ಯಾರೇ ನೀನು ಚೆಲುವೆ ಚಿತ್ರದ ನಟಿ ಸಂಗೀತಾ ಈಗ ಏನ್ ಕೆಲಸ ಮಾಡುತ್ತಿದ್ದಾರೆ? ಎಲ್ಲಿದ್ದಾರೆ ಗೊತ್ತಾ?

    0
    1359

    ಯಾರೆ ನೀನು ಚೆಲುವೆ 1998ರಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ಸೆನ್ಸೇಷನ್ ಉಂಟುಮಾಡಿದ ಚಿತ್ರ, ಪತ್ರದ ಮೂಲಕವೇ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಕಥಾವಸ್ತು ಇರುವ ಈ ಚಿತ್ರ ಚಿತ್ರರಂಗದಲ್ಲಿ ದೊಡ್ಡ ಸೌಂಡ್ ಮಾಡಿತ್ತು, ಸಿಂಪಲ್ ನಟಿ ಸಂಗೀತ ಅವರನ್ನು ಕನ್ನಡ ಪ್ರೇಕ್ಷಕರು ತುಂಬಾ ಮೆಚ್ಚಿಕೊಂಡಿದ್ದರು, ಅಂದಿನ ಅದೆಷ್ಟು ಹುಡುಗರು ಯಾರೇ ನೀನು ಚೆಲುವೆ ಸಿನಿಮಾ ನೋಡಿ ಜೀವನದಲ್ಲಿ ಪ್ರೀತಿ ಅಂತ ಮಾಡಿದರೆ ಈ ರೀತಿಯ ಹುಡುಗಿಯನ್ನು ಪ್ರೀತಿ ಮಾಡಬೇಕು ಎನ್ನುತ್ತಿದ್ದರು, ಕಾರಣ ಈ ಚಿತ್ರದಲ್ಲಿ ಸಂಗೀತ ಅವರ ಅಭಿನಯ ಮತ್ತು ಹಾವಭಾವ ಅಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

    ಯಾರೆ ನೀನು ಚೆಲುವೆ ಮ್ಯೂಸಿಕಲ್ ಹಿಟ್ ಸಿನಿಮಾವಾಗಿ ಹೊರಹೊಮ್ಮಿತು, ಈ ಸಿನಿಮಾ ನೋಡಲು ಚಿತ್ರಮಂದಿರದ ಕಡೆ ಸಿನಿರಸಿಕರು ತುಂಬಿಕೊಂಡರು, ಚಿತ್ರಮಂದಿರ ತುಂಬಿದೆ ಎಂಬುವ ಬೋರ್ಡ್ ಗಳು ಎಲ್ಲಾ ಚಿತ್ರಮಂದಿರದ ಮುಂದೆ ನೇತಾಡಿದವು, ಈ ಚಿತ್ರ ಸೂಪರ್ ಡೂಪರ್ ಹಿಟ್ ಆಯಿತು, ಈ ಚಿತ್ರದ ಮೂಲಕ ಸಂಗೀತ ಕನ್ನಡ ಪ್ರೇಕ್ಷಕನಿಗೆ ಇಷ್ಟವಾದರೂ, ಮೂಲತಹ ಮಲಯಾಳಂ ನ ಈ ನಟಿ ಮಲಯಾಳಂ ತೆಲುಗು ತಮಿಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ ಕನ್ನಡದಲ್ಲಿ ನಟಿಸಿದ್ದು ಕೇವಲ ಒಂದೇ ಚಿತ್ರದಲ್ಲಿ, ಆದರೂ ಸಂಗೀತ ಅವರನ್ನು ಕನ್ನಡಿಗರು ಮರೆಯಲಿಲ್ಲ.

    2000ದ ಇಸವಿಯಲ್ಲಿ ತಮಿಳಿನ ಛಾಯಾಗ್ರಾಹಕ ಹಾಗೂ ನಿರ್ದೇಶಕ ಶರಣ ಎನ್ನುವವರನ್ನು ಮದುವೆಯಾದರು ನಂತರ ನಟಿ ಸಂಗೀತ ಯಾವುದೇ ಸಿನಿಮಾಗಳಲ್ಲಿ ನಟನೆ ಮಾಡಲಿಲ್ಲ, ಸಿನಿಮಾಗಳಲ್ಲಿ ಸೈಲೆಂಟ್ ಹುಡುಗಿಯ ಪಾತ್ರವನ್ನು ಹೆಚ್ಚಾಗಿ ಮಾಡಿರುವ ಸಂಗೀತ ನಿಜ ಜೀವನದಲ್ಲಿಯೂ ತುಂಬಾನೇ ಸೈಲೆಂಟ್ ಸಂಗೀತ ಅವರು ಈಗ ಸಿನಿಮಾಗಳಲ್ಲಿ ನಟಿಸದೇ ಹೋದರು ಸಿನಿಮಾರಂಗದ ಟಚ್ ಇಟ್ಟುಕೊಂಡಿದ್ದಾರೆ, ತಮ್ಮ ಪತಿ ಕ್ಯಾಮೆರಾ ಮ್ಯಾನ್ ಶರವಣ ಅವರಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ, ಈ ಮೂಲಕ ತಮ್ಮ ಪತಿಯ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ, ನಟಿ ಸಂಗೀತ ಅವರು ನಿಮಗೆ ಇಷ್ಟವಾದಲ್ಲಿ ತಪ್ಪದೇ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

    LEAVE A REPLY

    Please enter your comment!
    Please enter your name here