ಕೆಲವರಿಗೆ ಅತಿಯಾದ ಬಾಯಾರಿಕೆ ಕಾಡುವುದುಂಟು, ಹಾಗೆಯೇ ಬಾಯಿ ಹುಣ್ಣು ಸಹ ಉಪಟಳವನ್ನು ನೀಡುತ್ತದೆ, ಹೀಗೆ ಕಾಡುವ ಬಾಯಿಯ ಹುಣ್ಣು ಅಥವಾ ಬಾಯಾರಿಕೆಯ ಸಮಸ್ಯೆಗೆ ಮನೆಯಲ್ಲೇ ನೀವು ಮಾಡಿಕೊಳ್ಳಬಹುದು ಆದಂತಹ ಕೆಲವು ಅತ್ಯುತ್ತಮ ಮನೆ ಮದ್ದು ಔಷಧಗಳನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಬಾಯಾರಿಕೆಯಿಂದ ನರಳುವವರು ಬಿಸಿ ಹಾಲಿಗೆ ಅರಿಶಿನ ಪುಡಿ, ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಬಾಯಾರಿಕೆ ದೂರವಾಗುವುದು, ಕಾಯಿಸಿ ಆರಿಸಿದ ನೀರನ್ನು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುವುದು, ಏಲಕ್ಕಿ ಕಾಳನ್ನು ಅಗಿಯುವುದರಿಂದ ಬಾಯಾರಿಕೆ ದೂರವಾಗುವುದು.
ಬಳಲಿಕೆಯಿಂದ ಬಾಯಾರಿಕೆ ಹೆಚ್ಚಾಗುವುದು, ಹೀಗಿರುವುದರಿಂದ ಬಳಲಿಕೆಯನ್ನು ಕಡಿಮೆ ಮಾಡಿಕೊಳ್ಳಬೇಕು, ಸೇಬು ಮತ್ತು ನಿಂಬೆಹಣ್ಣು ಹೋಳುಗಳನ್ನಾಗಿ ಮಾಡಿಕೊಂಡು ಕುದಿಯುವ ನೀರಿಗೆ ಬೆರೆಸಿ ಸ್ವಲ್ಪ ಸಮಯ ಬಿಟ್ಟು ನೀರನ್ನು ಶೋಧಿಸಿ ಕೊಂಡು ಸಕ್ಕರೆ ಬೆರೆಸಿ ಕುಡಿಯುವುದರಿಂದ ನಿವಾರಣೆಯಾಗುವುದು.
ಅರ್ಧ ಚಮಚ ಕಾಳು ಮೆಣಸನ್ನು ಹುರಿದು ಪುಡಿಮಾಡಿಕೊಳ್ಳಿ, ಈ ಪುಡಿಯನ್ನು ಕುಡಿಯುವ ನೀರಿಗೆ ಹಾಕಿ, ಕುದಿಸಿ ಕೆಳಗಿಳಿಸಿ ತಣ್ಣಗಾದ ನಂತರ ಕುಡಿದರೆ ಬಾಯಾರಿಕೆ ದೂರವಾಗುವುದು, ಕೊತ್ತಂಬರಿ ಬೀಜ, ಜೀರಿಗೆಯನ್ನು ಸಮ ಪ್ರಮಾಣದಲ್ಲಿ ಕುಟ್ಟಿ ನೀರಿಗೆ ಬೆರೆಸಿ ಕಷಾಯವನ್ನು ತಯಾರಿಸಿ ಹೀಗೆ ತಯಾರಿಸಿದ ಕಷಾಯವನ್ನು ಮಾಡಿ ಕುಡಿಯಿರಿ ಬಾಯಾರಿಕೆ ನಿಲ್ಲುವುದು.
ಒಂದು ಲೋಟ ಬಿಸಿನೀರಿಗೆ ನಿಂಬೆ ಹಣ್ಣಿನ ರಸ ಹಿಂಡಿ, ಸಕ್ಕರೆ ಸೇರಿಸಿ ಪಾನಕ ತಯಾರಿಸಿ ಕುಡಿಯಿರಿ, ಆಗ ಬಾಯಾರಿಕೆ ಬಳಲಿಕೆ ದೂರವಾಗುವುದು, ದಾಳಿಂಬೆ ಹೂವಿನ ಕಷಾಯವನ್ನು ತಯಾರಿಸಿ ದಿನವೂ ಕಷಾಯದಲ್ಲಿ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿಯ ಹುಣ್ಣು ನಿವಾರಣೆ ಆಗುವುದು.
ಜಾಜಿ ಗಿಡದ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಅಗಿಯುವುದರಿಂದ ಬಾಯಿಯ ಹುಣ್ಣು ದೂರವಾಗುವುದು, ಬಸಳೆ ಸೊಪ್ಪನ್ನು ಉಪ್ಪಿನ ಜೊತೆ ಅಗಿಯುವುದರಿಂದ ಬಾಯಿಯ ಹುಣ್ಣು ನಿವಾರಣೆಯಾಗುವುದು.
ಗಸಗಸೆ ಪಾಯಸ ಅಥವಾ ಒಣ ಕೊಬ್ಬರಿಯ ಜೊತೆ ಸ್ವಲ್ಪ ಹುರಿದ ಗಸಗಸೆ ಬೆಲ್ಲವನ್ನು ಸೇರಿಸಿ ಅಗಿಯುವುದರಿಂದ ಬಾಯಿಯ ಹುಣ್ಣು ದೂರವಾಗುವುದ, ಬಾಯಿಯ ಹುಣ್ಣು ಇರುವ ಜಾಗದಲ್ಲಿ ಜೇನುತುಪ್ಪವನ್ನು ಸವರುವುದರಿಂದ ವಾಸಿಯಾಗುವುದು.
ಗಮನಿಸಿ : ಬಾಯಾರಿಕೆ ಬರಲು ಕಾರಣ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಿರುವುದು, ನೀರನ್ನು ಅತಿಯಾಗಿ ಸೇವಿಸಿ, ಜೇನುತುಪ್ಪ, ಗಸಗಸೆ, ಒಣಕೊಬ್ಬರಿ ಯಲ್ಲಿರುವ ಔಷಧೀಯ ಗುಣಗಳು ಬಾಯಿಯ ಹುಣ್ಣನ್ನು ದೂರ ಮಾಡುವುದು, ಬಾಳೆಹಣ್ಣು, ಅಪಾಯವನ್ನು ಸೇವಿಸುವುದರಿಂದ ಮೇಲಿನ ರೋಗ ವಾಸಿಯಾಗುವುದು, ಅವುಗಳಲ್ಲಿರುವ ಜೀವಸತ್ವಗಳು ರೋಗ ಬರದಂತೆ ತಡೆಯಬಲ್ಲವು ಹಾಗೂ ದೇಹಕ್ಕೆ ರಕ್ಷಣೆ ಕೊಡುತ್ತದೆ.