ಮೆಂತ್ಯೆ ಕಾಳು ನೆನೆಸಿದ ನೀರು ಕುಡಿಯುವುದರಿಂದ ಆಗುವ ಉಪಯೋಗಗಳು.

0
2065

ಮೆಂತ್ಯೆ ಕಾಳನ್ನು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ನೀರಿಗೆ ಎರಡು ಚಮಚ ಹಾಕಿ ನೆನೆಯಲು ಬಿಟ್ಟುಬಿಡಿ, ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಮೆಂತೆ ನೆನೆಸಿದ ನೀರನ್ನು ಕುಡಿಯುವುದರಿಂದ ಇರುವ ಅತ್ಯದ್ಭುತ ಆರೋಗ್ಯ ಲಾಭಗಳ ಬಗ್ಗೆ ಇಂದು ತಿಳಿಸುತ್ತೇವೆ.

ಮೆಂತ್ಯೆ ಕಾಳಿನಲ್ಲಿ ಹಲವಾರು ಆರೋಗ್ಯ ಲಾಭ ಇರುವುದನ್ನು ಭಾರತೀಯ ಆಯುರ್ವೇದ ಸ್ಪಷ್ಟಪಡಿಸಿದೆ, ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದರಲ್ಲಿದೆ, ಅಂತಹ ಆರೋಗ್ಯ ಲಾಭಗಳ ಬಗ್ಗೆ ಇಂದು ತಿಳಿಯೋಣ.

ತೂಕ ಕಳೆದುಕೊಳ್ಳಲು ಇಚ್ಛಿಸುವವರು ಮೆಂತ್ಯ ಕಾಳನ್ನು ನೆನೆಸಿದ ನೀರನ್ನು ಪ್ರತಿದಿನ ಮುಂಜಾನೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಜೊತೆಯಲ್ಲಿ ಪ್ರತಿ ದಿನ ಲಘು ವ್ಯಾಯಾಮವನ್ನು ಮಾಡಿ ಅಥವಾ ವಾಕಿಂಗ್ ಮಾಡುವ ಅಭ್ಯಾಸ ರೂಡಿ ಮಾಡಿಕೊಳ್ಳಿ, ಇದರಿಂದ ಬಹುಬೇಗ ನಿಮ್ಮ ದೇಹದಲ್ಲಿನ ಬೇಡದ ಕೊಬ್ಬುಗಳು ಕರಗುತ್ತದೆ.

ಅಷ್ಟೇ ಅಲ್ಲದೆ ದೇಹದ ತೂಕ ಹೆಚ್ಚಾಗಲು ಇರುವ ಮತ್ತೊಂದು ಸಮಸ್ಯೆ ಜೀರ್ಣ ಕಾರ್ಯ ವ್ಯವಸ್ಥೆ, ಮೆಂತ್ಯ ಕಾಳಿನ ನೀರು ದೇಹದ ಜೀರ್ಣ ವ್ಯವಸ್ಥೆಗೆ ಬೇಕಾದ ಅಗತ್ಯಗಳನ್ನು ಪೂರೈಸುತ್ತದೆ ಹಾಗೂ ಉರಿಯೂತ ಶಮನ ಮಾಡುತ್ತದೆ ಇದರಿಂದ ಹೊಟ್ಟೆ ಸುತ್ತಲಿನ ಕೊಬ್ಬು ಬಹು ಬೇಗ ಕರಗುತ್ತದೆ.

ಮೆಂತೆ ಕಾಲಿನಲ್ಲಿ ಪೊಟ್ಯಾಶಿಯಂ ಹಾಗೂ ಗ್ಲಕ್ತೋಮನ್ನನ್ ಅಂಶವು ಹೇರಳವಾಗಿದ್ದು ಇದರಿಂದ ದೇಹದ ರಕ್ತದೊತ್ತಡ ಸಮಸ್ಯೆ ನಿವಾರಿಸುತ್ತದೆ.

ಕಿಡ್ನಿ ಕಲ್ಲುಗಳು ಸಮಸ್ಯೆ ಇದ್ದವರಿಗೆ ಅಂತೂ ಮೆಂತೆ ಕಾಳಿನ ನೀರು ಅಮೃತವೇ ಸರಿ, ಪ್ರತಿದಿನ ತಪ್ಪದೆ ಮೆಂತೆ ಕಾಳಿನ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕಿಡ್ನಿಯಲ್ಲಿ ಕಲ್ಲುಗಳ ಉದ್ಭವಿಸುವುದಿಲ್ಲ.

ಮೆಂತ್ಯ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಕರುಗಳಿಂದ ತೆಗೆದು ಕ್ಯಾನ್ಸರ್ ಬರದಂತೆ ತಡೆಯುತ್ತದೆ.

ದೇಹದ ರಕ್ತ ಸಕ್ಕರೆ ಅಂಶವನ್ನು ಹೆಚ್ಚು ಹೀರಿಕೊಳ್ಳುದಂತೆ ಮೆಂತ್ಯ ನೋಡಿಕೊಳ್ಳುತ್ತದೆ ಇದರಿಂದ ಮಧುಮೇಹದಂತಹ ಸಮಸ್ಯೆಗಳು ದೂರ ಉಳಿದು ಬಿಡುತ್ತದೆ.

ಮೆಂತ್ಯ ಕಾಳಿನ ಆರೋಗ್ಯ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here