ಮೂಗುತಿ ಧರಿಸಿದರೆ ಮಹಿಳೆಯರಿಗೆ ಇರೋ ಲಾಭ ಏನು ನೋಡಿ!

0
2256

ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಕಾರಣ ಇದೆ ಎಂಬುದರ ಬಗ್ಗೆ ಹಲವು ಸಂಶೋಧನೆಗಳು ದೃಢೀಕರಿಸುತ್ತಿರುವ ಬೆನ್ನಿನಲ್ಲಿ ನಮ್ಮ ಆಚಾರ ವಿಚಾರಗಳನ್ನು ನಾವೇ ಕಡೆಗಣಿಸುತ್ತಿರುವುದು ಖಂಡನೀಯ, ಅದೇನೇ ಇರಲಿ ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡುವುದು ತಪ್ಪಲ್ಲ ಆದರೆ ಅದನ್ನೇ ಜೀವನದ ಭಾಗ ಮಾಡಿಕೊಂಡಿರುವುದು ಸರಿಯಲ್ಲ.

ಇದೇ ಭಾರತೀಯ ಸಂಸ್ಕೃತಿಯಲ್ಲಿ ಒಳಗೊಂಡಿರುವಂತೆ ಹೆಣ್ಣುಮಕ್ಕಳಿಗೆ ಮೂಗುತಿ ಎಷ್ಟು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂಬುದರ ಬಗ್ಗೆ ತಿಳಿಯೋಣ, ಇತಿಹಾಸ ಕೆದಕಿದಾಗ ಆಭರಣಗಳು ಧರಿಸುತ್ತಿದ್ದುದು ಗಂಡಸರು, ಆದರೆ ಗಣನೀಯವಾಗಿ ಕಾಲ ಬದಲಾದಂತೆ ಬಳೆ, ಸರ, ಕಾಲ್ಗೆಜ್ಜೆ, ಸೇರಿದಂತೆ ಅನೇಕ ಆಭರಣವನ್ನು ಮಹಿಳೆಯರು ಧರಿಸಲು ಶುರು ಮಾಡಿದರು, ಆದರೆ ಮೂಗುತಿ ಗಂಡಸರು ಧರಿಸದೆ ಇದ್ದ ಏಕಮಾತ್ರ ಆಭರಣ, ಮೂಗುತಿಯನ್ನು ಹೆಣ್ಣು ಮಾತ್ರ ಧರಿಸುತ್ತಾಳೆ, ಯಾಕೆ ಈ ಪದ್ಧತಿ ರೂಢಿಯಲ್ಲಿರುವ ಅಥವಾ ರೂಡಿಯಲ್ಲಿತ್ತು ತಿಳಿಯೋಣ.

ನಮ್ಮ ಸಂಪ್ರದಾಯದಲ್ಲಿ ಹೆಂಗಸರು ಧರಿಸುವ ಮೂಗುತ್ತಿಗ್ಗೆ ಅದರದೇ ಆದ ಮಹತ್ವವಿದೆ, ಮೇಲೆ ಹೇಳಿದಂತೆ ಸ್ತ್ರೀಯರಿಗೆ ಮಾತ್ರ ನಮ್ಮ ಸಂಪ್ರದಾಯದಲ್ಲಿ ಮೂಗುತಿ ಹಾಕಲು ಹೇಳಲಾಗಿದೆ, ಕಾರಣ ಸ್ತ್ರೀಯರ ಮನಸ್ಸು ಚಂಚಲ ಆದ್ದರಿಂದ ಮೂಗುತಿಯನ್ನು ಧರಿಸಿದರೆ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ.

ಹಾಗೂ ಮೂಗಿನ ಬಿಂದುವಿನ ಮೇಲೆ ಒತ್ತಡ ನಿರ್ಮಾಣವಾಗಿ ಬಿಂದು ಒತ್ತಡದ ಉಪಚಾರ ವಾಗುವುದರಿಂದ ಅಲ್ಲಿರುವ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ, ಉದಾಹರಣೆಗೆ ಕುದುರೆಯನ್ನು ನಿಯಂತ್ರಿಸಲು ಹೇಗೆ ಅದರ ಮೂವಿಗೆ ದಾರವನ್ನು ಕಟ್ಟಿ ಇಡುತ್ತಾರೋ ಅದೇ ರೀತಿಯಾಗಿ ಮೂಗುತಿ ಕೂಡ ಹೆಣ್ಣಿನ ಕೋಪ, ಹಠ ಚಂಚಲತೆಯನ್ನು ನಿಗ್ರಹಿಸಲು ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನು ಮೂಗುತಿಯನ್ನು ಹಲವಾರು ವಿಧಗಳಿದ್ದು, ಮದುವೆ ಸಮಾರಂಭಗಳಲ್ಲಿ ದೊಡ್ಡದಾದ ಬಳೆಯಾಕಾರದ ಮೂಗುತಿಯನ್ನು ಮದುವೆ ವಧುವನ್ನು ಸಿಂಗರಿಸಲು ಬಳಸಲಾಗುತ್ತದೆ, ಅದೇ ರೀತಿ ಭಾರತದಲ್ಲಿನ ಹಲವು ಸಂಸ್ಕೃತಿಯ ಹೆಣ್ಣುಮಕ್ಕಳು ಅವರ ಆಚರಣೆಯ ತಕ್ಕಂತೆ ಮೂಗುತಿಗಳನ್ನು ಧರಿಸುತ್ತಾರೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here