ಎಲ್ಲ ಸಮಯದಲ್ಲೂ ಪಪ್ಪಾಯ ತಿನ್ನಲು ದೊರೆಯುತ್ತದೆ, ಪಪ್ಪಾಯ ಹಣ್ಣನ್ನು ಗರ್ಭಿಣಿಯರು ಸೇವಿಸ ಬಾರದ ಇದನ್ನು ಬಿಟ್ಟರೆ ಪಪ್ಪಾಯ ಉಳಿದ ಎಲ್ಲರಿಗು ಬಹಳ ಆರೋಗ್ಯಕಾರಿ, ಮುಖ್ಯವಾಗಿ ದೇಹದ ತೂಕ ಇಳಿಸಲು ಬಯಸುವರು ದಿನ ಬೆಳಗ್ಗೆ ಪಪ್ಪಾಯ ಹಣ್ಣನ್ನು ತಿನ್ನಬಹುದು, ಹೀಗೆ ಪಪ್ಪಾಯದ ಹಲವು ಅರೋಗ್ಯ ಲಾಭಗಳನ್ನು ಇಂದು ತಿಳಿಸುತ್ತೇವೆ ಸಂಪೂರ್ಣವಾಗಿ ಓದಿ.
ಅರೆಪಕ್ವ ಪರಂಗಿ ಹಣ್ಣನ್ನು ತುರಿದು ಯಾವುದೇ ರಿತಿಯ ಗಾಯಗಳಿಗೆ ಹಚ್ಚುವುದರಿಂದ ಗಾಯ ವಾಸಿಯಾಗುತ್ತದೆ.
ಪಪ್ಪಾಯ ಕಾಯಿಯ ರಸ, ಜೇನುತುಪ್ಪ ಒಂದೊಂದು ಚಮಚವನ್ನು ಬಿಸಿನೀರಿಗೆ ಹಾಕಿ ಸೇವಿಸಿದರೆ ಜಂತು ಹುಳಗಳ ನಿವಾರಣೆಯಾಗುತ್ತದೆ.
ಪರಂಗಿ ಕಾಯಿಯನ್ನು ಸಣ್ಣಗೆ ಹೋಳುಮಾಡಿ ಅದಕ್ಕೆ ಕಾಳು ಮೆಣಸಿನ ಪುಡಿ, ಜೀರಿಗೆ, ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ಮಲಬದ್ಧತೆ ಕಡಿಮೆ ಆಗುತ್ತದೆ.
ಪರಂಗಿಹಣ್ಣಿನಲ್ಲಿರುವ ಫೈಬರ್, ವಿಟಮಿನ್ `ಸಿ’ ಮತ್ತು ಉತ್ಕರ್ಷಣ ನಿರೋಧಿ ಅಂಶಗಳು, ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ.
ಕಾಯಿಯನ್ನು ಜಜ್ಜಿ ಹಿಂಡಿ ರಸ ತೆಗೆದು ಹಚ್ಚಿದರೆ ಚಿಬ್ಬು (ರಿಂಗ್ವರ್ಮ್) ಹಾಗೂ ಚರ್ಮ ರೋಗಗಳು ವಾಸಿಯಾಗುತ್ತವೆ.
ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು, ಊಟಕ್ಕೆ ಮುಂಚೆ ಮೂವತ್ತು ಪರಂಗಿ ಬೀಜಗಳನ್ನು ಹಣ್ಣಿನ ತಿರುಳಿನೊಂದಿಗೆ ಸೇವಿಸುವುದರಿಂದ ಕೂಡ ಜಂತು ನಿವಾರಣೆ ಆಗುತ್ತವೆ.
ನಿತ್ಯ ಪಪ್ಪಾಯ ಸೇವಿಸುವುದರಿಂದ ಮೂತ್ರ ಕೋಶದಲ್ಲಿ ಕಲ್ಲುಗಳುಂಟಾಗುವುದಿಲ್ಲ, ಮೂತ್ರ ನಾಳದಲ್ಲಿ ಕಲ್ಲುಗಳಿದ್ದರೆ ಇದರ ಸೇವನೆ ಒಳ್ಳೆಯದು, ಅಲ್ಲದೆ ಮೂತ್ರಜನಕವಾಗಿಯೂ ಕೆಲಸ ಮಾಡುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.