ನಿಮ್ಮ ಮನೆಗೆ ಬಂದವರಿಗೆ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಕೊಡಬೇಡಿ.. ಕೊಟ್ಟರೆ ಜೀವನ ಕಾಲ ದರಿದ್ರ ಕಟ್ಟುತ್ತದೆ..

0
2007

ಇಂದು ನಾವು ನಿಮಗೆ ದಾನಗಳ ಬಗ್ಗೆ ಒಂದು ವಿಶೇಷವಾದ ಮಾಹಿತಿಯನ್ನು ಹಾಗೂ ನೀವು ದಾನ ಮಾಡಬೇಕಾದರೆ ವಹಿಸಬೇಕಾದ ಮುತುವರ್ಜಿಯ ಬಗ್ಗೆ ತಿಳಿಸಿ ಕೊಡಲು ಇಚ್ಛಿಸುತ್ತೀವಿ, ದಾನದಲ್ಲಿ ಹಲವು ವಿಧಗಳಿವೆ ಸರ್ವಶ್ರೇಷ್ಠ ದಾನಗಳಿವೆ ಅವುಗಳಲ್ಲಿ ಪ್ರಮುಖವಾದದ್ದು ಧಾನ್ಯ ದಾನ, ಆಹಾರ ದಾನ, ವಿದ್ಯಾದಾನ, ಜೀವದಾನ ಹಾಗೂ ರಕ್ತದಾನ ಈ ರೀತಿ ಹಲವು ರೀತಿಯ ವಿಧಾನಗಳಿವೆ ಇದನ್ನು ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ, ಆದರೆ ಕೆಲವು ವಸ್ತುಗಳನ್ನು ದಾನವಾಗಿ ಕೊಡಬಾರದು ಎಂದು ನಮ್ಮ ಸಂಪ್ರದಾಯದಲ್ಲಿ ಅಥವಾ ಧರ್ಮದಲ್ಲಿ ಹೇಳಲಾಗಿದೆ ಅಂತಹ ವಸ್ತುಗಳನ್ನು ದಾನ ಮಾಡಿದಲ್ಲಿ ಅಥವಾ ಬೇರೆಯವರಿಗೆ ಕೊಟ್ಟಿದ್ದಲ್ಲ ನಿಮಗೆ ದರಿದ್ರ ಸುತ್ತಿಕೊಳ್ಳುತ್ತದೆ ಎಂದು ಹೇಳಲಾಗಿದೆ ಹಾಗಾದರೆ ಯಾವ ವಸ್ತುಗಳನ್ನು ದಾನ ಮಾಡಬಾರದು ಎನ್ನುವ ಬಗ್ಗೆ ಮಾಹಿತಿ ನೀಡುತ್ತೇವೆ.

ಪ್ಲಾಸ್ಟಿಕ್ ವಸ್ತುಗಳು : ನೀವು ಗಮನಿಸಿರಬಹುದು ದೇವಸ್ಥಾನಗಳು ಆಗಲಿ ಅಥವಾ ಮನೆಯ ಪೂಜೆಗಳಲ್ಲಿ ಆಗಲಿ ನಾವು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ ಕಾರಣ ಅದು ನಿಷಿದ್ಧ, ಆದಕಾರಣ ಪ್ಲಾಸ್ಟಿಕ್ ಪ್ರಾಮುಖ್ಯತೆಯನ್ನು ಪಡೆದಿರುವುದಿಲ್ಲ ಹಾಗಾಗಿ ಇವುಗಳನ್ನು ದಾನವಾಗಿ ಕೊಡಬಾರದು ಎನ್ನಲಾಗಿದೆ.

ಕಸದ ಪೊರಕೆ : ನಿಮಗೆಲ್ಲ ತಿಳಿದಿರುವ ಹಾಗೆ ಮನೆಯ ಕಸದ ಪೊರಕೆ ಲಕ್ಷ್ಮೀದೇವಿಯ ಸಮಾನ, ಮನೆಯನ್ನು ಶುದ್ದಿ ಪಡಿಸಿ ಮನಸ್ಸನ್ನು ಸ್ವಚ್ಛವಾಗಿರುವ ಏಕೈಕ ವಸ್ತು ಮನೆಯ ಪೊರಕೆ, ಇದನ್ನು ಯಾವುದೇ ಕಾರಣಕ್ಕೂ ದಾನವಾಗಿ ಕೊಡಬಾರದು.

ಬಟ್ಟೆ ದಾನ : ವಸ್ತ್ರದಾನ ಮಾಡುವುದು ತುಂಬಾ ಒಳ್ಳೆಯದು ಆದರೆ ನೀವು ದಾನಮಾಡುವ ವಸ್ತು ಅಥವ ವಸ್ತ್ರ ಹೊಸದಾಗಿ ಇರಬೇಕು ನೀವು ಬಳಸಿದ ಅಥವಾ ಹಳೆಯ, ಹಾಳಾದ ಯಾವುದೇ ಕೆಲಸಕ್ಕೆ ಬಾರದ ಬಟ್ಟೆಗಳನ್ನು ದಾನ ಮಾಡಬಾರದು, ಇದು ದಾರಿದ್ರ್ಯ.

ಸ್ಟೀಲ್ ಪಾತ್ರೆಗಳು : ಯಾವ ಪುರಾಣದಲ್ಲಿ ಸ್ಟೀಲ್ ಪಾತ್ರೆಗಳು ಅಥವಾ ಕಬ್ಬಿಣದ ಪಾತ್ರಗಳನ್ನು ದಾನವಾಗಿ ನೀಡಬೇಕು ಎಂದು ಉಲ್ಲೇಖ ಮಾಡಿಲ್ಲ ಆದ್ದರಿಂದ ದಯಮಾಡಿ ಯಾವುದೇ ಕಾರಣಕ್ಕೂ ಇಂತಹ ಅಥವಾ ಕಬ್ಬಿಣದ ಪಾತ್ರೆಗಳನ್ನು ದಾನ ನೀಡಬೇಡಿ, ಇದರಿಂದ ಇದ್ದ ಅದೃಷ್ಟಗಳು ಕಡಿಮೆಯಾಗಿ ದಾರಿದ್ರ ಹತ್ತಿರವಾಗುತ್ತದೆ.

ಎಣ್ಣೆ ದಾನ : ಮನೆಯಲ್ಲಿ ಇರುವ ಯಾವುದೇ ರೀತಿಯ ಅಡುಗೆ ಅಥವಾ ದೇವರ ದೀಪಕ್ಕೆ ಬಳಸುವ ಎಣ್ಣೆಯನ್ನು ದಾನವಾಗಿ ನೀಡಬಾರದು, ಹೀಗೆ ಮಾಡಿದರೆ ಶನೇಶ್ವರನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ, ಅದರಿಂದ ಯಾವುದೇ ಕಾರಣಕ್ಕಾಗಿ ಮನೆ ಎಣ್ಣೆಯನ್ನು ದಾನವಾಗಿ ನೀಡಬೇಡಿ.

ಸ್ಟೇಷನರಿ ವಸ್ತುಗಳು : ಮನೆಯಲ್ಲಿ ನೀವು ಬಳಸುವ ಅಥವಾ ನಿಮ್ಮ ಮಕ್ಕಳು ಬಳಸುವ ಸ್ಟೇಷನರಿ ವಸ್ತುಗಳು ಅಂದರೆ ಬರವಣಿಗೆಗೆ ಬಳಸುವ ಲೇಖನಿ ಅಥವಾ ಪೇಪರ್ ಮತ್ತು ಪುಸ್ತಕಗಳನ್ನು ದಾನವಾಗಿ ನೀಡಬೇಡಿ, ಹಾಗೆ ನೀವು ದಾನ ಮಾಡಬೇಕು ಎನಿಸಿದರೆ ಹೊಸ ಪುಸ್ತಕಗಳು ಅಥವಾ ಇನ್ನೂ ಬಳಸದ ಲೇಖನಗಳನ್ನು ದಾನ ಮಾಡಿ, ನೀವು ಬಳಸಿದ ಸ್ಟೇಷನರಿ ಗಳನ್ನು ದಾನ ಮಾಡಿದ್ದಲ್ಲಿ ನಿಮ್ಮ ಜ್ಞಾನ ಕರಗುತ್ತದೆ.

LEAVE A REPLY

Please enter your comment!
Please enter your name here