ಕನಸಿನಲ್ಲಿ ಮಹಿಳೆಯು ಈ ರೀತಿ ಕಾಣಿಸಿ ಕೊಂಡರೆ ಹೆಚ್ಚು ಕೆಲಸ ಮಾಡದೆಯೇ ಶ್ರೀಮಂತರಾಗುತ್ತೀರ!

0
4125

ನಿದ್ದೆಯಲ್ಲಿ ಕನಸು ಬೀಳುವುದು ಎಲ್ಲರಿಗೂ ಸರ್ವೇ ಸಾಮಾನ್ಯ, ಅದು ಕೆಲವರಿಗೆ ನೆನಪಿನ್ನಲ್ಲಿ ಉಳಿಯುತ್ತದೆ, ಇನ್ನು ಕೆಲವರಿಗೆ ಬೆಳಿಗ್ಗೆ ಏಳುವುದರೋಳಗೆ ಮರೆತು ಹೋಗಿರುತ್ತದೆ, ನಮ್ಮ ಹಿಂದಿನ ಪೂರ್ವಜರು ಹೇಳುವ ಪ್ರಕಾರ ಕನಸು ಬೀಳುವುದು ನಮ್ಮ ಜೀವನದ ಭವಿಷ್ಯದಲ್ಲಾಗುವ ಶುಭ ಮತ್ತು ಅಶುಭ ಸೂಚನೆಯನ್ನು ನೀಡುತ್ತದೆ, ಇದು ಸತ್ಯವೆಂದು ಕೆಲವರು ವಾದಿಸಿದ್ರೆ, ಇನ್ನು ಕೆಲವರು ಇದನ್ನು ಒಪ್ಪುವುದಿಲ್ಲ, ಕನಸಿನಲ್ಲಿ ಬರುವ ವಸ್ತಗಳು ಕೂಡಾ ಸೂಚನೆ ನೀಡುತ್ತದೆ ಆದರೆ ಮುಖ್ಯವಾಗಿ ಪುರುಷರ ಕನಸಿನಲ್ಲಿ ಮಹಿಳೆಯರು ಕಾಣಿಸಿಕೊಂಡರೆ ಆಗುವ ಮುನ್ಸೂಚನೆ ಬಗ್ಗೆ ನೀವೇ ಓದಿ ತಿಳಿದುಕೊಳ್ಳಿ.

ಬಿಳಿವರ್ಣದ ಮಹಿಳೆ : ಕನಸಿನಲ್ಲಿ ಬಿಳಿ ವರ್ಣದ ಮಹಿಳೆ ಕಾಣಿಸಿಕೊಂಡರೆ ನಿಮ್ಮನ್ನು ಆಕರ್ಷಿಸುವಂತಿದ್ದರೆ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ, ವಿದಾಯ ಹೇಳಿದಂತೆ ಕಂಡರೆ, ಪಿತ್ರಾರ್ಜಿತ ಆಸ್ತಿ ಸಿಗುತ್ತದೆ ಎಂದು ಸೂಚಿಸಿದಂತೆ.

ಮಹಿಳೆ ಆಡುತ್ತಿದ್ದರೆ : ಕನಸಿನಲ್ಲಿ ಮಹಿಳೆ ಆಡುವಂತೆ ಅಂದರೆ ನಿಮ್ಮೊಂದಿಗೆ ಚೆಸ್ ಆಟವಾಡುತ್ತಿದ್ದಂತೆ ಕಂಡರೆ ನಿಮ್ಮ ಭವಿಷ್ಯದಲ್ಲಿ ನೀವುಗಳಿಸಿದ ಹೆಸರು, ಖ್ಯಾತಿ ಮಣ್ಣಲ್ಲಿ ಮಣ್ಣಾಗಿ ಹಾಳಾಗಿ ಹೋಗುವುದನ್ನು ಸೂಚಿಸುತ್ತದೆ.

ಕನಸಿನಲ್ಲಿ ಮಧುಮಗಳು ಅತ್ತರೆ : ಇಂಥ ಕನಸುಗಳು ಮದುವೆ ವಯಸ್ಸಿನ ಹುಡುಗರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ಇಂತಹ ಕನಸು ಬಿದ್ದರೆ ಅತ್ತಿಗೆ ಅಥವಾ ಸಹೋದರ ಸಹೋದರಿಯರ ಜೊತೆ ವೈಮನಸ್ಸು ಉಂಟಾಗುತ್ತದೆ ಎಂದು ಸೂಚಿಸುತ್ತದೆ.

ಯಕ್ಷಿಣಿ ಬಂದಂತೆ ಕಂಡರೆ : ಗಂಡಸರ ಕನಸಲ್ಲಿ ಯಕ್ಷಿಣಿ ಬಂದಂತೆ ಕಂಡರೆ, ಹೆಚ್ಚು ಕೆಲಸ ಮಾಡದೆಯೇ ಶ್ರೀಮಂತನಾಗುವನು ಎನ್ನುವುದನ್ನು ತಿಳಿಸುತ್ತದೆ.

ಮಹಿಳೆ ಜೊತೆ ಪ್ರವಾಸ ಹೋದಂತೆ ಕಂಡರೆ : ಹೆಂಡತಿ ಅಥವಾ ಮದುವೆಯಾಗುವ ಹುಡುಗಿಯ ಜೊತೆ ಪ್ರವಾಸ ಹೋದಂತೆ ಕಂಡರೆ, ವೈವಾಹಿಕ ಜೀವನವು ಯಶಸ್ವಿಯಾಗಿರುತ್ತದೆ ಎನ್ನುವುದನ್ನು ಸೂಚಿಸುವುದು.

ಮಹಿಳೆ ಕನಸಲ್ಲಿ ನಿಮ್ಮನ್ನು ತಬ್ಬಿಕೊಂಡಂತೆ ಕಂಡರೆ : ಬಿಳಿ ಬಟ್ಟೆಯನ್ನು ಧರಿಸುವ ಸುಂದರವಾದ ಮಹಿಳೆ ನಿದ್ದೆಯಲ್ಲಿ ನಿಮ್ಮನ್ನು ತಬ್ಬಿಕೊಂಡಂತೆ ಕಂಡರೆ, ನೀವು ಬಹಳ ಅದೃಷ್ಟವಂತರು ಎನ್ನುವುದನ್ನು ತಿಳಿಸುತ್ತದೆ.

ವಜ್ರದ ಒಡವೆ ನೀಡುವಂತೆ ಕಂಡರೆ : ಕನಸಿನಲ್ಲಿ ಪ್ರೇಯಸಿಗೆ ವಜ್ರದ ಒಡವೆ ಉಡುಗೊರೆಯಾಗಿ ನೀಡುವಂತೆ ಕಂಡರೆ ವೈವಾಹಿಕ ಜೀವನದಲ್ಲಿ ಸಂಘರ್ಷ ಹೆಚ್ಚಾಗುತ್ತದೆ, ಜೀವನದಲ್ಲಿ ಹಣಕಾಸಿನ ತೊಂದರೆ ಉಂಡಾಗುತ್ತದೆ, ನಷ್ಟ ಅನುಭವಿಸಬೇಕಾಗುತ್ತದೆ.

ಮಹಿಳೆಯ ನಗ್ನ ಚಿತ್ರವನ್ನು ಕಂಡರೆ : ನಿಮ್ಮ ಕನಸಲ್ಲಿ ನೀವು ಮಹಿಳೆಯ ನಗ್ನ ಚಿತ್ರವನ್ನು ಬಿಡಿಸುತ್ತಿದ್ದಂತೆ ಕಂಡರೆ, ನಿಮಗೆ ಆಪತ್ಕಾಲ ಬಂತು ಎಂದೇ ಅರ್ಥ, ಅದರಲ್ಲೂ ನಗ್ನವಾಗಿ ಮಹಿಳೆ ಕಂಡರೆ ನಿಮ್ಮ ಮುಂದಿನ ಬಗುಕು ಮಹಿಳೆಯಿಂದಲೆ ಚಿಂದಿ ಯಾಗುತ್ತದೆ ಎಂದು ಸೂಚಿಸುತ್ತದೆ, ಸ್ವಲ್ಪ ಮಹಿಳೆಯರಿಂದ ದೂರ ಉಳಿಯುವುದು ಉತ್ತಮ.

LEAVE A REPLY

Please enter your comment!
Please enter your name here