ಕಾಲ ದೇವ ಕಡೆಗೂ ರಾಮನನ್ನ ಕರೆದುಕೊಂಡು ಹೋಗಿದ್ದು ಹೇಗೆ ?

0
1471

ಸ್ನೇಹಿತರೆ ಹನುಮಂತ ಜೊತೆಗಿದ್ದರು ಶ್ರೀರಾಮನ ಅವತಾರ ಅಂತ್ಯವಾಗಿದ್ದು ಹೇಗೆ ಶ್ರೀರಾಮ ಭೂಮಿಯಿಂದ ಹೋಗುವಾಗ ಅನುಮಂತ ಎಲ್ಲಿದ್ದರೂ ಗೊತ್ತಾ ? ಕಾಲ ನಿಯಮ ಬಂದಾಗ ಅಡ್ಡಿಯಾಗಲಿಲ್ಲ ಏಕೆ ಹನುಮಂತ ? ವಿಧಿಯಾಟಕ್ಕೆ ತಡೆ ಯಾಗದಂತೆ ಶ್ರೀರಾಮ ಹೇಳಿದ ಮಾಯಜಾಲ ವೇನು ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ನೀಡುತ್ತಾ ಹೋಗುತ್ತೇವೆ ತಪ್ಪದೇ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಸ್ನೇಹಿತರೆ ಹನುಮಂತ ರಾಮನ ಅತಿದೊಡ್ಡ ಭಕ್ತ, ಇಲ್ಲಿಯವರೆಗೂ ಹನುಮಂತನನ್ನು ಮೀರಿಸುವ ರಾಮನ ಭಕ್ತ ಹುಟ್ಟಿಲ್ಲ ಎಂದು ಹೇಳುತ್ತಾರೆ, ಹನುಮ ಎಲ್ಲಾ ಸಮಯದಲ್ಲೂ ಶ್ರೀರಾಮನ ಜೊತೆಯಲ್ಲಿ ಇರುತ್ತಿದ್ದರು, ಅದೇ ರೀತಿ ವಿಷ್ಣು ಅವತಾರವಾದ ಶ್ರೀರಾಮನೂ ಕೂಡ ಹನುಮಂತನನ್ನು ತಮ್ಮ ಸಹೋದರರಂತೆ ಕಾಣುತ್ತಿದ್ದರು ಹಾಗೂ ಪ್ರೀತಿ ಮಾಡುತ್ತಿದ್ದರು, ರಾಮಭಕ್ತ ಹನುಮಂತ ಇರುವುದರಿಂದ ಕಾಲದೇವ ಅಲ್ಲಿಗೆ ಬರಲು ಭಯ ಬೀಳುತ್ತಿದ್ದಂತೆ ಈ ಭೂಮಿ ಮೇಲೆ ಯಾರು ಜನಿಸಿದರು ಉಸಿರು ಚೆಲ್ಲಿ ಹೋಗಲೇಬೇಕು ಇದು ಸೃಷ್ಟಿಯ ನಿಯಮ.

ತೇತ್ರಾಯುಗದಲ್ಲಿ ಶ್ರೀ ವಿಷ್ಣು ಶ್ರೀರಾಮನ ಅವತಾರ ದಲ್ಲಿ ಭೂಮಿಯ ಮೇಲೆ ಜನಿಸಿದ್ದರಿಂದ ಅವರು ಕೂಡ ಭೂಮಿಯನ್ನು ಬಿಟ್ಟು ಒಂದಲ್ಲ ಒಂದು ದಿನ ಹೋಗಲೇಬೇಕಿತ್ತು, ಆದರೆ ಹನುಮಂತನ ಜೊತೆಯಲ್ಲಿ ಇದ್ದರೆ ಅದು ಸಾಧ್ಯವಿಲ್ಲ ಎಂದು ಅವರಿಗೂ ಚೆನ್ನಾಗಿ ಗೊತ್ತಿತ್ತು, ಅದಕ್ಕಾಗಿ ಶ್ರೀರಾಮ ಒಂದು ಮಾಯಾಜಾಲವನ್ನು ಹೆಣೆಯುತ್ತಾರೆ.

ರಾವಣನ ಸಂಹಾರವಾಗಿ ತುಂಬಾ ದಿನಗಳು ಕಳೆಯುತ್ತದೆ, ಇದರಿಂದ ಶ್ರೀರಾಮ ಭೂಮಿಗೆ ಬಂದ ಉದ್ದೇಶ ಪೂರ್ಣ ವಾಗಿರುತ್ತದೆ, ಅದೇ ಕಾರಣಕ್ಕಾಗಿ ಭೂಮಿಯಲ್ಲಿನ ತಮ್ಮ ಅವತಾರವನ್ನು ಅಂತ್ಯಗೊಳಿಸಲು ಮುಂದಾದರು ಆದರೆ ಪವನಪುತ್ರ ಹನುಮಂತ ತನ್ನ ಜೊತೆಗೆ ಇರುವವರೆಗೂ ಕಾಲದೇವ ಅಯೋಧ್ಯಕ್ಕೆ ಬರುವುದಿಲ್ಲ ಹನುಮನ ಗೆದ್ದರೆ ನಾನೇನಾದರೂ ಭೂಮಿ ಬಿಟ್ಟು ಹೊರಟರೆ ಇಡೀ ಭೂಮಿಯನ್ನೇ ಹನುಮ ತಲ್ಲಣ ಮಾಡುತ್ತಾರೆ ಎಂಬ ವಿಚಾರ ಚೆನ್ನಾಗಿಯೇ ಗೊತ್ತಿತ್ತು, ಇದಕ್ಕಾಗಿಯೇ ಕಾಲದೇವ ಬರುವ ಸಮಯಕ್ಕೆ ಹನುಮಂತನನ್ನು ಅಯೋಧ್ಯೆ ಇಂದ ದೂರವಿಡಲು ಶ್ರೀರಾಮ ಯೋಚನೆ ಮಾಡುತ್ತಾರೆ.

ಅದಕ್ಕಾಗಿ ತಮ್ಮ ಅರಮನೆಯ ಒಂದು ಮೂಲೆಯಲ್ಲಿದ್ದ ಸಣ್ಣ ಬಿರುಕಿನಲ್ಲಿ ತಮ್ಮ ಉಂಗುರವನ್ನು ಹಾಕುತ್ತಾರೆ, ನಂತರ ಹನುಮನನ್ನು ಕರೆದು ನನ್ನ ಉಂಗುರ ಈ ಸಣ್ಣ ಬಿರುಕಿನಲ್ಲಿ ಬಿದ್ದಿದೆ ತೆಗೆದುಕೊಡು ಎಂದು ಕೇಳುತ್ತಾರೆ, ಈ ರೀತಿ ಶ್ರೀರಾಮ ಹೇಳಿದ ತಕ್ಷಣ ಹನುಮಾ ಏನು ಯೋಚನೆ ಮಾಡದೆ ತನ್ನ ದೇಹದ ಗಾತ್ರವನ್ನು ಸಣ್ಣ ಮಾಡಿ ಆ ಮೂಲೆಯೊಳಗೆ ಹೋಗುತ್ತಾರೆ, ಆದರೆ ಆ ಬಿರುಕು ಸಣ್ಣ ಬಿರುಕು ಅಲ್ಲ ಅದು ನೇರವಾಗಿ ಪಾತಾಳದ ನಾಗಲೋಕಕ್ಕೆ ಸುರಂಗ ಮಾರ್ಗ ಎಂದು ಹನುಮನಿಗೆ ತಿಳಿಯುತ್ತದೆ, ಈ ರೀತಿ ನಾಗಲೋಕಕ್ಕೆ ತಲುಪಿ ವಾಸುಕಿಯ ಬಳಿ ಹೋಗುತ್ತಾರೆ, ಹನುಮನನ್ನು ನೋಡಿದ ವಾಸುಕಿ ನಾಗಲೋಕಕ್ಕೆ ಬಂದ ಕಾರಣ ಕೇಳಿದಾಗ ಬಿರುಕಿನಲ್ಲಿ ಬಿದ್ದ ಶ್ರೀರಾಮನ ಉಂಗುರ ದ ಬಗ್ಗೆ ತಿಳಿಸುತ್ತಾರೆ, ಅದನ್ನು ಹುಡುಕುತ್ತಾ ಇಲ್ಲಿಯವರೆಗೂ ಬಂದೆ ಎಂದು ಹೇಳುತ್ತಾರೆ, ಆಗ ವಾಸುಕಿ ಹನುಮಂತನನ್ನು ನಾಗಲೋಕದ ಮಧ್ಯಭಾಗಕ್ಕೆ ಕರೆದುಕೊಂಡು ಹೋಗಿ ಉಂಗುರಗಳ ರಾಶಿಯನ್ನು ತೋರಿಸಿ ಇಲ್ಲಿ ಶ್ರೀರಾಮನ ಉಂಗುರ ಸಿಗಬಹುದು ಒಮ್ಮೆ ಹುಡುಕಿ ಎಂದು ಹೇಳುತ್ತಾರೆ.

ಇದರಿಂದ ಕಿರಿಕಿರಿಗೆ ಒಳಗಾದ ಹನುಮಂತ ಇಷ್ಟು ದೊಡ್ಡ ರಾಶಿ ಉಂಗುರ ಗಳಲ್ಲಿ ರಾಮನ ಹುಂಗುರ ವನ್ನು ಹುಡುಕುವುದು ಹೇಗೆ ಎಂದು ಯೋಚನೆ ಮಾಡುತ್ತಾನೆ, ಹೀಗೆ ಯೋಚನೆ ಮಾಡುತ್ತಾ ಉಂಗುರಗಳ ರಾಶಿಗೆ ಕೈಹಾಕಿದ ಹನುಮ ಮೊದಲ ಉಂಗುರವನ್ನು ತೆಗೆದುಕೊಳ್ಳುತ್ತಾರೆ, ಅದರಲ್ಲಿ ಶ್ರೀರಾಮನ ಹೆಸರು ಇರುವುದನ್ನು ಕಂಡು ಹನುಮ ಆಶ್ಚರ್ಯಪಡುತ್ತಾರೆ, ಅರೆ ಮೊದಲ ಪ್ರಯತ್ನದಲ್ಲಿ ರಾಮನ ಗೊಂಗುರ ಸಿಕ್ಕಿ ಬಿಡುತ್ತಿಲ್ಲ ಅಂತ ಖುಷಿಪಡುತ್ತಾರೆ, ಆದರೆ ಹನುಮ ಮತ್ತೊಂದು ಉಂಗುರ ತೆಗೆದು ನೋಡಿದಾಗ ಅದರಲ್ಲಿ ಶ್ರೀರಾಮನ ಹೆಸರು ಇರುತ್ತದೆ, ನಂತರ ಅಲ್ಲಿದ್ದ ಉಂಗುರ ಗಳನ್ನೆಲ್ಲಾ ಪರೀಕ್ಷೆ ಮಾಡಿ ನೋಡಿದಾಗ ಎಲ್ಲಾ ಉಂಗುರದ ಮೇಲೂ ಶ್ರೀರಾಮನಾಮ ಬರೆದಿರುತ್ತದೆ.

ಇದನ್ನು ಕಂಡು ವಾಸುಕಿಯ ಕಡೆಗೆ ತಿರುಗಿ ಯಾಕೆ ಈ ರೀತಿ ಆಗುತ್ತಿದೆ ಎಂದು ಅನುಮಾನ ಪ್ರಶ್ನೆ ಮಾಡುತ್ತಾರೆ, ಆಗ ಉತ್ತರಿಸುವ ವಾಸುಕಿ ಭೂಮಿಯ ಮೇಲೆ ಬಂದ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಹೊರಡಲೇ ಬೇಕು, ಅದೇ ರೀತಿ ಶ್ರೀರಾಮನು ಭೂಮಿಯಿಂದ ಹೊರಡಬೇಕು ಎಂದು ಹೇಳಿದಾಗ ತಕ್ಷಣ ಹನುಮಂತನಿಗೆ ಎಲ್ಲವೂ ಅರ್ಥವಾಗುತ್ತದೆ, ಇದೆಲ್ಲಾ ಶ್ರೀರಾಮನಲ್ಲಿ ಎಂದು ತಕ್ಷಣಕ್ಕೆ ಅರ್ಥವಾಗುತ್ತದೆ, ಕಾಲದೇವ ಅಯೋಧ್ಯೆ ಗೆ ಪ್ರವೇಶವಾದ ಬೇಕು ಎಂಬುವ ಉದ್ದೇಶದಿಂದಲೇ ಈ ರೀತಿ ರಾಮ ಈ ರೀತಿ ಮಾಡಿದ್ದಾರೆ ಎಂಬುದು ತಿಳಿಯುತ್ತದೆ.

ಇದರಿಂದ ಹನುಮಂತನಿಗೆ ಬಹಳ ದುಃಖವಾಗುತ್ತದೆ, ಮತ್ತೆ ಅಯೋಧ್ಯೆ ಗೆ ಹೋದರೆ ಅಲ್ಲಿ ರಾಮ ಇರುವುದಿಲ್ಲ ರಾಮನೇ ಇಲ್ಲ ಅಂದಮೇಲೆ ಅಲ್ಲಿ ನಾನು ಏನು ಮಾಡಲಿ ಯಾವುದೇ ಕಾರಣಕ್ಕೂ ನಾನು ಇನ್ನು ಮುಂದೆ ಅಯೋಧ್ಯೆಗೆ ಹೋಗುವುದೇ ಇಲ್ಲ ಎಂದು ನಿರ್ಧಾರ ಮಾಡಿಬಿಡುತ್ತಾರೆ, ಹಾಗೂ ನಾಗ ಲೋಕದಿಂದ ಹನುಮಂತ ಹಾರಿ ಬಿಡುತ್ತಾರೆ, ನಂತರ ಹನುಮಂತ ಅಯೋಧ್ಯೆಗೆ ಹೋಗಲೇ ಇಲ್ಲ ನಂತರ ಹನುಮ ಎಲ್ಲಿ ಹೋದರೂ ಎನ್ನುವ ಬಗ್ಗೆ ಹಲವಾರು ಪೌರಾಣಿಕ ಕಥೆಗಳಿವೆ, ಹಾಗೂ ಕಲಿಯುಗದ ಅಂತ್ಯವಾಗುವ ವರೆಗೂ ಭೂಲೋಕದಲ್ಲಿ ಹನುಮಾ ಇರುತ್ತಾನೆ ಎನ್ನುವ ವಾದವನ್ನು ಕೆಲವರು ಮಾಡುತ್ತಾರೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here