ಈ ಸುಡು ಬೇಸಿಗೆಯಲ್ಲಿ ಅತಿಯಾದ ಬಾಯಾರಿಕೆ ಕಾಡುವುದು ಉಂಟು, ಹಾಗೆಯೇ ಬಾಯಿಹುಣ್ಣು ಸಹ ಉಪಟಳವನ್ನು ನೀಡುವುದು, ಇದರಿಂದ ದಿನದ ಎಲ್ಲ ಕೆಲಸಗಳು ಕಿರಿಯಿಂದಲೇ ಕೂಡಿರುತ್ತದೆ, ಹಾಗು ಬಾಯಾರಿಕೆ ನಿವಾರಿಸಿ ಕೊಳ್ಳಲು ಅದೆಷ್ಟೇ ನೀರು ಕುಡಿದರು ಕಡಿಮೆಯಾಗುವುದಿಲ್ಲ ಇದರಿಂದ ಮಾತನಾಡುವುದು ಸಹ ಕಷ್ಟ ಅದರಲ್ಲೂ ದೇಹದ ಉಷ್ಣಾಂಶ ಹೆಚ್ಚಾದರೆ ಬಾಯಿಯಲ್ಲಿ ಉಣ್ಣು ಸಹ ಕಾಣಿಸಿಕೊಳ್ಳುತ್ತದೆ ಇದರ ಕಾಟದಿಂದ ತಪ್ಪಿಸಿಕೊಳ್ಳಲು ಮನೆಯಲ್ಲೇ ಇರುವ ಕೆಲವು ಸುಲಭ ಹಾಗು ಶೀಘ್ರ ಕೆಲಸ ಮಾಡುವ ಮನೆ ಮದ್ದಿನ ಬಗ್ಗೆ ತಿಳಿಸುತ್ತೇವೆ ತಪ್ಪದೆ ಸಂಪೂರ್ವಾಗಿ ನೋಡಿ.
ಬಾಯಾರಿಕೆಯಿಂದ ನರಳುವವರು ಬಿಸಿ ಹಾಲಿಗೆ ಅರಿಶಿನ ಪುಡಿ, ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಬಾಯಾರಿಕೆ ದೂರವಾಗುವುದು.
ಕಾಯಿಸಿ, ಆರಿದ ನೀರನ್ನು ಕುಡಿಯುವುದರಿಂದ ಬಾಯಾರಿಕೆ ಕಡಿಮೆಯಾಗುವುದು, ಏಲಕ್ಕಿ ಕಾಳನ್ನು ಅಗಿಯುವುದರಿಂದ ಬಾಯಾರಿಕೆ ದೂರವಾಗುವುದು.
ಬಳಲಿಕೆಯಿಂದ ಬಾಯಾರಿಕೆ ಹೆಚ್ಚಾಗುವುದು, ಹೀಗಿರುವುದರಿಂದ ಬಳಲಿಕೆಯನ್ನು ಕಡಿಮೆ ಮಾಡಿಕೊಳ್ಳಬೇಕು, ಸೇಬು ಮತ್ತು ನಿಂಬೆ ಹಣ್ಣನ್ನು ಹೋಳುಗಳನ್ನಾಗಿ ಮಾಡಿಕೊಂಡು ಕುದಿಯುವ ನೀರಿಗೆ ಬೆರೆಸಿ, ಸ್ವಲ್ಪ ಸಮಯ ಬಿಟ್ಟು ನೀರನ್ನು ಶೋಧಿಸಿಕೊಂಡು, ಸಕ್ಕರೆ ಬೆರೆಸಿ ಕುಡಿಯುವುದರಿಂದ ಬಾಯಾರಿಕೆ ನಿವಾರಣೆಯಾಗುವುದು.
ಅರ್ಧ ಚಮಚ ಕಾಳು ಮೆಣಸನ್ನು ಹುರಿದು ಪುಡಿ ಮಾಡಿಕೊಳ್ಳಿ, ಈ ಪುಡಿಯನ್ನು ಕುದಿಯುವ ನೀರಿಗೆ ಹಾಕಿ ಪುನಃ ಕುದಿಸಿ ಕೆಳಗಿ ತಣ್ಣಗಾದ ನಂತರ ಕುಡಿದರೆ ಬಾಯಾರಿಕೆ ದೂರವಾಗುವುದು.
ಕೊತ್ತಂಬರಿ ಬೀಜ, ಜೀರಿಗೆಯನ್ನು ಸಮ ಪ್ರಮಾಣದಲ್ಲಿ ಕುಟ್ಟಿನೀರಿಗೆ ಬೆರೆಸಿ, ಕಷಾಯವನ್ನು ತಯಾರಿಸಿ, ಹೀಗೆ ತಯಾರಿಸಿದ ಕಷಾಯವನು ಆಣಗೆ ಮಾಡಿ ಕುಡಿಯಿರಿ ಆಗ ಬಾಯಾರಿಕೆ ನಿಲ್ಲುವುದು.