ಬೆಲ್ಲವನ್ನು ಬಳಸಿಕೊಂಡು ಮಾಟ ಮಂತ್ರ ಮತ್ತು ದುಷ್ಟ ಪರಿಣಾಮ ಪರಿಹರಿಸಿ ಕೊಳ್ಳಿ..!!

0
1522

ಮಾಟ ಎಂದರೆ ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು. ಅಲೌಕಿಕ ಸಾಧನೆಯ ಮೂಲಕ ಇತರರನ್ನು ಹಾನಿಮಾಡಬಹುದು ಎಂಬ ನಂಬಿಕೆ.

ನಿಮಗೇನಾದರೂ ಮಾಟ ಮಂತ್ರಗಳಿಗೆ ಬಲಿಯಾಗಿದ್ದೇನೆ ಅನ್ನಿಸಿದಲ್ಲಿ ಚಿಂತಿಸಬೇಡಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಬೆಲ್ಲದನ್ನ ನೈವೇದ್ಯ ಮಾಡಿ ದಂಪತಿಗಳಿಗೆ ಪ್ರಸಾದ ಕೊಟ್ಟು ಮನೆಯವರೆಲ್ಲರೂ ತಿಂದರೆ, ಸಮಸ್ತ ದುಷ್ಟ ಮಂತ್ರಗಳು ಕೆಲಸ ಮಾಡೋದಿಲ್ಲ, ಮಾಟ ಮಂತ್ರ ತಟ್ಟೋದಿಲ್ಲ.

ನವಗ್ರಹ ತಾಂಬೂಲದಲ್ಲಿ ಬೆಲ್ಲದನ್ನ ಇಟ್ಟು ಪೂಜೆಯನ್ನು ಮಾಡಿ, ಬೆಲ್ಲದನ್ನ ನೈವೇದ್ಯ ಮಾಡಿ, ತಾಂಬೂಲದೊಡನೆ ದಾನ ಮಾಡಿದರೆ, ನಿಮ್ಮ ಕಷ್ಟಗಳು ಬಹಳ ಬೇಗ ನಿವಾರಣೆಯಾಗಿ ಸುಖವಾಗಿರುತ್ತೀರಿ.

ಜೊತೆಯಲ್ಲಿ ಇದನ್ನು ಓದಿ ದೇವರ ಫೋಟೋ ಇರುವ ಬಟ್ಟೆಯನ್ನು ಧರಿಸಬಾರದು ಏಕೆ ಅಂತ ಒಮ್ಮೆ ಓದಿ.

ಶ್ರೀ ಗಣೇಶ, ಶ್ರೀರಾಮ, ಶ್ರೀಕೃಷ್ಣ, ಶ್ರೀಲಕ್ಷ್ಮೀ ಅಥವಾ ಓಂ ಚಿಹ್ನೆಗಳು ಇರುವಂತಹ ಬಟ್ಟೆಗಳನ್ನು ನಾವು ಧರಿಸಿದ ನಂತರ ಬಟ್ಟೆಯ ಮೇಲಿರುವ ದೇವರು ನಮ್ಮನ್ನು ಕಾಪಾಡುವುದಿಲ್ಲ. ಇಂತಹ ಬಟ್ಟೆಗಳನ್ನು ಹಾಕಿಕೊಂಡು ಮಲಗುತ್ತೇವೆ, ಕೂರುತ್ತೇವೆ ಕೆಲಸ ಮಾಡುತ್ತೇವೆ, ಇದರಿಂದ ದೇವರ ಮೇಲೆ ಧೂಳು, ಕೊಳೆ ಬರುತ್ತವೆ.

ನಂತರ ಬಟ್ಟೆ ಒಗೆಯಲು ಅದನ್ನು ಕಲ್ಲಿನ ಮೇಲೆ ಉಜ್ಜುತ್ತೇವೆ, ಬ್ರಶ್‌ನಿಂದ ಉಜ್ಜುತ್ತೇವೆ ಅಥವಾ ವಾಷಿಂಗ್ ಮೆಶಿನ್‌ಗೆ ಹಾಕಿ ನಮ್ಮ ದೇವರನ್ನು ನಾವೇ ತಿರುಗಿಸುತ್ತೇವೆ, ಒಣಗಿಸಲು ಡ್ರೈಯರ್‌ಗೆ ಹಾಕಿ ಕೊನೆಗೆ ಬಿಸಿಲಿನಲ್ಲಿ ನೇತಾಡಿಸುತ್ತೇವೆ, ಇದರಿಂದ ದೇವರ ಕೃಪೆ ಸಿಗಬಹುದೇ? ನಾವು ಹಾಕಿರುವ ಉದ್ದೇಶ ನಮಗೆ ಸಫಲತೆ ಬೇಕು ಆದ್ರೆ ಸಿಗಬಹುದೇ.?

ದೇವರಲ್ಲಿ ಭಕ್ತಿಯಿರಬೇಕು, ಧರ್ಮದ ಮೇಲೆ ಶ್ರದ್ಧೆಯಿರಬೇಕು, ಆದರೆ ಅದು ಈ ರೀತಿಯಲ್ಲಿ ಆಗಬಾರದು. ಹಾಗಾಗಿ ದಯವಿಟ್ಟು ತಮ್ಮ ಸಂಬಂಧಿಕರು, ಸ್ನೇಹಿತರು ಹಾಗೂ ಎಲ್ಲ ಹಿಂದೂ ಬಾಂಧವರಿಗೂ ಈ ರೀತಿ ಮಾಡದಂತೆ ವಿಚಾರ ಹಂಚಿಕೊಳ್ಳಿ.
ಭೂತ, ಪಿಶಾಚಿ, ಮಾಂತ್ರಿಕರ ಚಿತ್ರ, ತಲೆ ಬುರುಡೆ, ಎಲುಬು ಮುಂತಾದ ಚಿತ್ರಗಳಿರುವ ಬಟ್ಟೆಗಳಲ್ಲಿ ಅಂತಹ ಸ್ಪಂದನಗಳೇ ಆಕರ್ಷಿಸುತ್ತವೆ ಮತ್ತು ನಮಗೆ ತಿಳಿಯದೇ ಮನಸ್ಸು ಅಸ್ವಸ್ಥವಾಗುವುದು, ಕಿರಿಕಿರಿಯೆನಿಸುವುದು, ಸಿಟ್ಟು, ದ್ವೇಷ, ಹೊಡೆದಾಟ ಮುಂತಾದ ಅನೇಕ ವಿಕಾರಗಳು ಉಂಟಾಗುತ್ತವೆ. ಇಂತಹ ಬಟ್ಟೆಗಳಲ್ಲದೇ ಯಾವುದೇ ಕ್ರೀಡಾಪಟುವಾಗಲಿ, ನಟ-ನಟಿಯರದ್ದಾಗಲಿ ಚಿತ್ರವಿರುವ ಬಟ್ಟೆಗಳನ್ನು ಹಾಕಬೇಡಿ.

ಪ್ರತಿಯೊಬ್ಬ ವ್ಯಕ್ತಿಯಿಂದ ಅವನ ವ್ಯಕ್ತಿತ್ವಕ್ಕೆ ತಕ್ಕ ಸ್ಪಂದನಗಳು ಬರುವುದರಿಂದ ಇಂತಹ ಯಾವುದೇ ಬಟ್ಟೆಗಳನ್ನು ಹಾಕದೇ ಸಾತ್ತ್ವಿಕ ಬಟ್ಟೆಗಳನ್ನೇ ಧರಿಸಿ. ಯಾರಾದರೂ ಇಂತಹ ಬಟ್ಟೆಗಳನ್ನು ಧರಿಸಿದ್ದರೆ ಅವರಿಗೆ ಈ ವಿಷಯಗಳನ್ನು ತಿಳಿಸಿಹೇಳಿ.

LEAVE A REPLY

Please enter your comment!
Please enter your name here