1990 ರ ಸಮಯದಲ್ಲಿ ಹುಟ್ಟಿದವರು ನಿಜವಾಗಿಯೂ ಭಾಗ್ಯಶಾಲಿಗಳು ಯಾಕೆ ಗೊತ್ತಾ ?

0
2146

2000 ಇಸವಿಯ ನಂತರ ಹುಟ್ಟುವ ಮಕ್ಕಳಿಗೆ ಹೋಲಿಕೆ ಮಾಡಿಕೊಂಡರೆ, ಇದಕ್ಕೂ ಮುಂಚೆ ಹುಟ್ಟಿದ ಮಕ್ಕಳೇ ಭಾಗ್ಯಶಾಲಿಗಳು ಎಂಬುವ ವಿಚಾರವೊಂದನ್ನು ಎಂದು ನಾವು ನಿಮಗೆ ಹೋಲಿಕೆ ಮಾಡಿ ತಿಳಿಸಿಕೊಡುತ್ತೇನೆ, ಮುಂಚೆ ನಮ್ಮ ಬಾಲ್ಯದ ದಿನಗಳು ಹೇಗಿರುತ್ತಿದ್ದರು ಹಾಗೂ ಇಂದಿನ ಮಕ್ಕಳ ಬಾಲ್ಯದ ದಿನಗಳು ಹೇಗಿವೆ ಎಂದು ಒಮ್ಮೆ ಹೋಲಿಕೆ ಮಾಡಿ ನೋಡೋಣ.

ನಾವು ನಮ್ಮ ಶಾಲೆಗೆ ಹೋಗಬೇಕಾದರೆ ಪ್ರಾಣಿಗಳಂತೆ ಬಾರದ ಬ್ಯಾಗ್ ಗಳನ್ನು ಹೊತ್ತು ಹೋಗುತ್ತಿರಲಿಲ್ಲ.

ನಾವು ಸೈಕಲ್ ಸವಾರಿ ಮಾಡುವಾಗ ಅಥವಾ ಆಟ ಆಡುವಾಗ ಹೆಲ್ಮೆಟ್ ಗಳನ್ನು ಧರಿಸುವ ಅವಶ್ಯಕತೆಗಳು ಇರಲಿಲ್ಲ, ಶಾಲೆ ಮುಗಿದ ಮೇಲೆಯೂ ನಾವು ಸಂಜೆವರೆಗೂ ಆಟವಾಡುತ್ತಿದ್ದೆವು ಕಾರಣ ನಮ್ಮ ಮನೆಯಲ್ಲಿ ಟಿವಿ ಆಗಲಿ ಅಥವಾ ಕಂಪ್ಯೂಟರ್ ಗಳಾಗಲಿ ಇರಲಿಲ್ಲ, ನಾವು ಆಟವಾಡುತ್ತಿದ್ದ ದ್ದು ನಮ್ಮ ನೆಚ್ಚಿನ ಗೆಳೆಯರೊಂದಿಗೆ, ಅವರೊಂದಿಗೆ ಕಿತ್ತಾಡುತ್ತಿದ್ದ ವು ಕುಣಿಯುತ್ತಿದ್ದೆವು, ಮಾತನಾಡುತ್ತಿದ್ದೆವು, ಆದರೆ ಈಗಿನ ಮಕ್ಕಳು ಆಟವಾಡುವುದು ಯಾರೋ ತಿಳಿಯದ ಮುಖ ಪರಿಚಯವಿಲ್ಲದ ಆನ್ಲೈನ್ ಗೆಳೆಯರೊಂದಿಗೆ.

ಬಾಯಾರಿಕೆಯಾದರೆ ಒಂದು ಕ್ಷಣವೂ ಯೋಚನೆ ಮಾಡದೆ ನಲ್ಲಿ ನೀರನ್ನು, ಹಳ್ಳದ ನೀರನ್ನು ಅಥವಾ ಹತ್ತಿರದ ಕೆರೆ ಬಾವಿ ನೀರನ್ನು ಕುಡಿಯುತ್ತಿದ್ದೆವು, ಪ್ಲಾಸ್ಟಿಕ್ ಬಾಟಲಿ ನೀರಿಗಾಗಿ ಹುಡುಕುವ ಅವಶ್ಯಕತೆ ಇರಲಿಲ್ಲ, ಒಂದೇ ಹಣ್ಣನ್ನು ಎಲ್ಲಾ ಸ್ನೇಹಿತರು ಕಚ್ಚಿ ತಿಂದರು ಅಥವಾ ಒಂದೇ ಲೋಟದಲ್ಲಿ ಎಲ್ಲರೂ ನೀರು ಕುಡಿದರೂ ಯಾವುದೇ ರೋಗ ಬರುವ ಭಯ ನಮ್ಮನ್ನು ಕಾಡುತ್ತಿರಲಿಲ್ಲ, ಹತ್ತಾರು ಸಿಹಿತಿಂಡಿಗಳನ್ನು ತಿಂದರು, ತಟ್ಟೆ ತುಂಬಾ ಅನ್ನ ಊಟ ಮಾಡಿದರು ನಮ್ಮ ದೇಹದ ತೂಕ ಹೆಚ್ಚಾಗುತ್ತಿದೆ ಇಲ್ಲ.

ಚಪ್ಪಲಿ ಇಲ್ಲದೆ ಊರೆಲ್ಲಾ ತಿರುಗಿದರೂ ನಮ್ಮ ಕಾಲಿಗೆ ಯಾವುದೇ ಬ್ಯಾಕ್ಟೀರಿಯಗಳು ಅಂಟಿಕೊಂಡು ಪಾದಗಳಿಗೆ ಏನೂ ಆಗುತ್ತಿರಲಿಲ್ಲ, ವಿಟಮಿನ್, ಪ್ರೋಟೀನ್, ಕಬ್ಬಿಣ, ಕ್ಯಾನ್ಸಿಯನ್ ಅಥವಾ ಪೊಟಾಶಿಯಂ ಈ ರೀತಿ ಯಾವುದೇ ಮಾತ್ರೆಗಳನ್ನು ನಂಬುತ್ತಿರಲಿಲ್ಲ ಅಥವಾ ಸಿರಪ್ಪು ಕುಡಿಯಲಿಲ್ಲ ಆದರೂ ಆರೋಗ್ಯವಾಗಿದೆ, ನಮ್ಮ ಆಟಿಕೆಗಳನ್ನು ತಯಾರು ಮಾಡಿಕೊಳ್ಳುತ್ತಿದ್ದು ನಾವೇ ಅದಕ್ಕಾಗಿ ಅಪ್ಪ ಅಮ್ಮ ಸಾವಿರ ರೂಪಾಯಿಗಳ ಹಣ ಕರ್ಚು ಮಾಡುತ್ತಿರಲಿಲ್ಲ.

ನಮ್ಮ ಪೋಷಕರು ಅಸಹ್ಯ ಹುಟ್ಟಿಸುವಷ್ಟು ಶ್ರೀಮಂತರಾಗಿರಲಿಲ್ಲ, ಯಾವತ್ತಿಗೂ ಹಣದ ಹಿಂದೆ ಅವರು ಓಡಲಿಲ್ಲ ನಮಗೂ ಹಣಕ್ಕಿಂತ ಹೆಚ್ಚಿನ ಪ್ರೀತಿಯನ್ನು ನೀಡಿದರು, ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮೊಬೈಲ್ ಬಳಸಲಿಲ್ಲ, ಅಥವಾ ಯಾರು ಟೈಪ್ ಮಾಡಿ ಕಳುಹಿಸಿದ ಸಂದೇಶವನ್ನು ಮತ್ತೊಬ್ಬರಿಗೆ ಫಾರ್ವರ್ಡ್ ಮಾಡಲಿಲ್ಲ, ಸಂಕೇತಗಳ ಮುಖಾಂತರ ಪ್ರೀತಿ ಹೇಳಲಿಲ್ಲ.

LEAVE A REPLY

Please enter your comment!
Please enter your name here