ಕಿಡ್ನಿ ಸ್ಟೋನ್ ಕರಗಿಸಲು ಆಪರೇಷನ್ ಮಾಡಿಸಿದೆ ಈ ವಿಧಾನ ಮಾಡಿ ನೋಡಿ

0
3382

ಕಿಡ್ನಿ ಸ್ಟೋನ್ ಸಮಸ್ಯೆ ಹತ್ತರಲ್ಲಿ ಇಬ್ಬರಿಗೆ ಸಾಮಾನ್ಯವಾಗಿ ಕಾಡುವಂತಹ ಕಾಯಿಲೆ, ಕಿಡ್ನಿ ಸ್ಟೋನ್ ಸಮಸ್ಯೆಗೆ ಆಗಿ ನೀವು ಆಸ್ಪತ್ರೆಯ ಮೊರೆ ಹೋದರೆ, ಆಪರೇಶನ್ ಮಾಡಿಸಬೇಕು ಎಂಬ ಸಲಹೆಯನ್ನು ಸಾಮಾನ್ಯವಾಗಿ ಪಡೆಯುತ್ತೀರಿ, ಕಿಡ್ನಿ ಸ್ಟೋನ್ ಆಪರೇಷನ್ ಬಹಳ ವೆಚ್ಚವನ್ನು ತಗಲುತ್ತದೆ ಹಾಗೂ ಆಪರೇಷನ್ ಮಾಡಿದ ನಂತರವೂ ನಿಮ್ಮ ಕಿಡ್ನಿಯಲ್ಲಿ ಕಲ್ಲುಗಳ ಶೇಖರಣೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಹಾಗಾದರೆ ಕಿಡ್ನಿ ಸ್ಟೋನ್ ಸಮಸ್ಯೆಗೆ ಶಾಶ್ವತ ಹಾಗೂ ಕಡಿಮೆ ವೆಚ್ಚದ ಪರಿಹಾರಗಳು ಯಾವುದು ಇಲ್ಲವೇ ಎಂಬ ನಿಮ್ಮ ಪ್ರಶ್ನೆಗೆ ಇಂದು ಸರಳ ಮನೆಮದ್ದು ಹಾಗೂ ಸುಲಭ ಪ್ರಕ್ರಿಯೆಗಳನ್ನು ತಿಳಿಸುತ್ತೇವೆ.

ಅತಿ ಮುಖ್ಯವಾಗಿ ನಾವು ಸೇವಿಸುವ ಸೋಡಾ, ತಂಪು ಪಾನೀಯಗಳು, ಕಿಡ್ನಿಗಳ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ, ತಂಪು ಪಾನೀಯದಲ್ಲಿ ಇರುವ ಆಸಿಡ್ ದೇಹದ ಮೂಳೆಗಳಲ್ಲಿ ಕ್ಯಾಲ್ಶಿಯಂ ಹೀರಿಕೊಂಡು ಕಿಡ್ನಿಯಲ್ಲಿ ಕಲ್ಲು ಕಟ್ಟುವಂತೆ ಮಾಡುತ್ತವೆ, ಆದ್ದರಿಂದ ತಂಪು ಪಾನೀಯಗಳನ್ನು ಯಾವುದೇ ಕಾರಣಕ್ಕೂ ಕುಡಿಯಬೇಡಿ.

ಪ್ರತಿನಿತ್ಯ ಶುದ್ಧ ಕುಡಿಯುವ ನೀರನ್ನು ಕಡಿಮೆ ಎಂದರೂ ಸರಿ ಸುಮಾರು 4 ಲಿಟರ್ ನೀರು ಕುಡಿಯುವುದು ಒಳ್ಳೆಯದು, ನೀರು ಕುಡಿಯುವುದು ಮಾತ್ರ ಮುಖ್ಯವಲ್ಲ ಅದರ ಜೊತೆಯಲ್ಲಿ ಮೂತ್ರ ವಿಸರ್ಜನೆಯ ಬಗ್ಗೆಯೂ ಗಮನ ಕೊಡಬೇಕು, ಮೂತ್ರವನ್ನು ಅತಿಯಾಗಿ ತಿಳಿಯಬೇಡಿ.

ಸಾತ್ವಿಕ ಆಹಾರ ಗಳು ಅಂದರೆ ಹಸಿ ತರಕಾರಿಗಳು ನಿಮ್ಮ ಕಿಡ್ನಿಗಳನ್ನು ಆರೋಗ್ಯವಂತವಾಗಿ ಇಡಲು ಸಹಕರಿಸುತ್ತದೆ, ನಿಮ್ಮ ದೈನಂದಿನ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಸಿ, ಸಕ್ಕರೆ ಹಾಗೂ ಉಪ್ಪಿನ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಿ, ಮಸಾಲೆ ಪದಾರ್ಥಗಳಿಂದ ದೂರ ಇರುವುದು ಕಷ್ಟವಾದರೂ ಎಷ್ಟು ಸಾಧ್ಯವೋ ಅಷ್ಟು ದೂರ ಬಿಟ್ಟುಬಿಡಿ.

ಮಜ್ಜಿಗೆ ತಾಜಾ ಮೊಸರು ನಾಟಿ ಹಸುವಿನ ಹಾಲು ಪಪ್ಪಾಯಿ ಸೇಬು ಬಾಳೆಹಣ್ಣು ಮಾವಿನ ಹಣ್ಣು ನುಗ್ಗೆ ಕಾಯಿ ಹುರಳಿ ಕಾಯಿ ಕ್ಯಾರೆಟ್ ಎಳನೀರು, ಬಾರ್ಲಿ ನೀರು ಹೆಚ್ಚಾಗಿ ಬಳಕೆ ಮಾಡಿ.

ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡಾಗ ಬಟಾಣಿ ಉದ್ದಿನ ಬೇಳೆ ಆಲೂಗಡ್ಡೆ ಎಲೆಕೋಸು ಬಸಲೆ ಸೊಪ್ಪು ಬದನೆಕಾಯಿ ಹುಳಿ ಮೊಸರು ಕೆಂಪು ಹಸಿ ಮೆಣಸಿನಕಾಯಿ ಮಾಂಸ ಹಾಗು ಮಧ್ಯದಿಂದ ದೂರ ಇರುವುದು ಒಳ್ಳೆಯದು, ಇವು ಕಿಡ್ನಿಯಲ್ಲಿ ಕಲ್ಲುಗಳ ಬೆಳವಣಿಗೆಯನ್ನು ಹೆಚ್ಚು ಮಾಡುತ್ತದೆ.

ಬ್ಲಾಕ್ ಬೀನ್ಸ್ ಮತ್ತು ಬಾಳೆ ಹೂವು ಕಿಡ್ನಿಯ ಕಲ್ಲನ್ನು ಕರಗಿಸುವ ಶಕ್ತಿಯನ್ನು ಹೊಂದಿದೆ, ಇವುಗಳನ್ನು ಸಾಧ್ಯವಾದಷ್ಟು ಹೆಚ್ಚು ಸೇವಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ದೂರವುಳಿಯಬಹುದು, ಅದರಲ್ಲೂ ಬಾಳೆದಿಂಡಿನ ರಸ ಕುಡಿಯಿರಿ ಹಾಗೂ ಇದರ ಪಲ್ಯ ಸೇವನೆ ಮಾಡಿ, ಎರಡು ದಿನಕ್ಕೆ ಒಮ್ಮೆಯಾದರೂ ಬ್ಲಾಕ್ ಬೀನ್ಸ್ ಬಳಸಿದ ಅಡುಗೆಯನ್ನು ತಿನ್ನಬೇಕು.

LEAVE A REPLY

Please enter your comment!
Please enter your name here