ ಕಪ್ಪು ವರ್ತುಲಕ್ಕೆ ಇಲ್ಲಿದೆ ಸುಲಭ ಮನೆಮದ್ದು! 100% ವರ್ಕ್ ಆಗತ್ತೆ

0
1284

ಈ ಬ್ಯುಸಿ ಜೀವನದಲ್ಲಿ ಎಲ್ಲರಿಗು ಟೆನ್ಶನ್ ಸರ್ವೇ ಸಾಮಾನ್ಯ, ಸರಿಯಾಗಿ ನಿದ್ದೆ ಮಾಡುವುದಿಲ್ಲ, ಬರಿ ಟೆನ್ಶನ್, ಇದೆ ಕಾರಣಗಳಿಂದಾಗಿ ನಿಮ್ಮ ಮುಖದ ಆಕರ್ಷಕ ಕೇಂದ್ರ ಕಣ್ಣಿನ ಕೆಳಗೆ ಕೆಟ್ಟದಾಗಿ ಕಪ್ಪು ವರ್ತುಲ ಮೂಡುತ್ತದೆ, ಹೀಗೆ ಬರುವ ಈ ಕಪ್ಪು ವರ್ತುಲಗಳು ಅಷ್ಟು ಸುಲಭವಾಗಿ ಹೋಗುವುದಿಲ್ಲ, ಹಾಗು ಮುಖದ ಚಂದವನ್ನು ಹಾಳು ಮಾಡಿಬಿಡುತ್ತದೆ, ಇದರಿಂದ ಮುಕ್ತಿ ಹೊಂದಲು ನೀವು ಸಹ ಸಾಕಷ್ಟು ಪ್ರಯತ್ನವನ್ನು ಪಟ್ಟಿರುತ್ತೀರಿ ಅಲ್ಲವೇ ಆದರೂ ಯಾವುದೇ ಪ್ರಯೋಜವಾಗಿಲ್ಲ ಅಂದ್ರೆ ಚಿಂತೆ ಬೇಡ ಹೀಗೇ ನಾವು ನೀಡುವ ಸಲಹೆ 100% ವರ್ಕ್ ಆಗತ್ತೆ.

ಕಣ್ಣುಗಳ ಕೆಳಗೆ ಕಪ್ಪು ಬಣ್ಣ ಬಂದಿದ್ದರೆ ಅದೆಷ್ಟು ಕೆಟ್ಟದಾಗಿ ಅದಕ್ಕಾಗಿ ದಪ್ಪವಾಗಿ ಮೇಕ್ ಆಪ್ ಹಚ್ಚಿ ಸುಸ್ತಾದವರು ಮೊದಲಿಗೆ ಸಾಕಷ್ಟು ನಿದ್ರೆ ಮಾಡೋದನ್ನ ರೂಢಿ ಮಾಡಿಕೊಳ್ಳಿ, ಇದರಿಂದ ಕಣ್ಣಿಗೆ ಆರಾಮ ಸಿಗುತ್ತದೆ.

ನಂತರ ಬೆಳಗ್ಗೆ ಎದ್ದ ಬಳಿಕ ಮತ್ತು ರಾತ್ರಿ ಮಲಗೋ ಮುನ್ನ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಸೋಪ್ ಹಾಕದೇ ತಣ್ಣೀರಿನಲ್ಲಿ ಮುಖ ತೊಳೆಯಿರಿ. ಸತತವಾಗಿ ನೀರು ಕುಡಿಯುತ್ತಿರಿ.

ವಿಟಮಿನ್ ಎ, ಸಿ, ಇ ಮತ್ತು ಕೆ ಹೆಚ್ಚಿರುವ ಆಹಾರಗಳಾದ ಮೊಸರು, ಹಸಿ ತರಕಾರಿ, ಚೀಸ್, ತಾಜಾ ಹಣ್ಣುಗಳನ್ನು ಸೇವಿಸಿ, ಸೌತೆಕಾಯಿ ತುದಿ ಕತ್ತರಿಸಿ ಅದರಲ್ಲಿ ಬರೋ ರಸವನ್ನು ಕಣ್ಣಿನ ಕೆಳಗೆ ದಪ್ಪವಾಗಿ ಹಚ್ಚಿ.

ಸನ್ ಸ್ಕ್ರೀನ್ ಬಳಸುವವರಾದರೆ ಅದನ್ನು ಕಣ್ಣಿನ ಕಪ್ಪು ವರ್ತುಲಗಳಿಗೆ ಹಚ್ಚುವಾಗ ಅದಕ್ಕೆ ಸ್ವಲ್ಪ ನೀರು ಬೆರೆಸಿ ಹಚ್ಚಿ, ಇದರಿಂದ ಕಣ್ಣಿನ ಕೆಳಗಿನ ಕಪ್ಪು ಬಣ್ಣಗಳು ಮಾಯವಾಗುತ್ತದೆ.

LEAVE A REPLY

Please enter your comment!
Please enter your name here