ಈ ಸ್ಥಳದಲ್ಲಿ ಸ್ನಾನ ಮಾಡಿದ್ರೆ ಸಾಕು ಶಿವ ನಿಮ್ಮೆಲ್ಲ ರೋಗಗಳನ್ನು ನಿವಾರಿಸುತ್ತಾನಂತೆ!

0
1980

ಶಿವನ ದೇವಾಲಯವು ಬಾರತದಲ್ಲಿ ಹಲವು ಹಾಗು ನಾವು ಹಲವಾರು ಶಿವನ ದೇವಾಲಯಗಳನ್ನು ನೋಡಿದ್ದೇವೆ ಆದರೆ ಈ ಸೋಮೇಶ್ವರನ ದೇವಾಲಯ ಬಹಳ ವಿಶಿಷ್ಟವಾಗಿದೆ, ಯಾಕೆಂದರೆ ಈ ಶಿವನ ದೇವಾಲಯ ಕೆಲವು ವೈಶಿಷ್ಟ್ಯಗಳನ್ನೂ ಹೊಂದಿದ್ದು ಮತ್ತು ಭಕ್ತರ ಹಲವು ರೀತಿಯ ಚರ್ಮಕಾಯಿಲೆಯನ್ನು ಗುಣವಾಗುತ್ತದೆ ಎಂಬ ನಂಬಿಕೆ ಹಾಗು ಜೀವಂತ ಪುರಾವೆಗಳನ್ನು ಹೊಂದಿದೆ.

ಈ ನೆಲ್ಲಿ ತೀರ್ಥ ಸೋಮೇಶ್ವರ ದೇವಾಲಯ ಇರುವುದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯಿದೆ, ಈ ದೇವಾಲಯದ ವಿಶೇಷತೆಯೇನೆಂದರೆ ಇದು ಒಂದು ಗುಹೆ ಒಳಗೆ ಇರುವ ಗುಹಾಂತರ ದೇವಾಲಯವಾಗಿದೆ ಆದ್ದರಿಂದ ಇದನ್ನು ಶ್ರೀ ನೆಲ್ಲಿತೀರ್ಥ ಸೋಮೇಶ್ವರ ಗುಹಾಂತರ ದೇವಾಲಯ ಎಂದು ಕರೆಯುತ್ತಾರೆ.

ಇದರ ಇತಿಹಾಸದ ಬಗ್ಗೆ ತಿಳಿಯುವುದಾದರೆ ಇದು ಅತ್ಯಂತ ಪ್ರಾಚೀನವಾದ ಸುಮಾರು 1487 ಕ್ಕಿಂತ ಪುರಾತನವಾದುದು ಎಂದು ಹೇಳಲಾಗುತ್ತಿದೆ, ಇದು ರಮಣೀಯವಾದ ಪ್ರಕೃತಿಯ ನಡುವೆ ಇರುವ ಈ ದೇವಾಲಯವನ್ನು ನೋಡುವುದೇ ಒಂದು ಪುಣ್ಯ ಯಾಕೆಂದರೆ ಇಲ್ಲಿ ಒಂದು ಗುಹೆಯಿದ್ದು ಅದರ ಒಳಗೆ ನೆಲ್ಲಿಕಾಯಿ ಗಾತ್ರದ ನೀರು ಸದಾ ಬರುತ್ತಿರುತ್ತದೆ ಆದ್ದರಿಂದ ಇದಕ್ಕೆ ನೆಲ್ಲಿ ತೀರ್ಥ ಎಂದು ಹೆಸರು ಬಂದಿದೆ.

ಇದು ಸುಮಾರು ೨೦೦ ಮೀಟರ್ ಉದ್ದವಿರುವ ಈ ಗುಹೆಯೊಳಗೆ ಹೋಗಲು ನೀರಿನಲ್ಲಿ ಹೋಗಬೇಕು ಒಳಗೆ ವಿಶಾಲವಾದ ಸರೋವರೋಪಾದಿಯಲ್ಲಿದ್ದು ಇಲ್ಲಿರುವ ಮಣ್ಣನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿಯಾಗುತ್ತವೆ ಎಂಬ ಪ್ರತೀತಿ ಇದೆ ಮತ್ತು ಗುಹೆಯಿಂದ ಹೊರಗಡೆ ಬರುವಾಗ ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ಬರಬಹುದಾಗಿದೆ.ಇಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಗುಹಾಲಯದ ಒಳಗೆ ಭಕ್ತರಿಗೆ ಪ್ರವೇಶವನ್ನು ನಿಷೇದಿಸಲಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here