ಗೋಧಿ ಹುಲ್ಲಿನ ರಸವನ್ನು ಹಸಿರು ರಕ್ತ ಎಂದು ಕರೆಯಲಾಗುತ್ತದೆ, ಕಾರಣ ಗೋಧಿ ಹುಲ್ಲಿನ ರಸದಲ್ಲಿ ಹಲವಾರು ಬಗೆಯ ಪೌಷ್ಟಿಕಾಂಶಗಳ ಸಾರವನ್ನು ಹೊಂದಿದೆ, ಹಾಗಾಗಿ ಈ ಗೋಧಿ ಹುಲ್ಲಿನ ಆರೋಗ್ಯಕ್ಕೆ ಅಮೃತವನ್ನು ಹೋಲಿಸಲಾಗುತ್ತದೆ, ಹಾಗಾದರೆ ಗೋಧಿ ಹುಲ್ಲಿನಿಂದ ಸಿಗುವ ಆರೋಗ್ಯ ಲಾಭಗಳು ಯಾವುದು ಎಂದು ಒಮ್ಮೆ ಓದಿ ತಿಳಿಯೋಣ.
ಗೋಧಿ ಹುಲ್ಲನ್ನು ಬಳಸಿ ಮಾಡಿದ ಜ್ಯೂಸನ್ನು ಪ್ರತಿ ದಿನ ಕುಡಿಯುವುದರಿಂದ ದೇಹದಲ್ಲಿನ ಟ್ಯಾಕ್ಸಿಕ್ ಅಂಶ ಸ್ವಚ್ಛವಾಗುತ್ತದೆ, ಇದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯವಾಗಿರುತ್ತದೆ, ಹೀಗಾಗಿ ದೇಹದ ತೂಕವು ನಿಯಂತ್ರಣಕ್ಕೆ ಬರುತ್ತದೆ ಹಾಗೂ ಉತ್ತಮ ಪೌಷ್ಟಿಕ ಅಂಶಗಳು ದೇಹಕ್ಕೆ ದೊರೆಯುತ್ತದೆ.
ಕೂದಲಿನ ಬೆಳವಣಿಗೆಗೆ ಬೇಕಾಗಿರುವಂತಹ ಎಲ್ಲಾ ರೀತಿಯ ವಿಟಮಿನ್ ಹಾಗೂ ಮಿನರಲ್ಸ್ ಗೋಧಿ ಹುಲ್ಲಿನ ಜ್ಯೂಸ್ ನಲ್ಲಿ ಹೇರಳವಾಗಿ ದೊರೆಯುತ್ತದೆ ಹಾಗೂ ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್, ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ಚಿಕ್ಕ ವಯಸ್ಸಿನಲ್ಲಿ ಬಿಳಿ ಕೂದಲು ಬರುವುದನ್ನು ತಡೆಯುತ್ತದೆ ಹಾಗಾಗಿ ನಿತ್ಯ ಒಂದು ಗ್ಲಾಸ್ ಗೋಧಿ ಹುಲ್ಲಿನ ಜ್ಯೂಸ್ ಸೇವನೆ ಮಾಡುವುದು ಒಳ್ಳೆಯದು.
ನಾವು ಮೊದಲೇ ಹೇಳಿದಂತೆ ಗೋಧಿ ಹುಲ್ಲಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ಅದು ಫ್ರೀ ರಾಡಿಕಲ್ ಗಳು ಹಾಳಾಗುವುದನ್ನು ತಡೆಯುತ್ತದೆ, ಆಂಟಿ ಬ್ಯಾಕ್ಟೀರಿಯಲ್ ಮತ್ತು ತಂಪು ನೀಡುವ ಗುಣಗಳು ಮೊಡವೆ ಅಥವಾ ಸೋರಿಯಾಸಿಸ್ ಸಮಸ್ಯೆಗಳಿಗೆ ಉತ್ತಮ ಮದ್ದು ಇದರಿಂದ ತ್ವಚೆಯಲ್ಲಿ ಮೊಡವೆಗಳ ಸಮಸ್ಯೆಯೂ ಕಾಡುವುದಿಲ್ಲ ಹಾಗೂ ತ್ವಚೆ ಕಾಂತಿಯನ್ನು ಪಡೆಯುತ್ತದೆ, ಗೋಧಿ ಹುಲ್ಲಿನ ಜ್ಯೂಸ್ ಕುಡಿಯಬಹುದು ಅಥವಾ ಪೇಸ್ಟ್ ರೀತಿಯಲ್ಲಿ ತಯಾರಿಸಿ ಹಚ್ಚಿದರು ಲಾಭಗಳು ನಿಮಗೆ ದೊರೆಯುತ್ತದೆ.
ಕಿಡ್ನಿ ಲಿವರ್ ಹಾಗೂ ಹೃದಯಕ್ಕೂ ಗೋದಿ ಜ್ಯೂಸ್ ಉತ್ತಮ ಮನೆಮದ್ದು ಗರ್ಭಿಣಿಯರು ನಿತ್ಯ ಒಂದು ಗ್ಲಾಸ್ ಜ್ಯೂಸ್ ಸೇವನೆ ಮಾಡಿದರೆ ಸಾಕು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ, ಗರ್ಭಿಣಿಯರು ಜ್ಯೂಸ್ ಮುನ್ನ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ.