100 ಗ್ರಾಂ ಕೀವಿ ಹಣ್ಣಿನಲ್ಲಿ ಇರುವ ಅರೋಗ್ಯ ಲಾಭ ಎಷ್ಟು ನೋಡಿ ಸಕ್ಕರೆ ಕಾಯಿಲೆ, ಜೀರ್ಣಕ್ರಿಯೆ ಇನ್ನು ಹಲವು ಸಮಸ್ಯೆಗೆ ಮದ್ದು

0
937

ಹುಳಿ ಸಿಹಿ ಎರಡೂ ರುಚಿಯನ್ನು ಹೊಂದಿರುವ ಈ ಹಣ್ಣು ಅನೇಕ ರೀತಿಯ ಪೌಷ್ಟಿಕಾಂಶವನ್ನು ಹೊಂದಿದೆ. ಅಮೆರಿಕಾದ ಕೃಷಿ ಇಲಾಖೆಯ ಪ್ರಕಾರ 100 ಗ್ರಾಂ ಕೀವಿ ಹಣ್ಣಿನಲ್ಲಿ 61 ಗ್ರಾಂ ಕ್ಯಾಲರಿ, 14.66 ಗ್ರಾಂ ಕಾರ್ಬೋಹೈಡ್ರೇಟ್​. 1.14 ಗ್ರಾಂ ಪ್ರೊಟೀನ್​, 0.52 ಗ್ರಾಂ ಫ್ಯಾಟ್​ ಮತ್ತು 3 ಗ್ರಾಂ ಫ್ಯಾಟ್​ ಅಂಶವಿದೆ.

ನಿತ್ಯ ಕೀವಿ ಹಣ್ಣು ಸೇವಿಸುವುದರಿಂದ ಏನೆಲ್ಲ ಲಾಭ ನೋಡಿ : ಉತ್ತಮ ಪ್ರಮಾಣದ ವಿಟಮಿನ್​ ಸಿ ಸಿಗುತ್ತದೆ : ಕಿತ್ತಳೆ, ನಿಂಬೆಹಣ್ಣಿಗೆ ಹೋಲಿಸಿದರೆ ಕೀವಿ ಹಣ್ಣಿನಲ್ಲಿ ವಿಟಮಿನ್​ ಸಿ ಅಂಶ ಹೆಚ್ಚಿದೆ. ಆದ್ದರಿಂದ ಈ ಹಣ್ಣು ಉತ್ತಮ ಆ್ಯಂಟಿ ಆಕ್ಸಿಡೆಂಟ್​. ಹಾಗೆ ಇದು ಫ್ರೀ ರಾಡಿಕಲ್ಸ್​ನ್ನು ತೆಗೆದುಹಾಕಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಿದ್ದೆ ಸಮಸ್ಯೆಗೆ ಪರಿಹಾರ ನೀಡುತ್ತದೆ : ಕೀವಿ ಹಣ್ಣಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್​ ಮತ್ತು ಸೆರೊಟೊನಿನ್​ ಅಂಶ ನಿದ್ದೆ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ಮಲಗುವ ಮುನ್ನ ಒಂದು ಕೀವಿ ಹಣ್ಣನ್ನು ಸೇವಿಸುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.

ಡಯೇಟ್ರಿ ಫೈಬರ್​ ಅಂಶ ಉತ್ತಮವಾಗಿ ಸಿಗುತ್ತದೆ : ಈ ರುಚಿಕರ ಹಣ್ಣಿನಲ್ಲಿರುವ ಡಯೇಟ್ರಿ ಫೈಬರ್ ಅಂಶ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಫೈಬರ್​ ಅಧಿಕವಾಗಿರುವ ಈ ಹಣ್ಣು ಕೊಲೆಸ್ಟ್ರಾಲ್​ ಮಟ್ಟವನ್ನು ಹಾಗೂ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ : ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕೀವಿ ಹಣ್ಣು ಉತ್ತಮ. ಇದರಲ್ಲಿರುವ ಡಯೆಟ್ರಿ ಫೈಬರ್​ ಅಂಶ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ.

ತ್ವಚೆಯ ಕಾಂತಿಗೂ ಉತ್ತಮ : ಕೀವಿ ಹಣ್ಣು, ಜಂಕ್​ಫುಡ್ಸ್​ ಸೇವನೆಯಿಂದ ಉಂಟಾಗುವ ಆ್ಯಸಿಡಿಕ್ ಅಂಶವನ್ನು ತೆಗೆದುಹಾಕಿ ದೇಹದಲ್ಲಿ ಪಿಹೆಚ್​ ಮಟ್ಟವನ್ನು ನಿಯಂತ್ರಿಸುತ್ತದೆ. ಜೊತೆಗೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ ಗುಣವಿರುವುದರಿಂದ ತ್ವಚೆಯ ಏಜಿಂಗ್​ನ್ನು ನಿಯಂತ್ರಿಸಿ, ಸುಕ್ಕುಗಟ್ಟುವುದು, ನೆರಿಗೆ, ಕಲೆಗಳನ್ನು ತಡೆಯುತ್ತದೆ.​

LEAVE A REPLY

Please enter your comment!
Please enter your name here