ಈ ಯುವ ಪ್ರೇಮಿಗಳ ಪ್ರೀತಿಗೆ ಮನೆಯವರೇ ಖಳನಾಯಕರಾದಾಗ ನಡೆಯಿತು ಈ ದುರ್ಘಟನೆ!

  0
  1210

  ಸ್ನೇಹಿತರೇ ಪ್ರೀತಿ ಎಂದರೆ ಏನು ಅದಕ್ಕಿರುವ ಶಕ್ತಿಯಾದರೂ ಎಷ್ಟು, ಪ್ರೀತಿ ಎಂಬ ಸುಳಿಗೆ ಜೀವನದಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರೂ ಸಿಲುಕಿಕೊಳ್ಳುತ್ತಾರೆ ಯಾಕೆ ಈ ರೀತಿ, ಅಂತಹ ಆಸಕ್ತಿ ವಿಷಯವಾದರೂ ಪ್ರೀತಿಯಲ್ಲಿ ಏನಿದೆ, ಈ ಪ್ರಶ್ನೆಗಳಿಗೆ ಕವಿಗಳು ತಮ್ಮದೇ ಆದ ರೀತಿಯಲ್ಲಿ ಉತ್ತರಿಸುತ್ತಾರೆ ಆದರೆ ಇಂದಿನ ಸಾಮಾಜಿಕ ಜೀವನ ಶೈಲಿ ಇದಕ್ಕೆ ಬೇರೆಯದೇ ಅರ್ಥ ನೀಡುತ್ತದೆ ಅದೇನೇ ಇರಲಿ ಈ ಪ್ರೀತಿ ಬಲೆಗೆ ಬಿದ್ದ 18 ವರ್ಷದ ಯುವಕ ಮತ್ತು 16 ವರ್ಷದ ಯುವತಿಯ ನೈಜ ಘಟನೆಯನ್ನು ನಿಮ್ಮ ಮುಂದೆ ತಿಳಿ ಹೇಳುತ್ತೇವೆ.

  ಈ ನೈಜ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರದ ಸಣ್ಣ ಹಳ್ಳಿಯೊಂದರಲ್ಲಿ ಉದ್ದೇಶಪೂರ್ವಕವಾಗಿ ಹೆಸರುಗಳನ್ನು ಬದಲಾಯಿಸಲಾಗಿದೆ, 18 ವರ್ಷದ ಯುವಕ ಸುರೇಶ್ ದ್ವಿತೀಯ ಪಿಯುಸಿ ಓದುತ್ತಿದ್ದ, 16 ವರ್ಷದ ಹರ್ಷಿತಾ 10ನೇ ತರಗತಿ ಓದುತ್ತಿದ್ದಳು, ಇವರಿಬ್ಬರೂ ತಮ್ಮ ಶಾಲಾ ಕಾಲೇಜಿಗೆ ಹೋಗಿ ಬರಲು ಇದ್ದದ್ದು ಒಂದೇ ಬಸ್, ಅದರಲ್ಲಿ ಇಬ್ಬರ ಪ್ರಯಾಣ ಸಾಗುತ್ತಿತ್ತು ಆಗಲೇ ಇಬ್ಬರೂ ಒಬ್ಬರನ್ನೊಬ್ಬರು ನೋಡಿದ್ದು ಅಲ್ಲಿಂದಲೇ ಸ್ನೇಹ ಹುಟ್ಟಿದ್ದು ನಂತರ ಅದೇ ಸ್ನೇಹ ಪ್ರೀತಿಗೆ ತಿರುಗಿದ್ದು.

  ಇವರಿಬ್ಬರ ಪ್ರೀತಿ ಎಷ್ಟರಮಟ್ಟಿಗೆ ನೋಡುಗರನ್ನು ಆಕರ್ಷಣೆ ಮಾಡುತ್ತಿತ್ತು ಎಂದರೆ ಸುರೇಶನ ಸಹಪಾಠಿಗಳಿಗೂ ಮತ್ತು ಹರ್ಷಿತಾ ಸ್ನೇಹಿತೆಯರಿಗೂ ಇವರಿಬ್ಬರ ಪ್ರೀತಿಯ ಬಗ್ಗೆ ಚೆನ್ನಾಗಿ ತಿಳಿದಿತ್ತು, ಇವರೆಲ್ಲರೂ ಇವರ ಪ್ರೀತಿಗೆ ಚೆನ್ನಾಗಿರಲಿ ಎಂದು ಮನಸ್ಸಿನಲ್ಲಿಯೇ ಆ ಭಗವಂತನಿಗೆ ಅದಕ್ಕೆ ಸಲ್ಲಿಸುತ್ತಿದ್ದರು, ಇಬ್ಬರ ಪ್ರೀತಿ ನೋಡಿ ಇಬ್ಬರು ಓದು ಮುಗಿಸಿ ಮದುವೆಯಾಗಿ ಸುಖವಾಗಿ ಬಾಳುತ್ತಾರೆ ಅಂತೆಲ್ಲ ಆಸೆ ಇಟ್ಟುಕೊಂಡಿದ್ದರು, ಆದರೆ ವಿಧಿಯಾಟ ಬೇರೆ ಸ್ವಲ್ಪ ತಿಂಗಳುಗಳಲ್ಲಿ ಹರ್ಷಿತ ಮತ್ತು ಸುರೇಶನ ಮನೆಯ ಹಿರಿಯರಿಗೆ ಇವರ ಪ್ರೀತಿ ವಿಚಾರ ತಿಳಿಯಿತು.

  ಆ ಸಣ್ಣ ವಯಸ್ಸಿಗೆ ಪ್ರೀತಿ ಎಂಬ ಬಲೆಗೆ ಬಿದ್ದ ಮಕ್ಕಳನ್ನು ಯಾವ ಪೋಷಕರು ತಾನೇ ಪ್ರೋತ್ಸಾಹ ಮಾಡುತ್ತಾರೆ ನೀವೇ ಹೇಳಿ, ಇಬ್ಬರಿಗೂ ಕಟ್ಟೀಚರ ವನ್ನು ನೀಡಿ ಮತ್ತೆ ಒಬ್ಬರನ್ನೊಬ್ಬರು ಮಾತನಾಡಿಸಬಾರದು ಎಂಬ ಆಜ್ಞೆ ಮಾಡಿದರು, ಇಬ್ಬರ ಕುಟುಂಬಗಳ ನಡುವೆ ಭಾರತವು ನಡೆದೇ ಹೋಯಿತು, ಯುವ ಪ್ರೇಮಿಗಳು ಯಾವಾಗ ರಾಧಾಂತಕ್ಕು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ, ರೆಕ್ಕೆ ಬಲಿತ ಹಕ್ಕಿಗಳಂತೆ ಇಬ್ಬರೂ ಮನೆಬಿಟ್ಟು ಹರಿಬಿಟ್ಟರು, ದೊಡ್ಡಬಳ್ಳಾಪುರದ ಬಳಿ ಹೋಗಿ ನೆಲೆಸಿದರು ಅಲ್ಲಿಂದಲೇ ಮನೆಯವರಿಗೆ ದೂರವಾಣಿ ಕರೆ ಮಾಡಿ ನಾವಿಬ್ಬರೂ ಮದುವೆಯಾಗಿ ಚೆನ್ನಾಗಿ ಬಾಳುತ್ತೇವೆ ನಮ್ಮನ್ನು ತಡೆಯಬೇಡಿ ಎಂದು ತಿಳಿಸಿದರು.

  ಇವರ ಮಾತುಗಳನ್ನು ಕೇಳಿದ ಪೋಷಕರು ನಿಮಗಿನ್ನು ಚಿಕ್ಕ ವಯಸ್ಸು ಖಂಡಿತ ನಿಮ್ಮಿಬ್ಬರಿಗೂ ಸಮಯಕ್ಕೆ ಸರಿಯಾಗಿ ಮದುವೆ ನಾವೇ ಮಾಡಿಕೊಳ್ಳುತ್ತೇವೆ, ದಯಮಾಡಿ ಮನೆಗೆ ಹಿಂತಿರುಗಿ ಎಂದು ಮನವೊಲಿಸಲು ಯಶಸ್ವಿಯಾದ, ಒಲ್ಲದ ಮನಸ್ಸಿನಿಂದಲೇ ಇಬ್ಬರೂ ತಮ್ಮ ಮನೆಗಳನ್ನು ಸೇರಿದರು, ಆದರೆ ಒಂದು ದಿನ ಅದೇನಾಯಿತೋ ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ಇವರಿಬ್ಬರೂ ಅದೇ ಊರಿನ ಹೊರವಲಯದ ಜಮೀನಿನ ಹುಣಸೆ ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾದರೂ.

  ಅಷ್ಟೇ ಅಲ್ಲ ತಮ್ಮ ಡೆತ್ ನೋಟ್ ನಲ್ಲಿ ನಮ್ಮ ದೇಹಗಳನ್ನು ಪೋಸ್ಟ್ ಮಾರ್ಟಂ ಮಾಡಲು ಕೊಡಬೇಡಿ ಹಾಗೂ ಈಗಲಾದರೂ ಇಬ್ಬರ ದೇಹವನ್ನು ಒಂದೇ ಗುಂಡಿಯಲ್ಲಿ ಮಣ್ಣು ಮಾಡಿ ಎಂದು ಬೇಡಿಕೊಂಡರು ಗ್ರಾಮದವರು ಇದಕ್ಕೆಲ್ಲ ಬೆಲೆ ನೀಡಲಿಲ್ಲ ಕಾನೂನಿನ ಕ್ರಮಕ್ಕೆ ಇಬ್ಬರ ದೇಹವನ್ನು ನೀಡಿದರು, ನಂತರ ಬೇರೆಬೇರೆ ಗುಂಡಿಗಳಲ್ಲಿ ಇವರನ್ನು ಮಣ್ಣು ಮಾಡಿದರು, ಇವರಿಬ್ಬರ ಮೇಲೆ ಆಸೆ ಇಟ್ಟುಕೊಂಡಿದ್ದ ಇವರ ಸ್ನೇಹಿತರ ದೊಡ್ಡ ಕಂಡೆ ಅಂದು ಅಲ್ಲಿ ಜಮೆ ಆಗಿತ್ತು, ಎಲ್ಲರ ಕಣ್ಣಲ್ಲೂ ನೀರು ನಿರಾಸೆ ಮತ್ತು ದುಃಖ, ಈ ಆತುರದ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

  LEAVE A REPLY

  Please enter your comment!
  Please enter your name here