ಈ ದೇವಾಲಯದಲ್ಲಿ ಮಣ್ಣಿನ ಹರಕೆ ಹೊತ್ತರೇ ಸಾಕು ಬೇಡಿದ್ದೆಲ್ಲ ನೀಡುತ್ತಾನೆ ಈ ಸೂರ್ಯ ದೇವ!

0
2137

ಮನುಷ್ಯರೆಲ್ಲರೂ ಅಥವಾ ಭೂಮಿ ಮೇಲಿರುವ ಪ್ರಾಣಿಗಳು ಎಲ್ಲವೂ ಭಗವಂತನ ಮಕ್ಕಳೇ, ಕಷ್ಟ ಬಂದಾಗ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಕಷ್ಟ ನಿವಾರಿಸುವಂತೆ ಮೊರೆ ಹೋಗುವುದು ಎಷ್ಟು ಸಾಮಾನ್ಯವೂ ಅಷ್ಟೇ ಭಗವಂತನನ್ನು ನಾವು ಬೇಡುವುದು ಕಷ್ಟ ಕಾರ್ಪಣ್ಯಗಳನ್ನು ತೀರಿಸು ಎಂದು ಅಂಗಲಾಚು ವುದು ಸಹ ಸಾಮಾನ್ಯವೇ.

ಕಷ್ಟಗಳು ಇಲ್ಲದೆ ಇರುವ ಮನುಷ್ಯನಿಲ್ಲ, ಪ್ರತಿಯೊಬ್ಬರಿಗೂ ಅವರದೇ ಆದಂತಹ ಸಮಸ್ಯೆಗಳು ಇರುತ್ತವೆ, ಅದರಂತೆಯೇ ತನ್ನ ಮುಂದಿನ ಜೀವನದ ಬಗ್ಗೆ ಒಂದಷ್ಟು ಆಸೆಗಳು ಸಹ ಇರುತ್ತದೆ, ಕೆಲವರಿಗೆ ಆರೋಗ್ಯದ ಚಿಂತೆ ಆದರೆ ಇನ್ನು ಕೆಲವರಿಗೆ ತಾವು ಸ್ವಂತ ಮನೆ ಕಟ್ಟುವ ಚಿಂತೆ, ಇನ್ನು ಕೆಲವರಿಗೆ ಹೊಸ ಕಾರುಗಳು ಅಥವಾ ವಾಹನ ಗಳನ್ನು ಕೊಂಡುಕೊಳ್ಳುವ ಚಿಂತೆ ಹೀಗೆ ಪ್ರತಿಯೊಬ್ಬರ ಆಸೆಯನ್ನು ನಿವಾರಿಸುವ ಸೂರ್ಯದೇವನ ದೇವಾಲಯದ ಬಗ್ಗೆ ನಾವು ನಿಮಗೆ ನಮನವನ್ನು ನೀಡುತ್ತೇವೆ.

ಈ ದೇವಾಲಯಕ್ಕೆ ಸುಮಾರು ಏಳು ಶತಮಾನಗಳ ಇತಿಹಾಸ ಇದೆಯಂತೆ, 13 ನೇ ಶತಮಾನದಲ್ಲಿ ಆಡಳಿತದಲ್ಲಿದ್ದ ಗಂಗ ಅರಸರು ದೇವಾಲಯದ ಅಭಿವೃದ್ಧಿಗೆ ಕಾರಣ ಎಂದು ಹೇಳಲಾಗುತ್ತದೆ, ದಕ್ಷಿಣ ಭಾರತದ ಪ್ರಸಿದ್ದ ದೇವಾಲಯವಾದ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದಿಂದ ಉಜಿರೆ ಮಾರ್ಗವಾಗಿ 13 ಕಿಲೋಮೀಟರ್ ಪ್ರಯಾಣಿಸಿದರೆ ಮಣ್ಣಿನ ಹರಕೆಯ ದೇವಸ್ಥಾನ ಎಂದು ಪ್ರಸಿದ್ಧಿ ಹೊಂದಿರುವ ಈ ದೇವಾಲಯವು ಸಿಗುತ್ತದೆ.

ಇನ್ನು ಈ ದೇವಾಲಯಕ್ಕೆ ನೀವು ಭೇಟಿ ನೀಡಿದರೆ ಎಲ್ಲಿ ನೋಡಿದರೂ ಅಲ್ಲೆಲ್ಲ ಚಿಕ್ಕ ಚಿಕ್ಕ ಮಣ್ಣಿನ ಮೂರ್ತಿಗಳು ನಿಮಗೆ ಕಾಣಲು ಸಿಗುತ್ತದೆ, ದನ ಕರು ಮೂರ್ತಿಗಳು, ತಾಯಿ ಮಗ, ಮೊಬೈಲ್ ಕಂಪ್ಯೂಟರ್ ಮೇಜು ವಿಮಾನ ಕಟ್ಟಡ ನಾಯಿ ಬೆಕ್ಕು ಹೃದಯ ಮೂತ್ರಪಿಂಡ ಹೀಗೆ ಎಲ್ಲಾ ರೀತಿಯ ಮಣ್ಣಿನ ಗೊಂಬೆಗಳನ್ನು ಸಹ ನೀವು ಇಲ್ಲಿ ನೋಡಬಹುದು, ಹಾಗೆಯೇ ಇದಿಷ್ಟು ಹರಕೆಯ ಗೊಂಬೆಗಳು.

LEAVE A REPLY

Please enter your comment!
Please enter your name here